Advertisement

ಬಸವ ಮಹಾಮನೆಯಲ್ಲಿ ಕಲ್ಯಾಣ ಪರ್ವ; ಡಾ|ಉಮೇಶ ಜಾಧವ

05:43 PM Oct 10, 2022 | Team Udayavani |

ಬಸವಕಲ್ಯಾಣ: ಶರಣರು ಕಾಯಕಕ್ಕೆ ಮಹತ್ವ ನೀಡಿ ದಾಸೋಹಕ್ಕೆ ಆದ್ಯತೆ ನೀಡಿದ ಭೂಮಿ ಇದಾಗಿದೆ. ಈ ನೆಲ ಶ್ರೇಷ್ಠ ನೆಲವಾಗಿದೆ. ಕಾಶಿ, ಅಯೋಧ್ಯೆ ಅಭಿವೃದ್ಧಿ ಹೊಂದಿದ ಸ್ಥಾನದಲ್ಲಿವೆ. ಬಸವಕಲ್ಯಾಣ ಕೂಡಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು. ಬಸವ ಕಲ್ಯಾಣದಲ್ಲಿ ವಿಮಾನ ವಿಲ್ದಾಣ ಸ್ಥಾಪಿಸಿದರೆ ಜನರಿಗೆ ಇಲ್ಲಿಗೆ ಆಗಮಿಸಲು ಅನುಕೂಲವಾಗಲಿದೆ ಎಂದು ಕಲಬುರಗಿ ಸಂಸದ ಡಾ| ಉಮೇಶ ಜಾಧವ ಹೇಳಿದರು.

Advertisement

ನಗರದ ಬಸವ ಮಹಾಮನೆಯಲ್ಲಿ ಬಸವ ಧರ್ಮ ಪೀಠದಿಂದ ಹಮ್ಮಿಕೊಂಡ 21ನೇ ಕಲ್ಯಾಣ ಪರ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿದ್ದಾರೆ. ಈ ಧರ್ಮ ವಿಶ್ವವ್ಯಾಪ್ತಿಯಲ್ಲಿ ಪಸರಿಸುವ ಕೆಲಸ ನಿರಂತರವಾಗಿ ನಡೆಯಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಅನುಭವ ಮಂಟಪ ಟ್ರಸ್ಟ್‌ನ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಲಿಂಗಾಯತರಿಗೆ ಒಂದು ಕಡೆ ಕೂತು ಸಭೆ ನಡೆಸಲು ಹಾಗೂ ಕೂಡಲ ಸಂಗಮ ಹಾಗೂ ಬಸವಕಲ್ಯಾಣ ಲಿಂಗಾಯತರ ತೀರ್ಥ ಹಾಗೂ ಪವಿತ್ರ ಕ್ಷೇತ್ರಗಳಾಗಿವೆ ಎಂದು ತೋರಿಸಿಕೊಟ್ಟವರು ಲಿಂ| ಲಿಂಗಾನಂದ ಅಪ್ಪಾಜಿ ಹಾಗೂ ಲಿಂ| ಡಾ| ಮಾತೆ ಮಹಾದೇವಿ ಅವರಾಗಿದ್ದಾರೆ ಎಂದರು.

ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಲಿಂ| ಡಾ| ಮಾತೆ ಮಹಾದೇವಿ ಬಸವಕಲ್ಯಾಣದಲ್ಲಿ ಕಲ್ಯಾಣ ಪರ್ವ ಹಾಗೂ ಕೂಡಲ ಸಂಗಮದಲ್ಲಿ ಶರಣ ಮೇಳ ಕಾರ್ಯಕ್ರಮವು ಬಸವ ಧರ್ಮ ಪೀಠದಿಂದ ಆರಂಭಿಸಿದ್ದಾರೆ. ಹೀಗಾಗಿ ಮಾತಾಜಿ ಅವರು ಬದುಕಿದ್ದ ಸಮಯದಲ್ಲಿ ಕೈಗೊಂಡ ಕಾರ್ಯಗಳು ಅದ್ಭುತವಾಗಿವೆ. ಅವರು ಹೇಳಿದ ಹಾಗೆ ಸಮಾಜ ಸಾಗಿದರೆ ಸುಧಾರಣೆಗೊಂಡು ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗುತ್ತದೆ ಎಂದರು. ಬೀದರನ ಶಾಹೀನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ| ಅಬ್ದುಲ್‌ ಖದೀರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಬೀದರನ ಉದ್ಯಮಿ ಗುರುನಾಥ ಕೊಳ್ಳೂರ ಸನ್ಮಾನ ಸ್ವೀಕರಿಸಿದರು. ಬೆಂಗಳೂರನ ಹಿರಿಯ ಸಾಹಿತಿ ಟಿ.ಆರ್‌. ಚಂದ್ರಶೇಖರಯ್ನಾ ಅವರು ಕಲ್ಯಾಣ- ಮಾನವೀಯತೆಯ ಪುಣ್ಯಕ್ಷೇತ್ರ ಎಂಬ ವಿಷಯದ ಮೇಲೆ ಅನುಭಾವ ನೀಡಿದರು.

Advertisement

ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಡಾ| ಮಾತೆ ಗಂಗಾದೇವಿ, ಹೈದ್ರಾಬಾದನ ಬಸವ ಮಂಟಪದ ಶ್ರೀ ಅನಿಮಿಶಾನಂದ ಸ್ವಾಮೀಜಿ, ಜಗದ್ಗುರು ಶ್ರೀ ಬಸವಕುಮಾರ ಸ್ವಾಮೀಜಿ, ಶ್ರೀ ಮಹಾಲಿಂಗ ಸ್ವಾಮೀಜಿ, ಕಲ್ಯಾಣ ಪರ್ವ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ರಾಜೇಂದ್ರಕುಮಾರ ಗಂದಗೆ, ಸುರೇಶ ಸ್ವಾಮಿ, ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ ರಗಟೆ, ಉಪಾಧ್ಯಕ್ಷ ಅಶೋಕ ನಾಗರಾಳೆ, ಆರ್‌.ಜಿ. ಶಟಗಾರ, ಕಿರಣ
ಚಾಕೋತೆ, ಸಿದ್ರಾಮಪ್ಪ ಲದ್ದೆ, ವಿರೂಪಾಕ್ಷ ಗಾದಗಿ, ಬಸವರಾಜ ಪಾಟೀಲ ಶಿವಪೂರ ಮತ್ತಿತರರು ಇದ್ದರು. ಬೀದರನ ನೃತ್ಯಾಂಗನ ನಾಟ್ಯ ಮತ್ತು ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ವಚನಗಳ ಹಾಡಿನ ನೃತ್ಯ ಕಾರ್ಯಕ್ರಮ ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next