Advertisement
ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಧಾಟಿಸಿ ಮಾತನಾಡಿದ ಅವರು, ಮುಂಬೈ ಕರ್ನಾಟಕ ಹೆಸರನ್ನು ಕಿತ್ತೂರು ಕರ್ನಾಟಕವಾಗಿ ಘೋಷಿಸಿದ್ದೇವೆ. ಮುಂದಿನ ಬಜೆಟ್ ನಲ್ಲೂ ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಡಲಿದ್ದೇವೆ. ಈ ಬಗ್ಗೆ ಮುಂದಿನ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಿದ್ದೇವೆ. ಕಲ್ಯಾಣ ಕರ್ನಾಟಕದ ಅಭಿವೃದ್ದಿ ನೀಡುವ ಅನುದಾನವನ್ನು 3 ಸಾವಿರ ಕೋಟಿಗೆ ಏರಿಸಲಿದ್ದೇವೆ ಎಂದರು.
Related Articles
Advertisement
ಸರ್ಕಾರದ 30 ಸೇವೆಗಳನ್ನು ಮನೆ ಮನೆಗೆ ತಲುಪಿಸುವ ಯೋಜನೆಯನ್ನು ನ.1ರಿಂದಲೇ ಜಾರಿಗೆ ತರುತ್ತಿದ್ದೇವೆ. ಕನ್ನಡಕ್ಕೆ ಎಲ್ಲದರಲ್ಲೂ ಅಗ್ರಸ್ಥಾನ ನೀಡಲಿದ್ದೇವೆ. ನಮ್ಮ ಭವ್ಯ ಭವಿಷ್ಯ ಕನ್ನಡದಲ್ಲೇ ಆಗಬೇಕು. ಕರ್ನಾಟಕ ರಾಜ್ಯೋತ್ಸವ ಮುಂದೆ ಕನ್ನಡಿಗರ ಜನೋತ್ಸವವ ಆಗಬೇಕು. ಇದಕ್ಕೆ ಕನ್ನಡಿಗರ ಬದುಕು ಇನ್ನಷ್ಟು ಸುಧಾರಿಸಬೇಕು ಎಂದರು.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಾಲೆಗಳಲ್ಲಿ ಕನ್ನಡ ಇನ್ನಷ್ಟು ವ್ಯಾಪಕವಾಗಿ ಬಳಕೆ ಮಾಡಲಿದ್ದೇವೆ. ಶಿಕ್ಷಕರು, ಆಡಳಿತಮಂಡಳಿ ಮಕ್ಕಳಲ್ಲಿ ಕನ್ನಡ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಶಾಸಕ ರಿಜ್ವಾನ್ ಅರ್ಹದ್ ಮಾತನಾಡಿ, ತ್ರಿಭಾಷ ಸೂತ್ರ ಅಡಿಯಲ್ಲಿ ಹಿಂದು ಭಾಷೆ ಕಲಿಕೆಗೆ ವಿರೋಧವಿಲ್ಲ. ಆದರೇ, ಹಿಂದಿ ಹೇರಿಕೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.