Advertisement
ಕೆಡಿಎಂಸಿ ಮಿತಿಯಲ್ಲಿನ ಕೋವಿಡ್ ಪ್ರಕರಣಗಳ ದೈನಂದಿನ ಪಾಸಿಟಿವ್ ಪ್ರಮಾಣವು ಕಳೆದ ವಾರದಿಂದ ಶೇ. 4.78ರಷ್ಟು ಹೆಚ್ಚಾಗಿದೆ. ಫೆ. 1ರಂದು ಶೇ. 3.57ರಷ್ಟಿದ್ದ ಪಾಸಿಟಿವ್ ಪ್ರಮಾಣವು ಈಗ ನಾಗರಿಕ ಆರೋಗ್ಯ ಇಲಾಖೆಯ ಪ್ರಕಾರ ಶೇ. 8.35ರಷ್ಟಿದೆ. ಅಂತೆಯೇ ಸಕ್ರಿಯ ಪ್ರಕರಣಗಳ ಪ್ರಮಾಣವು ಶೇ. 0.85ರಷ್ಟು ಹೆಚ್ಚಾಗಿದೆ. ಒಂದು ಕಟ್ಟಡವು ಒಂದು ಸಮಯದಲ್ಲಿ ಐದು ಕೋವಿಡ್ ರೋಗಿಗಳನ್ನು ಹೊಂದಿದ್ದರೆ, ಕಟ್ಟಡವನ್ನು ಸೀಲ್‌ಡೌನ್ ಮಾಡಲಾಗುವುದಲ್ಲದೆ, ಆ ಕಟ್ಟಡಗಳಲ್ಲಿನ ಜನರ ಚಲನೆಯನ್ನು 14 ದಿನಗಳವರೆಗೆ ನಿರ್ಬಂಧಿಸಲಾಗುತ್ತದೆ. ಕಲ್ಯಾಣ್‌ನ ಕೇಟೆಮನಿವಲಿ, ವಿಜಯನಗರ, ಆಗ್ರಾ ರಸ್ತೆ ಮತ್ತು ಡೊಂಬಿವಲಿಯ ಠಾಕೂರ್ಲಿ 90 ಫೀಟ್ ರಸ್ತೆಯಲ್ಲಿ 17 ಕಟ್ಟಡಗಳಿಗೆ ಮೊಹರು ಹಾಕಿದ್ದೇವೆ. ಕಟ್ಟಡದ ನಿವಾಸಿಗಳ ಮೇಲೆ ನಿಗಾ ಇಡುತ್ತೇವೆ ಎಂದು ಕೆಡಿಎಂಸಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
Advertisement
ಕಲ್ಯಾಣ್-ಡೊಂಬಿವಲಿ: 17 ಕಟ್ಟಡ ಸೀಲ್‌ಡೌನ್
01:27 AM Feb 27, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.