Advertisement
ಮಂಗಳೂರು – ಸೋಲಾಪುರ ರಾ. ಹೆ. 169 ಹಾದು ಹೋಗುವ ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಕಲ್ಸಂಕದಲ್ಲಿ ಭಾರೀ ಗಾತ್ರದ ಶಿಲಾಬಂಡೆಗಳಿಂದಲೇ ಕಟ್ಟಲಾಗಿದ್ದ ಕಿರು ಸೇತುವೆ ನಿಧಾನವಾಗಿ ಕುಸಿಯುವ ಸ್ಥಿತಿಗೆ ತಲುಪಿತ್ತು. ಇಲ್ಲೊಂದು ಹೊಸ ಸೇತುವೆ ನಿರ್ಮಾಣವಾಗಬೇಕೆಂಬ ಜನಾಭಿಪ್ರಾಯವನ್ನು ಉದಯವಾಣಿ 2020ರ ಡಿ. 6ರಂದು ಪ್ರಕಟಿಸಿತ್ತು. ಇದಕ್ಕೆ ಶಾಸಕ ಉಮಾನಾಥ ಎ. ಕೋಟ್ಯಾನ್ ಅವರ ವಿನಂತಿ ಮೇರೆಗೆ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಸಕಾರಾತ್ಮಕವಾಗಿ ಸ್ಪಂದಿಸಿದ ಪರಿಣಾಮವಾಗಿ, ಕೇಂದ್ರ ಸರಕಾರದ 2020-21 ಸಾಲಿನ ಮಳೆ ಹಾನಿ ದುರಸ್ತಿಯಡಿ ಲಭಿಸಿದ ಅನುದಾನದಲ್ಲಿ ನೂತನ ಸೇತುವೆ ನಿರ್ಮಾಣಗೊಳ್ಳುವಂತಾಗಿದೆ. ಸುರಕ್ಷ ತಡೆಬೇಲಿಯೊಂದಿಗೆ ಒಂದು ಮೀ. ಕಾಲ್ದಾರಿ ಸಹಿತ 10ಮೀ ಅಗಲ, 7 ಮೀ. ಉದ್ದದ ಈ ಸೇತುವೆ ಎರಡೂವರೆ ಮೀ. ಕ್ಲೀಯರ್ ವೆಂಟ್ ಸಹಿತ ಸದೃಢವಾಗಿ ಮೈದಳೆದಿದೆ. ಈ ವರ್ಷ ಜ. 31ರಂದು ಶಾಸಕ ಉಮಾನಾಥ ಕೋಟ್ಯಾನ್ ಅವರು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದು ಮುಗ್ರೋಡಿ ಕನ್ಸ್‌ಟ್ರಕ್ಷನ್‌ನವರು ನಿಗದಿತ ಒಂದು ತಿಂಗಳ ಒಳಗಾಗಿ ನಿರ್ಮಾಣ ಕಾಮಗಾರಿ ಮುಗಿಸಿದ್ದಾರೆ.
ಗುರುವಾರ ಬೆಳಗ್ಗೆ 10ಕ್ಕೆ ಶಾಸಕ ಉಮಾನಾಥ ಕೋಟ್ಯಾನ್, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಸದಸ್ಯರು, ಮುಖ್ಯಾ ಧಿ ಕಾರಿ ಇಂದೂ ಎಂ. ಸಹಿತ ಎಲ್ಲರ ಉಪಸ್ಥಿತಿಯಲ್ಲಿ ಕಿರುಸೇತುವೆ ಯನ್ನು ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ :ಎಣ್ಣೆಹೊಳೆ ಏತ ನೀರಾವರಿ ಯೋಜನೆಯ ಪೈಪ್‌ಲೈನ್ ಅವಾಂತರ : ಕುಡಿಯುವ ನೀರು, ಧೂಳಿನ ಸಮಸ್ಯೆ