Advertisement
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀನಾಥ್ ಮತ್ತು ಗಾಯತ್ರಿ ಸುರೇಶ್ ಸಾದರಪಡಿಸಿದ ಗಾನಮೇಳ ಮತ್ತು ತೃಶ್ಯೂರು ನಟನಾ ತಂಡದಿಂದ ಆಕರ್ಷಕ ಅಕ್ರೋಬಾಟಿಕ್ ಡಾನ್ಸ್ ಮನಸೂರೆಗೊಂಡಿತು.
ಫೆ. 12ರಂದು ಪ್ರಾತಃಕಾಲ 1ಕ್ಕೆ ಶ್ರೀ ಪುಲಿಕಂಡನ್ ದೈವಂ ವೆಳ್ಳಾಟಂ, 2ಕ್ಕೆ ಶ್ರೀ ಕಾಳಪುಲಿಯನ್ ದೈವಂ ವೆಳ್ಳಾಟಂ, 3ಕ್ಕೆ ಶ್ರೀ ಪುಲ್ಲೂರ್ಣಂ ದೈವಂ ವೆಳ್ಳಾಟಂ, 3ಕ್ಕೆ ಶ್ರೀ ಪುಲ್ಲೂಣಂ ದೈವಂ ವೆಳ್ಳಾಟಂ,ಉತ್ಸವಬಲಿ,5ಕ್ಕೆ ಶ್ರೀ ಪುಲ್ಲೂರಾಳಿ ದೈವಂ ತೋಟ್ಟಂ,ಶ್ರೀ ವಿಷ್ಣುಮೂರ್ತಿ ದೈವಂ ತೊಡಂಙಲ್, ಬೆಳಗ್ಗೆ 6.30ಕ್ಕೆ ಶ್ರೀ ವಿಷ್ಣುಮೂರ್ತಿ ದೈವಂಕುಳಿಚೇಟ್ಟಂ, 8ಕ್ಕೆ ಶ್ರೀಕಾಳಪುಲಿಯನ್ ದೈವಂ, 10ಕ್ಕೆ ಶ್ರೀ ಪುಲಿಕಂಡನ್ ದೈವಂ, 1ಕ್ಕೆ ಶ್ರೀ ಪುಲ್ಲೂರಾಳಿ ದೈವಂ, ತುಲಾಭಾರ , ಸಂಜೆ 6ಕ್ಕೆ ಶ್ರೀ ಪುಲ್ಲೂಣಂ ದೈವಂ (ಹೂಮುಡಿ) ಕಲ್ಲಂಗಡಿ ಹೊಸಮನೆಗೆ ಭೇಟಿ, 6.30ಕ್ಕೆ ಶ್ರೀ ವಿಷ್ಣುಮೂರ್ತಿ ದೈವಂ,ಶ್ರೀ ಐವರ್, ಶ್ರೀ ಪುಲ್ಲೂರ್ಣ ದೈವ ಮತ್ತು ಶ್ರೀ ವಿಷ್ಣುಮೂರ್ತಿ ದೈವಗಳು ತಂತ್ರಿಯವರ ಕಾವು ಮಠಕ್ಕೆ ಭೇಟಿ ನೀಡುವುವು. ಬಳಿಕ ಕಾವುಗೋಳಿ ಭಂಡಾರಮನೆ ತರವಾಡಿಗೆ, ಕ್ಷೇತ್ರ ಭಂಡಾರ ಮನೆಗೆ ಭೇಟಿ, ರಾತ್ರಿ 9ಕ್ಕೆ ಚಪ್ಪರ ಮದುವೆ, 11ಕ್ಕೆ ಹೂಮುಡಿ ಅವರೋಹಣ, ಭಂಡಾರ ನಿರ್ಗಮನ ಕಾರ್ಯಕ್ರಮಗಳು ನಡೆಯಲಿವೆ.