Advertisement

ಡಾ|ಕಲ್ಮಾಡಿ ಶ್ಯಾಮರಾವ್‌ ಕನ್ನಡ ಹೈಸ್ಕೂಲ್‌:ವಿದ್ಯಾರ್ಥಿಗಳ ಕವಿಗೋಷ್ಠಿ

04:14 PM Mar 16, 2019 | |

ಪುಣೆ: ಪುಣೆ ಕನ್ನಡ ಸಂಘದ ಡಾ| ಕಲ್ಮಾಡಿ ಶ್ಯಾಮರಾವ್‌ ಕನ್ನಡ ಮಾಧ್ಯಮ ಹೈಸ್ಕೂಲ್‌ ವಿದ್ಯಾರ್ಥಿಗಳಿಗಾಗಿ ಮಾ. 8 ರಂದು ಶಾಲೆಯ ಸಭಾಂಗಣದಲ್ಲಿ ಕವಿ ಗೋಷ್ಠಿಯನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿ ಗಳು ಉತ್ಸಾಹದಿಂದ ಸ್ವರಚಿತ ಕವಿತೆಗಳನ್ನು ವಾಚಿಸಿದರು.

Advertisement

ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಪುಣೆಯ ಹಿರಿಯ ಕವಿ ಪಾಂಗಾಳ ವಿಶ್ವನಾಥ ಶೆಟ್ಟಿ ಅವರು ವಹಿಸಿದ್ದರು. ಅವರು ವಿದ್ಯಾರ್ಥಿಗಳ  ಕವಿತೆಗಳನ್ನು ಆಲಿಸಿ ವಿಮರ್ಶಿಸಿ ಮಾರ್ಗದರ್ಶನ  ನೀಡುತ್ತಾ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಂದ ಹೊಸಹೊಸ ಕೌಶಲಗಳು ಹೊರಹೊಮ್ಮುತ್ತಿವೆೆ. ಅವರು ಬರೆದ ಸುಂದರ ಕವಿತೆ ಗಳನ್ನು ಕೇಳುವ ಸೌಭಾಗ್ಯ ನಮ್ಮದಾ ಗಿದೆ. ವಿದ್ಯಾರ್ಥಿಗಳು ತಮ್ಮ ಕವಿತೆ ಗಳಲ್ಲಿ ಅಂತ್ಯ ಪ್ರಾಸ ಹಾಗೂ ಆದಿ ಪ್ರಾಸಗಳನ್ನು ಬಹಳ ಸುಂದರವಾಗಿ ಉಪಯೋಗಿಸಿಕೊಂಡಿ¨ªಾರೆ. ಅವರ ಮನಸ್ಸಿನ ಭಾವನೆಗಳನ್ನು ಸುಂದರವಾಗಿ ಇಲ್ಲಿ ಪಡಿಮೂಡಿಸಿ¨ªಾರೆ. ಈ ವಯಸ್ಸಿನಲ್ಲಿ ಕವಿತೆಗಳನ್ನು ಬರೆಯುವುದರಿಂದ ಸಾಹಿತ್ಯದ ಅಭಿರುಚಿ ಬೆಳೆಯಲು ಸಾಧ್ಯವಿದೆ ಎಂದರು.

ಅತಿಥಿಗಳಾಗಿ ಉಪಸ್ಥಿತರಿದ್ದ ಪುಣೆ ಕನ್ನಡ ಸಂಘದ ಉಪಾಧ್ಯಕ್ಷೆ, ಕವಯಿತ್ರಿ ಇಂದಿರಾ ಸಾಲ್ಯಾನ್‌ ಮಾತನಾಡಿ, ವಿದ್ಯಾರ್ಥಿಗಳು ಬಹಳ ಸೊಗಸಾದ ಕವಿತೆಗಳನ್ನು ರಚಿಸಿ ತಮ್ಮ ಪ್ರತಿಭೆಗಳನ್ನು ಸಾದರಪಡಿಸಿದ್ದೀರಿ. ಸೇಬುಹಣ್ಣು, ನುಗ್ಗೆಕಾಯಿ, ಗುಲಾಬಿ ಹೂವು, ಮೊಬೈಲ್‌ ಹಾವಳಿ ದೇಶಸೇವೆಯೇ ಈಶ ಸೇವೆ, ನನ್ನ ಶಾಲೆ, ತಂದೆ-ತಾಯಿ, ಗಿಡವೇ ಉಸಿರು, ಸಿಟ್ಟು, ಸಂತೋಷ, ಕನಸು, ರೈತನನ್ನು  ಉಳಿಸಿ, ಚಂದಿರ ಹೀಗೆ ವಿಭಿನ್ನ ರೀತಿಯ ವಿಷಯಗಳನ್ನು ಆಯ್ದುಕೊಂಡು ಕವನಗಳನ್ನು ವೈವಿಧ್ಯಮಯವಾಗಿ ನಿರೂಪಿಸಿರುವುದು ಸಂತೋಷವಾಗುತ್ತಿದೆ.  ನಿಮ್ಮ ಪ್ರಯತ್ನ ಹೀಗೆ ಮುಂದುವರಿದು ಭವಿಷ್ಯದಲ್ಲಿ ಉತ್ತಮ ಸಾಹಿತಿಗಳಾಗಿ ಬೆಳೆಯುವಲ್ಲಿ ಸಹಕಾರಿಯಾಗಲಿದೆ ಎಂದರು.

ಜೈ ಭಾರತ ಜನನಿಯ ತನುಜಾತೆ ನಾಡಗೀತೆಯ ಮೂಲಕ ಕಾರ್ಯಕ್ರಮ ಆರಂಭವಾಯಿತು. ಶಾಲಾ ಮುಖ್ಯೋ ಪಾಧ್ಯಾಯರಾದ ಚಂದ್ರಕಾಂತ ಹಾರಕೂಡೆ ಅವರು ಅತಿಥಿಗಳನ್ನು ಪುಷ್ಪಗುತ್ಛ ನೀಡಿ ಸತ್ಕರಿಸಿದರು. ವಿದ್ಯಾರ್ಥಿ ಕವಿಗಳನ್ನು ಶಾಲು ಹೊದೆಸಿ ಭಾಗವಹಿಸಿದ ಅತಿಥಿಗಳು ಬರೆದ  ಕವಿತೆಗಳ ಪುಸ್ತಕಗಳನ್ನು ನೀಡಿ ಸತ್ಕರಿಸಲಾಯಿತು. ಕರ್ನಾಟಕದ ವಿಜಯನಗರ ಸಾಮ್ರಾಜ್ಯದ ವೈಭವಗಾಥೆಯನ್ನು ತಿಳಿಸುವ ಹಂಪೆಯ ಚಿತ್ರಗಳನ್ನು ಪ್ರದರ್ಶಿಸುತ್ತಾ ವಿದ್ಯಾರ್ಥಿನಿಯರು ಹಾಡುಗಳನ್ನು ಹಾಡಿ  ರಂಜಿಸಿದರು. ಕವನ ವಾಚಿಸಿದ ವಿದ್ಯಾರ್ಥಿಗಳನ್ನು ಸಹಪಾಠಿ ವಿದ್ಯಾರ್ಥಿಗಳು ಪರಿಚಯಿಸಿದರು.

ಒಂಭತ್ತನೆಯ ತರಗತಿಯ ವಿದ್ಯಾರ್ಥಿಗಳಾದ ಲಕ್ಷ್ಮೀ ಕಲಶೆಟ್ಟಿ, ಪ್ರಿಯಾಂಕಾ ಉಮಾಗೋಳ, ರೋಹಿತ್‌ ನಾಟೇಕರ, ಸಾಹಿಲ್‌ ತುಂಬಗಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಾಹಿತಿಗಳಾದ ಸಕ್ರೋಜಿ ದಂಪತಿ, ನಾಟ್ಯಗುರು ಮದಂಗಲ್ಲು ಆನಂದ್‌ ಭಟ್‌, ಡಾ|  ಶೋಭಾ ಜೋಶಿ, ಸಂಜೀವ ಕುಲಕರ್ಣಿ ಮತ್ತಿತರ ಗಣ್ಯರು ಕವಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.  ಈ ಸಂದರ್ಭ ಅಂತಾರಾಷ್ಟ್ರೀಯ ಮಹಿಳಾ ದಿನದ ನಿಮಿತ್ತವಾಗಿ ಶಾಲೆಯ ಶಿಕ್ಷಕಿ ಯರನ್ನು ಸತ್ಕರಿಸಲಾಯಿತು.  

Advertisement

ಚಿತ್ರದುರ್ಗದಲ್ಲಿ ನಡೆದ ಸಿರಿಗನ್ನಡ ಪ್ರತಿಭಾ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ವಿದ್ಯಾರ್ಥಿ ಗಳನ್ನು ಪ್ರಮಾಣಪತ್ರ ಹಾಗೂ ಪದಕಗಳನ್ನು ನೀಡಿ ಗೌರವಿಸಲಾಯಿತು. ಶಿಕ್ಷಕಿ ಶೋಭಾ ಪಂಚಾಂಗ ಮಠ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ದರು. ಶಿಕ್ಷಕ ವೃಂದದರು  ಸಹಕಾರ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next