Advertisement

ಕಲ್ಮಾಡಿ: ಉಪ್ಪು ನೀರು ನುಗ್ಗಿ ಕಟಾವಿಗೆ ಸಿದ್ದವಾದ ಬೆಳೆ ನಾಶ

11:37 PM Nov 13, 2019 | Team Udayavani |

ಮಲ್ಪೆ: ನಗರಸಭಾ ವ್ಯಾಪ್ತಿಯ ಕಲ್ಮಾಡಿ ವಾರ್ಡ್‌ ಬೊಟ್ಟಲ ಬಳಿ ಸುಮಾರು 2 ಎಕ್ರೆ ಕೃಷಿ ಭೂಮಿಗೆ ಸಮೀಪದ ಹೊಳೆಯ ಮೂಲಕ ಉಪ್ಪು ನೀರು ನುಗ್ಗಿ ಕಟಾವಿಗೆ ಸಿದ್ದವಾಗಿದ್ದ ಬೆಳೆ ನಾಶವಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

Advertisement

ಕೆಲ ದಿನಗಳ ಹಿಂದೆ ಸಮುದ್ರದ ನೀರಿನಲ್ಲಿ ಏರಿಕೆ ಕಂಡು ಬಂದು, ಇಲ್ಲಿನ ತಡೆಗೋಡೆ ಹಾನಿಯಾಗಿದ್ದರಿಂದ ಹೊಳೆ ನೀರು ಗದ್ದೆ ಪ್ರವೇಶಿಸುವಂತಾಗಿದೆ. ಇದರಿಂದ ಕಲ್ಮಾಡಿ-ಬೊಟ್ಟಲ ಬಗ್ಗು ಪಂಜುರ್ಲಿ ದೈವಸ್ಥಾನ ಪರಿಸರದ ಸುತ್ತಮುತ್ತಲ ಪ್ರದೇಶದ ಸುಮಾರು 5ಕುಟುಂಬಗಳ ಗದ್ದೆಗೆ ನೀರು ಹರಿದು ಬಂದಿದ್ದು ಮನೆ ಮಂದಿ ಕಂಗಾಲಾಗಿದ್ದಾರೆ. ಭತ್ತದ ಬೆಳೆಯ ನಂತರ ಎರಡನೆಯ ಬೆಳೆಯಾಗಿ ಉದ್ದು ಮತ್ತು ತರಕಾರಿಯನ್ನು ಬೆಳೆಯನ್ನು ಇಲ್ಲಿ ಬೆಳೆಸಲಾಗುತ್ತಿತ್ತು. ಉಪ್ಪು ನೀರಿನಿಂದಾಗಿ ತರಕಾರಿಯನ್ನು ಬೆಳೆಸದಂತಾಗಿದೆ.

ಕೃಷಿ ಅಧಿಕಾರಿ ಬೃಂದ, ಸಹಾಯಕ ಕೃಷಿ ಅಧಿಕಾರಿ ರಾಮಕೃಷ್ಣ ಭಟ್‌, ಗ್ರಾಮ ಕರಣಿಕ ಕಾರ್ತಿಕೇಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನಸು ನನಸಾಗಿದೆ
ಉಪ್ಪು ನೀರು ಸಮಸ್ಯೆಗೆ ಇಲ್ಲಿನ ಹೊಳೆ ದಂಡೆಗೆ ಶಾಶ್ವತ ಪರಿಹಾರ ನೀಡುವ ಅಗತ್ಯವಿದೆ. ಇಲ್ಲಿನ ಕೆಲವು ಕುಟುಂಬಗಳು ತುಂಡು ಭೂಮಿಯಲ್ಲೇ ಭತ್ತ ಬೆಳೆದು ಜೀವನ ಮಾಡಬೇಕಾಗಿದ್ದು ಬೆಳೆಯೂ ಕೈಕೊಟ್ಟು ಜೀವನ ಕಷ್ಟಕರ ವಾಗಿದೆ, ಸರಕಾರ ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
-ಸುಂದರ್‌ ಜೆ. ಕಲ್ಮಾಡಿ,
ನಗರಸಭಾ ಸದಸ್ಯ, ಕಲ್ಮಾಡಿ ವಾರ್ಡ್‌

Advertisement

Udayavani is now on Telegram. Click here to join our channel and stay updated with the latest news.

Next