Advertisement

ಏಶ್ಯಾಡ್‌: ಕಳಂಕಿತ ಕಲ್ಮಾಡಿ ಆಪ್ತ ಭಾರತ ತಂಡದ ಅಧಿಕಾರಿ

10:19 AM Jul 31, 2018 | Team Udayavani |

ಹೊಸದಿಲ್ಲಿ: ಏಶ್ಯನ್‌ ಕ್ರೀಡಾಕೂಟಕ್ಕಾಗಿ ತೆರಳಲಿರುವ 541 ಭಾರತೀಯ ಕ್ರೀಡಾಪಟುಗಳ ತಂಡದ ಚೆಫ್ ಡಿ ಮಿಷನ್‌ (ತಂಡದ ಮೇಲುಸ್ತು ವಾರಿ ನಾಯಕ) ಆಗಿ ಉತ್ತರ ಪ್ರದೇಶದ ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರನ್ನು ಆಯ್ಕೆ ಮಾಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಅವರಿಗೆ ಸಹಾಯಕರಾಗಿ ನೇಮಿಸಲಾಗಿರುವ ನಾಲ್ವರಲ್ಲಿ ಒಬ್ಬರಾದ ರಾಜಕುಮಾರ್‌ ಸಾಕೇತಿ ಅವರು ಈ ಹಿಂದೆ 2010ರ ಕಾಮನ್ವೆಲ್ತ್‌ ಹಗರಣದ ಆರೋಪಿ ಸುರೇಶ್‌ ಕಲ್ಮಾಡಿಯವರ ಆಪ್ತರೂ ಆಗಿರುವುದು ವಿವಾದಕ್ಕೆ ತುಪ್ಪ ಸುರಿದಿದೆ.

Advertisement

ಉತ್ತರ ಪ್ರದೇಶದ ಕೈಜರ್‌ಜಂಗ್‌ ಕ್ಷೇತ್ರದಿಂದ 2014ರ ಲೋಕಸಭಾ ಚುನಾವಣೆಗೆ ನಿಂತಿದ್ದಾಗ ಚುನಾವಣಾ ಆಯೋಗಕ್ಕೆ ಬ್ರಿಜ್‌ಭೂಷಣ್‌ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಅವರ ವಿರುದ್ಧ ಹಲವಾರು ಕ್ರಿಮಿನಲ್‌ ಮೊಕ ದ್ದಮೆಗಳಿರುವುದು ಬಹಿರಂಗವಾಗಿತ್ತು. ಇನ್ನು, 2010ರಲ್ಲಿ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆಯ ಜಂಟಿ ನಿರ್ದೇಶಕರಾಗಿದ್ದ ಸಾಕೇತಿ, ಕಾಮನ್ವೆಲ್ತ್‌ ಕ್ರೀಡಾಕೂಟದ ವೇಳೆ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕೇಂದ್ರೀಯ ವಿಚಕ್ಷಣ ದಳ (ಸಿವಿಸಿ) ಆರೋಪಿಸಿದೆ. 

ಭಾರತೀಯ ಕ್ರೀಡಾಪಟುಗಳ ತಂಡದ ಅಭ್ಯಾಸ ವಿಭಾಗದ ಚೇರ್‌ಮನ್‌ ಆಗಿ ನೇಮಿಸಲ್ಪಟ್ಟಿರುವ ಲಲಿತ್‌ ಭಾನೋಟ್‌ ಕೂಡ 2010ರ ಕಾಮನ್ವೆಲ್ತ್‌ ಕ್ರೀಡಾಕೂಟ ಹಗರಣದಲ್ಲಿ ಆರೋಪ ಹೊತ್ತು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದವರು. ಇದೀಗ, ಇಂಥ ಕಳಂಕಿತರನ್ನು ತಂಡದ ಮೇಲುಸ್ತುವಾರಿಗೆ ನೇಮಿಸಿರುವ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ (ಐಒಎ) ಉತ್ತರ ನೀಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next