Advertisement

ಡಿಸಿ ವಾಸ್ತವ್ಯಕ್ಕೆ ಕಳ್ಳಿಲಿಂಗಸುಗೂರು ಸಜ್ಜು

04:53 PM Feb 18, 2021 | Team Udayavani |

ಲಿಂಗಸುಗೂರು: ಫೆ.20ರಂದು ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯಕ್ಕೆ ತಾಲೂಕಿನ ಕಳ್ಳಿಲಿಂಗಸುಗೂರು ಗ್ರಾಮ ಆಯ್ಕೆಯಾಗಿದೆ. ಗ್ರಾಮಗಳಲ್ಲಿನ ಸಮಸ್ಯೆಗಳು ಜಿಲ್ಲಾ ಧಿಕಾರಿಗಳನ್ನು ಸ್ವಾಗತಿಸಲಿವೆ. ತಾಲೂಕಿನ ಮಾವಿನಭಾವಿ ಗ್ರಾಪಂ ವ್ಯಾಪ್ತಿಯಲ್ಲಿನ ಕಳ್ಳಿಲಿಂಗಸುಗೂರು ಗ್ರಾಮದಲ್ಲಿ 700 ಮನೆಗಳು, 3 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ.

Advertisement

ಶಾಲೆಯಲ್ಲೇ ವಸ್ತಿ: ಗ್ರಾಮದ ಮಧ್ಯದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಳೆಯ 3 ಕೊಠಡಿಗಳಿವೆ. ಇವು ಈ ಶಿಥಿಲಾವ್ಯಸ್ಥೆಯಲ್ಲಿವೆ. ಕೊಠಡಿಯ ಮೇಲ್ಛಾವಣಿ ಉದುರುತ್ತಿದೆ. ಒಂದು ಕೊಠಡಿಗೆ ಮಾತ್ರ ವಿದ್ಯುತ್‌, ಫ್ಯಾನ್‌ ಸೌಲಭ್ಯ ಇದೆ. ಗ್ರಾಮದ ಹೊರಭಾಗದಲ್ಲಿ ಮೂರು ಹೊಸ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಶಾಲಾ ಕಟ್ಟಡ ಸುತ್ತಮುತ್ತ ದೊಡ್ಡ ಕಲ್ಲುಬಂಡೆಗಳು ಇರುವುದರಿಂದ ಸಮರ್ಪಕ ರಸ್ತೆ ಇಲ್ಲದಾಗಿದೆ. ಆದರೆ ಡಿಸಿ ಅವರು ಎಲ್ಲಿ ವಾಸ್ತವ್ಯ ಮಾಡುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ,

ಪ್ರಚಾರ ಕೊರತೆ: ಕಳ್ಳಿಲಿಂಗಸುಗೂರು ಗ್ರಾಮದಲ್ಲಿ ಫೆ.20ರಂದು ಡಿಸಿ ವಾಸ್ತವ್ಯ ಮಾಡುವ ಬಗ್ಗೆ ಗ್ರಾಮಸ್ಥರಿಗೆ ಗೊತ್ತಿಲ್ಲ, ಈ ಬಗ್ಗೆ ಗ್ರಾಮದಲ್ಲಿ ಪ್ರಚಾರ ಮಾಡುವಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ರಾಶಿಗಳು ನಡೆಯುತ್ತಿದ್ದರಿಂದ ರೈತರ ಅದರಲ್ಲಿ ನಿರತರಾಗಿದ್ದಾರೆ.

ಸಮಸ್ಯೆಗಳ ಸಾಲು: ಜಿಲ್ಲಾಧಿಕಾರಿಗಳಿಗೆ ಗ್ರಾಮದ ರಸ್ತೆಗುಂಟ ಹಾಕಲಾಗಿರುವ ಸಾಲು ಸಾಲು ತಿಪ್ಪೆಗುಂಡಿಗಳೇ ಸ್ವಾಗತಿಸುತ್ತಿವೆ. ಗ್ರಾಮದಲ್ಲಿನ ರಸ್ತೆಗಳಲ್ಲಿ ಚರಂಡಿ ನೀರು ಹರಿಯುತ್ತಿದ್ದರಿಂದ ಚರಂಡಿ ನೀರೇ ದಾಟಿಕೊಂಡೇ ಗ್ರಾಮಸ್ಥರು ಸಂಚರಿಸಬೇಕಾದ ಅನಿವಾರ್ಯತೆ ಇದೆ. ನರೇಗಾದಡಿಯಲ್ಲಿ ಇಂಗುಗುಂಡಿ ನಿರ್ಮಿಸಲು ಅವಕಾಶಗಳು ಇದ್ದರೂ ಈ ಬಗ್ಗೆ ಗ್ರಾಪಂ ಆಡಳಿತ ವರ್ಗ ಸಂಪೂರ್ಣ ನಿರ್ಲಕ್ಷé ವಹಿಸಿವೆ.

ಶುದ್ಧ ಕುಡಿಯುವ ನೀರು ಇಲ್ಲ: ಹುನುಕುಂಟಿ, ಕಳ್ಳಿಲಿಂಗಸುಗೂರು ಹಾಗೂ ಭೂಪುರ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ಹುನುಕುಂಟಿ ಗ್ರಾಮದ ಹತ್ತಿರ ಕೆರೆ ನಿರ್ಮಾಣ ಮಾಡಿ ಬಹುಗ್ರಾಮ ಕುಡಿವ ನೀರಿನ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಆದರೆ ಹುನುಕುಂಟಿ ಗ್ರಾಮಕ್ಕೆ ಮಾತ್ರ ನೀರು ಸಬರಾಜು
ಆಗುತ್ತಿದೆ ಆದರೆ ಭೂಪುರ, ಕಳ್ಳಿಲಿಂಗಸುಗೂರು ಗ್ರಾಮಕ್ಕೆ ಇನ್ನೂ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ, ಕಳ್ಳಿಲಿಂಗಸುಗೂರು ಗ್ರಾಮದಲ್ಲಿ ಶುದ್ಧ ಕುಡಿಯುವ
ನೀರಿನ ಘಟಕ ಇದ್ದು ಇಲ್ಲದಂತಿದೆ. ದುರಸ್ತಿಗೆ ಬಂದು ವರ್ಷಗಳೇ ಕಳೆದರೂ ಅದನ್ನು ರಿಪೇರಿ ಮಾಡುತ್ತಿಲ್ಲ ಎಂದು ಗ್ರಾಮಸ್ಥರ ಅಳಲಾಗಿದೆ.

Advertisement

ಬಿದ್ದ ಮನೆಗೆ ಪರಿಹಾರವೇ ಇಲ್ಲ: ಇತ್ತೀಚೆಗೆ ಸುರಿದ ಭಾರಿ ಮಳೆಗೆ ಗ್ರಾಮದಲ್ಲಿ ಸುಮಾರು 15 ಮನೆಗಳು ಬಿದ್ದಿವೆ. ಹಲವಾರು ತಿಂಗಳು ಕಳೆದರೂ ಈವರೆಗೂ
ಪರಿಹಾರ ಹಣ ಕೈ ಸೇರಿಲ್ಲಾ ಎಂದು ಫಲಾನುಭವಿಗಳ ನೋವಾಗಿದೆ.

ಪರಿಶೀಲನೆ: ಗ್ರಾಮಕ್ಕೆ ಬಿಇಒ ಹುಂಬಣ್ಣ ರಾಠೊಡ್‌, ಪಿಡಿಓ ಗಂಗಮ್ಮ, ಕಂದಾಯ ನಿರೀಕ್ಷಕ ರಾಮಕೃಷ್ಣ  ಹಾಗೂ ಇನ್ನಿತರ ಅ ಧಿಕಾರಿಗಳು ಗ್ರಾಮಕ್ಕೆ ಭೇಟಿ
ನೀಡಿ ಡಿಸಿ ವಾಸ್ತವ್ಯಕ್ಕಾಗಿ ಸಕಲ ಸಿದ್ಧತೆ ಕಾರ್ಯ ಪರಿಶೀಲಿಸಿದರು.

*ಶಿವರಾಜ ಕೆಂಭಾವಿ

Advertisement

Udayavani is now on Telegram. Click here to join our channel and stay updated with the latest news.

Next