Advertisement

ಕಲ್ಲೇರಿ: ಚರಂಡಿ ನಿರ್ಮಾಣಕ್ಕೆ 4 ಲಕ್ಷ ಮಂಜೂರು, ಕಾಮಗಾರಿ ಪರಿಶೀಲನೆ 

05:26 PM Mar 10, 2018 | Team Udayavani |

ಉಪ್ಪಿನಂಗಡಿ: ತಣ್ಣೀರುಪಂಥ ಗ್ರಾ. ಪಂ. ವ್ಯಾಪ್ತಿಯ ಕಲ್ಲೇರಿ ಪೇಟೆಯ ಜನರ ಬಹುಕಾಲದ ಬೇಡಿಕೆಯಾಗಿದ್ದ ಚರಂಡಿ ನಿರ್ಮಾಣ ಕಾಮಗಾರಿಗೆ 4 ಲಕ್ಷ ರೂ. ಮಂಜೂರು ಆಗಿದ್ದು, ಕಾಮಗಾರಿಗೆ ಚಾಲನೆ ನೀಡಲಾಗಿದೆ.

Advertisement

ಕಲ್ಲೇರಿ ಪೇಟೆಯಲ್ಲಿ 78 ಮೀಟರ್‌ ಉದ್ದಕ್ಕೆ ಡಿಎಂಎಫ್ ಯೋಜನೆ ಅಡಿಯಲ್ಲಿ ಚರಂಡಿಗೆ ಕಾಂಕ್ರೀಟ್‌ ಕಾಮಗಾರಿಗೆ ಅನುದಾನ ಮಂಜೂರು ಆಗಿದ್ದು, ಕಾಮಗಾರಿಯ ಗುಣಮಟ್ಟದ ಬಗ್ಗೆ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಜಯವಿಕ್ರಂ, ಸದಸ್ಯ ಅಯೂಬ್‌, ತಾಜುದ್ದೀನ್‌, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗುತ್ತಿಗೆದಾರರಿಗೆ ಸೂಚನೆ
ಚರಂಡಿ ನಿರ್ಮಾಣ ಕಾಮಗಾರಿ ಪರಿಶೀಲನೆ ನಡೆಸಿದ ಗ್ರಾಮ ಪಂಚಾಯತ್‌ ಅಧ್ಯಕ್ಷ ಜಯವಿಕ್ರಂ, ಒಂದು ಕಡೆ ಸಣ್ಣ ಪುಟ್ಟ ಲೋಪ ದೋಷ ಕಂಡು ಬಂದಿದ್ದು, ಇದನ್ನು ಸರಿಪಡಿಸಲು ಸೂಚನೆ ನೀಡಲಾಗಿದೆ. ಅದಾಗ್ಯೂ ಈ ಚರಂಡಿಯ ಪೂರ್ಣ ಪ್ರಮಾಣದ ಕಾಮಗಾರಿಗೆ ಅನುದಾನ ಮಂಜೂರು ಆಗಿರುವುದಿಲ್ಲ, ಆದರೆ ಮುಂದೆ ಅನುದಾನ ಒದಗಿಸುವ ಭರವಸೆಯೊಂದಿಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next