Advertisement

ಕಲ್ಲಡ್ಕ ಗಲಭೆ ಆರೋಪಿ ಪರಾರಿಯಾಗಿಲ್ಲ,ಹೆಚ್ಚಿನ ಚಿಕಿತ್ಸೆಗೆ ತೆರಳಿದ್ದು

10:40 AM Jun 15, 2017 | Team Udayavani |

ಬಂಟ್ವಾಳ : ಕಲಡ್ಕದಲ್ಲಿ  ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಪುತ್ತೂರು ಆದರ್ಶ ಆಸ್ಪತ್ರೆಗೆ  ದಾಖಲಾಗಿದ್ದ ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿರಾತೋರಾತ್ರಿ ಆಸ್ಪತ್ರೆಯಿಂದ ಪರಾರಿಯಾದ ಘಟನೆ ಬುಧವಾರ ರಾತ್ರಿ ನಡೆದಿದೆ.                         

Advertisement

ಕಾವಲು ಕಾಯುತ್ತಿದ್ದ ಪೊಲೀಸರು ನಿದ್ರೆಗೆ ಜಾರಿದ ಸಮಯ ನೋಡಿ ಆಸ್ಪತ್ರೆಯಿಂದ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.

ಜೂನ್‌13 ರಂದು ಇಬ್ಬರಿಗೆ ಚೂರಿಯಿಂದ ಇರಿದು ಹಲ್ಲೆ ನಡೆಸಿದ ಬಳಿಕ ಅಂಗಡಿಗಳಿಗೆ ಕಲ್ಲೆಸೆದು ಹಾನಿ ಮಾಡಿದ್ದು ಕೋಮು ಘರ್ಷಣೆಗೆ ಕಾರಣವಾಗಿತ್ತು. ರತ್ನಾಕರ ಶೆಟ್ಟಿ ಮತ್ತು ರವಿ ಭಂಡಾರಿ ಗಾಯಗೊಂಡಿದ್ದು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಖಲೀಲ್‌ ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. 

ರತ್ನಾಕರ ಶೆಟ್ಟಿ ಅವರು ಸ್ಥಳೀಯ ಆಸ್ಪತ್ರೆಗೆ ಪುತ್ರನನ್ನು ಕರೆತಂದು ಔಷಧ ಪಡೆದುಕೊಂಡು ಮರಳುತ್ತಿರುವಾಗ ಖಲೀಲ್‌ ಮೀಸೆ ತಿರುವಿಕೊಂಡು ಮಾತನಾಡಿದ್ದು, ಇದೇ ವೇಳೆ ಹಿಂದಿನಿಂದ ಬಂದ ಜುನೈಜ್‌ ಹಲ್ಲೆ ನಡೆಸಿ ಇರಿದಿದ್ದಾನೆ ಎಂದು ಸಿಸಿ ಕೆಮರಾ ದೃಶ್ಯಗಳನ್ನು ಆಧರಿಸಿ
ಹೇಳಲಾಗಿದೆ. ಪೂರ್ವಯೋಜಿತವಾಗಿ ಹಲ್ಲೆ, ಕಲ್ಲೆಸೆತ ನಡೆದಿದೆ ಎನ್ನಲಾಗಿದೆ.ಘಟನೆಯ ಬಳಿಕ ಕಲ್ಲಡ್ಕದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. 

ಇದೀಗ ಕಲ್ಲಡ್ಕದಲ್ಲಿ ಪರಿಸ್ಥಿತಿ ಶಾಂತವಾಗಿದೆ. ನಿನ್ನೆಯಿಂದ ಯಾವುದೇ ಅಹಿತಕರ
ಘಟನೆಗಳು ನಡೆದಿಲ್ಲ. ನಗರದಲ್ಲಿ ಶಾಂತಿ ಸುವ್ಯವಸ್ಥೆಗಾಗಿ ಹಾಸನ ಮತ್ತು ಚಿಕ್ಕಮಗಳೂರಿನಿಂದ ಹೆಚ್ಚುವರಿ 3 ತುಕಡಿ ಕೆಎಸ್‌ಆರ್‌ಪಿ ಪಡೆಯನ್ನು ಕರೆಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ಅಧೀಕ್ಷಕ ಭೂಷಣ್‌ ಜಿ. ಬೊರಸೆ ತಿಳಿಸಿದ್ದಾರೆ.ಘಟನೆಗೆ ಸಂಬಂಧಿಸಿ ಎರಡೂ ಕಡೆಯ ಒಟ್ಟು 18 ಮಂದಿಯನ್ನು ಬಂಧಿಸಲಾಗಿದೆ. 

Advertisement

ರತ್ನಾಕರ್‌ ಶೆಟ್ಟಿ ವಿರುದ್ಧ ಖಲೀಲ್‌ ಅವರ ಮೇಲೆ ಹಲ್ಲೆ ನಡೆಸಿದ ಆರೋಪವಿದ್ದು ಪ್ರಕರಣ ದಾಖಲಾಗಿದೆ. 

ಕರ್ತವ್ಯ ಲೋಪ ಎಸಗಿದ ಕಾರಣಕ್ಕೆ  ಮೂವರು ಪೊಲೀಸರ ಅಮಾನತು ಮಾಡಿ ಆದೇಶ ನೀಡಲಾಗಿದೆ. 

ಪರಾರಿಯಾಗಿಲ್ಲ 
ನಾನು ಪರಾರಿಯಾಗಿಲ್ಲ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಅನುಮತಿ ಪಡೆದು ಮಂಗಳೂರಿಗೆ ತೆರಳಿದ್ದೆ ಎಂದು ರತ್ನಾಕರ್‌ ಶೆಟ್ಟಿ ಹೇಳಿದ್ದಾರೆ. 

 ನೀಡಿ ರತ್ನಾಕರ್‌ ಶೆಟ್ಟಿ ಅವರನ್ನ ನಾವೇ ಕಳುಹಿಸಿದ್ದು ಎಂದು ಆಸ್ಪತ್ರೆಯ ವೈದ್ಯ ಪ್ರಸಾದ್‌ ಭಂಡಾರಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next