Advertisement
ಮಂಗಳವಾರ ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಆರ್ ಎಸ್ ಎಸ್ ಹಾಗೂ ಬಜರಂಗದಳ ನಿಷೇಧಿಸುವಂತೆ ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಸಿದರು.
Related Articles
Advertisement
ಹಿಂದೂ ಹೆಣ್ಣುಮಕ್ಕಳನ್ನು ಹಾರಿಸಿಕೊಂಡು ಹೋಗಲಾಗುತ್ತಿದೆ. ಗೋವುಗಳ ಮಾರಣಹೋಮ ಮಾಡಲಾಗುತ್ತಿದೆ. ಇದನ್ನು ತಡೆಯುವುದಕ್ಕೆ, ಹಿಂದೂ ಸಮಾಜದ ರಕ್ಷಣೆಗೆ ಆರ್ ಎಸ್ ಎಸ್ ಹೋರಾಟ ಮಾಡುತ್ತಿದೆ. ಗಾಂಧೀಜಿ ಹೇಳಿದ ಮತಾಂತರ, ಗೋಹತ್ಯೆ ನಿಷೇಧದ ಪರ ನಾವು ಹೋರಾಡುತ್ತಿದ್ದೇವೆ. ಆದರೆ ಈಗಿನವರು ನಕಲಿ ಗಾಂಧಿಗಳು, ಡೋಂಗಿಗಳು ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಲೇವಡಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಲ್‍ನಲ್ಲಿ ಗೋಮಾಂಸ ತಿನ್ನುವುದಾಗಿ ಹೇಳಿದ್ದರು. ಗಾಂಧೀಜಿ ಹೇಳಿದ ಮಾತನ್ನು ಕಾಂಗ್ರೆಸ್ಸಿನವರು ಸೇರಿದಂತೆ ಯಾರೂ ಪಾಲನೆ ಮಾಡುತ್ತಿಲ್ಲ ಎನ್ನುವುದು ಇದರಿಂದ ತಿಳಿಯುತ್ತದೆ. ಆದರೆ ಗಾಂಧೀಜಿ ಅವರ ಮಾತನ್ನು ಕೇವಲ ಆರ್ ಎಸ್ ಎಸ್ ಮಾತ್ರ ಪಾಲಿಸುತ್ತಿದೆ ಎಂದು ತಿಳಿಸಿದರು.
ಪಿಎಫ್ ಐ ಸಂಘಟನೆಗೆ ಹಲವು ವರ್ಷಗಳಿಂದ ಹೊರ ದೇಶದಿಂದ ಹಣ ಬರುತ್ತಿದೆ. ಇದರಿಂದಲೇ ಅವರು ಅಟ್ಟಹಾಸ ಮೆರೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಇದನ್ನು ಮೆಟ್ಟಿ ನಿಲ್ಲುವುದಕ್ಕಾಗಿಯೇ ದೇಶದ ಪ್ರಧಾನಿ ಮೋದಿ ಹುಟ್ಟಿಬಂದಿದ್ದು, ಎಲ್ಲಾ ಹಿಂಸಾತ್ಮಕ ಕೃತ್ಯಗಳನ್ನು ಹಿಮ್ಮೆಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.
ಡಾ. ಅಂಬೇಡ್ಕರ್ ಅವರು ರಾಷ್ಟ್ರೀಯ ದೃಷ್ಟಿಕೋನ ಹೊಂದಿದ್ದ ಶ್ರೇಷ್ಟ ವ್ಯಕ್ತಿ. ಆರ್ ಎಸ್ ಎಸ್ ಪ್ರತಿ ಶಿಬಿರಗಳಲ್ಲಿ ಅಂಬೇಡ್ಕರ್ ವಿಚಾರ ಚಿಂತನೆಗಳನ್ನು ನಡೆಸಲಾಗುತ್ತದೆ. ಅವರ ವಿಚಾರಧಾರೆಗಳು ಎಲ್ಲರಿಗೂ ಪ್ರೇರೇಪಣೆ ಮಾಡುವಂಥದ್ದು ಎಂದರು.