Advertisement
ಬಿ.ಸಿ.ರೋಡ್-ಹಾಸನ ಹೆದ್ದಾರಿ ಅಭಿವೃದ್ಧಿ ಕಾರ್ಯವನ್ನು ಮೂರು ವರ್ಷಗಳ ಹಿಂದೆಯೇ ಎನ್‌ಎಚ್‌ಎಐ ಕೈಗೊಂಡಿತ್ತಾದರೂ ಕಲ್ಲಡ್ಕದಲ್ಲಿ ಹೆದ್ದಾರಿ ಸಾಗುವ ಕುರಿತು ಗೊಂದಲಗಳಿದ್ದವು. ಕೊನೆಗೆ ಪ್ರಾಧಿಕಾರವು ಫ್ಲೆ ಓವರ್ ನಿರ್ಮಾಣದ ತೀರ್ಮಾನಕ್ಕೆ ಬಂದು, ಭೂಮಿ ಕಳೆದುಕೊಳ್ಳುವ ಮಾಲಕರಿಗೆ ಮೌಲ್ಯ ನೀಡಲು ಪ್ರಾರಂಭಿಸಿತ್ತು.
ಕಲ್ಲಡ್ಕ ವ್ಯಾಪ್ತಿಯಲ್ಲಿ ಪ್ರಾಧಿಕಾರವು ಗೋಳ್ತಮಜಲು ಗ್ರಾ.ಪಂ. ವ್ಯಾಪ್ತಿಯ 6 ಮತ್ತು ಬಾಳ್ತಿಲ ಗ್ರಾ.ಪಂ.ನ ಒಟ್ಟು 16 ಸರ್ವೇ ನಂಬರ್‌ಗಳನ್ನು ಗುರುತಿಸಿದ್ದು, ಒಟ್ಟು 1.2 ಕಿ.ಮೀ. ವ್ಯಾಪ್ತಿಗೆ 28 ಕೋ.ರೂ.ಗಳನ್ನು ನಿಗದಿ ಪಡಿಸಿದೆ. ಪ್ರಾರಂಭದಲ್ಲಿ ನಿಗದಿಪಡಿಸಿದ ಮೊತ್ತಕ್ಕೂ ಅಂತಿಮ ಮೊತ್ತಕ್ಕೂ ವ್ಯತ್ಯಾಸ ಕಂಡುಬಂದದ್ದರಿಂದ ಗೊಂದಲ ಸೃಷ್ಟಿಯಾಗಿತ್ತು. ಫ್ಲೆಓವರ್ ತೀರ್ಮಾನಕ್ಕೆ ಮೊದಲು
ಕಲ್ಲಡ್ಕದಲ್ಲೂ 45 ಮೀ. ಭೂಸ್ವಾಧೀನಕ್ಕೆ ನಿರ್ಧರಿಸಿ ಸರ್ವೇ ನಡೆಸಲಾಗಿತ್ತು. ಆದರೆ ಬಳಿಕ ಫ್ಲೆ$ç ಓವರ್‌ನಿಂದಾಗಿ ಸುಮಾರು 2.50 ಮೀ.ಭೂ ಸ್ವಾಧೀನ ಕಡಿಮೆಯಾಗಿ ಬಹುತೇಕ ಜಾಗ-ಕಟ್ಟಡಗಳು ಸೇಫ್ ಝೋನ್‌ಗೆ ಬಂದು ಮೌಲ್ಯ ನಿಗದಿಯಲ್ಲೂ ಕಡಿತವಾಗಿ ಗೊಂದಲ ಉಂಟಾಗಿತ್ತು.
Related Articles
ಬಿ.ಸಿ.ರೋಡ್ – ಅಡ್ಡಹೊಳೆ ಮಧ್ಯದ 65 ಕಿ.ಮೀ.ಗಳ ಹೆದ್ದಾರಿಯ ಅಭಿವೃದ್ಧಿಗಾಗಿ 821 ಕೋ.ರೂ.ಗಳಿಗೆ 2017ರಲ್ಲಿ ಟೆಂಡರ್ ನೀಡಿ ಕಾಮಗಾರಿ ಆರಂಭಗೊಂಡಿತ್ತು. ಆದರೆ ಪ್ರಸ್ತುತ ಹಿಂದಿನ ಟೆಂಡರ್ ಮೊಟಕುಗೊಂಡಿದ್ದು, ಮತ್ತೆ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆರಂಭವಾಗುವ ವೇಳೆ 2020ರ ಸೆಪ್ಟಂಬರ್ ಕಳೆಯುತ್ತದೆ ಎಂದು ಎನ್‌ಎಚ್‌ಎಐ ಹೇಳುತ್ತಿದೆ. ಹೆದ್ದಾರಿಯ ಕಾಮಗಾರಿಗೂ ಕಲ್ಲಡ್ಕ ಫ್ಲೆ ಓವರ್ ಟೆಂಡರ್‌ಗೂ ಸಂಬಂಧವಿಲ್ಲವಾದರೂ ಫ್ಲೆ ಓವರ್ ಕಾಮಗಾರಿ ಆರಂಭವೂ ವಿಳಂಬವಾಗುವ ಸಾಧ್ಯತೆ ಇದೆ.
Advertisement
ಕಲ್ಲಡ್ಕದಲ್ಲಿ ಅಲೈನ್‌ಮೆಂಟ್ ಅಂತಿಮವಾಗದೆ ಭೂ ಮೌಲ್ಯ ನೀಡುವುದು ವಿಳಂಬವಾಗಿತ್ತು. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಭೂಮಿಯ ದಾಖಲೆ ನೀಡುವ ಮಾಲಕರಿಗೆ ಈಗಾಗಲೇ ನಿಗದಿತ ಮೌಲ್ಯ ಹಂಚಿಕೆ ಪೂರ್ಣಗೊಂಡಿದ್ದು, ಶೇ.90ರಷ್ಟು ಪೂರ್ಣಗೊಂಡಿದೆ.
– ಮಂಜುನಾಥ್, ವಿಶೇಷ ಭೂ ಸ್ವಾಧೀನಾಧಿಕಾರಿ ಎನ್‌ಎಚ್‌ಎಐ ಹಾಸನ, ಬಿ.ಸಿ. ರೋಡ್ ವಿಭಾಗ