ಇಡಬೇಕೆಂಬ ಆಸೆಯೇ ಹುಟ್ಟೋದಿಲ್ಲ. ನೋಡೋಕ್ಕೆ ಚೆನ್ನಾಗಿದ್ರೆ ಅಲ್ಲೇ ನೋಡಿ ಮರೆಯೋದು, ಅಷ್ಟೇ ಆಗಿದೆ…
Advertisement
ಕೆಫೆಯಲ್ಲಿ ಕುಳಿತು ಬಿಸಿ ಕಾಫಿ ಕಪ್ ಹಿಡಿದ ನಿನ್ನ ಕೈಯನ್ನು ಮುಟ್ಟಲೂ ಇಲ್ಲ. ದೂರದ ಬೆಟ್ಟದ ಮೇಲೆ ಕುಳಿತು ಯಾರೂಇಲ್ಲದಿದ್ದನ್ನು ಕಂಡು, ನಿನ್ನ ಹೆಗಲ ಮೇಲೆ ಕೈ ಹಾಕಿ, ಕೆನ್ನೆಗೊಂದು ಮುತ್ತಿಕ್ಕುವುದಕ್ಕೂ ನೀ ಸಿಗಲಿಲ್ಲ. ಹುಟ್ಟಿದ ದಿನದಂದು ಚೆಂದದ
ಕೇಕ್ ಕತ್ತರಿಸೆಂದು ತಂದರೂ ನಗುನಗುತ ನೀನು ಕತ್ತರಿಸಲೂ ಇಲ್ಲ. ಎದುರಿಗಿದ್ದಾಗ ಒಮ್ಮೆಯೂ ಪ್ರೀತಿಸುವೆ ಎಂದು ಹೇಳಲಿಲ್ಲ
ಆದರೂ ಈ ಹಾಳಾದ ಮನಸು ಮಾತ್ರ ಇನ್ನೂ ನಿನ್ನ ಹಿಂದೇನೆ ಸುತ್ತುತ್ತಿದೆ. ಯಾಕೆ ಅಂತನೇ ತಿಳೀತಿಲ್ಲ. ಪ್ರೀತಿಸುವ ಪ್ರತಿ ಪ್ರೇಮಿಗೆ ನಿತ್ಯವೂ ಪ್ರೇಮಹಬ್ಬ. “ಪ್ರಿಯತಮೆಯೇ ದೇವತೆ’ ಎಂಬ ತತ್ವಕ್ಕೆ ಬೆನ್ನು ಬಿದ್ದವನು ನಾನು. ನನ್ನ ನೋಡಿದ ಕೂಡಲೇ ನಿನ್ನ ಮನಸ್ಸು ಕಲ್ಲಾಯಿತೆ ಎನ್ನುವ ಅನುಮಾನವೂ ಮನದ ಮೂಲೆಯಲ್ಲಿ ಎಲ್ಲೋ ಒಮ್ಮೆ ಸುಳಿದು ಹೋಗುತ್ತೆ. ಇರಲಿ ಬಿಡು, ನೀನು ಕಲ್ಲಾದರೇನು, ಇಲ್ಲ ನಾಳೆ ಮದ್ವೆಯಾಗಿ ಹೋದ್ರೂ, ನಾನಂತೂ ಹೀಗೆ ನಿನ್ನಾರಾಧನೆಯಲ್ಲೇ ಕಾಲ ಕಳೆಯುವೆ.
ಆಗಲ್ಲ. ನಿಂಗೆ ಇನ್ನೊಂದ್ ಗೊತ್ತಾ? ನೀನು ನನ್ನ ಹಿಂದೆ ಸುತ್ತಿದ್ರೆ, ಯಾವಾಗಲೂ ಫೋನ್‌ನಲ್ಲಿ ಮಾತಾಡಿಕೊಂಡು ಇದ್ದಿದ್ರೆ, ದಿನಾ
ಬೆಳಗ್ಗೆ ಸಿಕ್ಕಿ ಸಂಜೆ ಕೆನ್ನೆಗೊಂದು ಮುತ್ತು ನೀಡಿ, ಇವತ್ತಿಗೆ ಇಷ್ಟು ಸಾಕು, ನಾಳೆ ಸಿಗುವ ಅಂತ ಹೇಳಿ ನಿನ್ನ ಗೂಡು ಸೇರಿಕೊಂಡಿದ್ರೂ
ನಾನು ಅಷ್ಟು ಖುಷಿಯಾಗಿ ಇರುತ್ತಿದೊ ಇಲ್ವೋ. ದೂರದಲ್ಲಿದ್ದಷ್ಟು ಎಲ್ಲರೂ ಚೆನ್ನಾಗಿರ್ತಾರೆ. ಹತ್ತಿರ ಆದ್ರೆ ತಾನೆ ಒಂದೊಂದೇ ಇಷ್ಟವಾಗದ್ದು ತಿಳಿಯೋದು? ಮೂರ್ನಾಲ್ಕು ವರ್ಷವಾದರೂ ಹೇಳಬೇಕಿದ್ದ ಮಾತುಗಳು ನಿನ್ನನ್ನು ತಲುಪಲೇ ಇಲ್ಲ. ನೀನು ಹತ್ತಿರ ಬಂದು ಕೇಳುವ ಮನಸ್ಸು ಮಾಡಿಲ್ಲ. “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಅನ್ನೋ ಹಾಗೇ ನೀನು ಇಲ್ಲದ ಪ್ರೀತಿಯನ್ನು ಅವರಿವರಲ್ಲಿ ಅರಸಿ ಹೋಗಿ, ಅವಮಾನ ಮಾಡಿಸಿಕೊಂಡು ಬಂದ್ರೂ, ನನ್ನ ಕಣ್ಣಲ್ಲಿದ್ದ, ಪಾರ್ಥನೆಯಲ್ಲಿದ್ದ ಪ್ರೀತಿ ನಿನ್ನ
ಕಣ್ಣಿಗೆ ಬಿದ್ದೇ ಇಲ್ಲ.
Related Articles
ಉಸಿರು ನಾರ್ಮಲ… ಆಗಿಲ್ಲ. ಯಾಕೆ ಅಂತ ಗೊತ್ತಿಲ್ಲ. ಏನೇನೋ ಬರೀಬೇಕು ಅಂತಿದ್ದೆ. ಆದ್ರೂ ಆಗ್ತಿಲ್ಲ. ಕಿವಿ ಗುನುಗುತ್ತಿದ್ದ ಹಾಡು
ಕೇಳ್ತಿಲ್ಲ. ಇರಲಿ ನಾನು ಎಷ್ಟೇ ಹೇಳಿದ್ರೂ ನಿನಗೇನೂ ಕೇಳಲ್ಲ, ಅಲ್ವಾ?
Advertisement
ಶ್ರೀನಿಧಿ ಎಸ್