Advertisement

Kalki 2898 AD Trailer: ನವಯುಗ ಆರಂಭಕ್ಕೆ ಯುದ್ದದ ಮೂಲಕ ವ್ಯಾಖ್ಯಾನ ಬರೆದ ʼಭೈರವʼ

07:34 PM Jun 10, 2024 | Team Udayavani |

ಹೈದರಾಬಾದ್:‌ ಪ್ಯಾನ್‌ ಇಂಡಿಯಾ, ಬಿಗ್‌ ಬಜೆಟ್‌ ʼಕಲ್ಕಿ 2898 ಎಡಿʼ ಚಿತ್ರದ ಬಹುನಿರೀಕ್ಷಿತ ಟ್ರೇಲರ್‌ ರಿಲೀಸ್‌ ಆಗಿದೆ.

Advertisement

ನಾಗ್‌ ಅಶ್ವಿನ್‌ ನಿರ್ದೇಶನದ ಸೈನ್ಸ್‌ ಫೀಕ್ಷನ್ ʼಕಲ್ಕಿ 2898 ಎಡಿʼ‌ ಟ್ರೇಲರ್‌ ಅಮೋಘ ದೃಶ್ಯಾವಳಿ ಹಾಗೂ ವಿಎಫ್‌ ಎಕ್ಸ್‌ ನಿಂದ ಗಮನ ಸೆಳೆದಿದೆ. ಹಾಲಿವುಡ್‌ ರೇಂಜಿಗೆ ದೃಶ್ಯಗಳು ಮೂಡಿಬಂದಿದೆ.

ಜಗತ್ತಿನ ಮೊದಲ ಪ್ರದೇಶ, ಈ ಜಗತ್ತಿನ ಕೊನೆ ಪ್ರದೇಶ ʼಕಾಶಿʼ ಎನ್ನುವ ಮಾತಿನೊಂದಿಗೆ  ʼಕಲ್ಕಿʼ ಲೋಕ ಪ್ರಾರಂಭವಾಗುತ್ತದೆ. ಜಗತ್ತಿನ ಎಲ್ಲವನ್ನು ಕಿತ್ತುಕೊಂಡರೆ ಎಲ್ಲವೂ ಇರುತ್ತದೆ ಎನ್ನುವ ಕುತೂಹಲವುಳ್ಳ ಸಂಭಾಷಣೆಯಿಂದ ಟ್ರೇಲರ್‌ ಶುರುವಾಗುತ್ತದೆ.

6000 ವರ್ಷಗಳ ಹಿಂದಿನ ಶಕ್ತಿ ಮತ್ತೆ ಬಂದಿದೆ ಎಂದು, ಅಳಿವು – ಉಳಿವಿನ ನಡುವೆ ಹೋರಾಡುವವರ ದೃಶ್ಯವನ್ನು ತೋರಿಸಲಾಗಿದೆ. ʼಭೈರವʼ ನಾಗಿ ಪ್ರಭಾಸ್‌ ಯುದ್ಧಕ್ಕೆ ಇಳಿದ್ದಾರೆ. ಎರಡು ಜಗತ್ತಿನ ನಡುವಿನ ಹೋರಾಟವನ್ನು ಸೈನ್ಸ್‌ ಫೀಕ್ಷನ್‌ ಮೂಲಕ ತೋರಿಸಲಾಗಿದೆ.

ಯುದ್ಧದಲ್ಲಿ ನಾನು ಇದುವರೆಗೆ ಒಂದನ್ನೂ ಸೋತಿಲ್ಲ. ಇದನ್ನೂ ಸಹ ಸೋಲಲ್ಲ ಎಂದು ʼಭೈರವʼ ಹೇಳಿ ಯುದ್ದದ ಅಖಾಡದಲ್ಲಿ ಮಿಂಚಿದ್ದಾರೆ.

Advertisement

ನವಯುಗ ಆರಂಭಗೊಳ್ಳಲಿದೆ ಎಂದು ಟ್ರೇಲರ್‌ ಕೊನೆಯಲ್ಲಿ ತೋರಿಸಲಾಗಿದೆ.

ದಿಶಾ ಪಟಾನಿ, ಕಮಲ್‌ ಹಾಸನ್‌ ಹಾಗೂ ದೀಪಿಕಾಳ ಜೊತೆ ಅಮಿತಾಭ್‌ ಅವರ ಪಾತ್ರದ ಝಲಕ್ ತೋರಿಸಲಾಗಿದೆ.

ಈಗಾಗಲೇ ವಿಭಿನ್ನ ಪ್ರಚಾರದಿಂದ ಸದ್ದು ಮಾಡಿರುವ  ʼಕಲ್ಕಿ 2898 ಎಡಿʼ ಕ್ಯಾರೆಕ್ಟರ್‌ ಪೋಸ್ಟರ್‌, ಟೀಸರ್‌ ನಿಂದ ಗಮನ ಸೆಳೆದಿದೆ. ಪ್ರಭಾಸ್‌, ಅಮಿತಾಭ್‌, ಕಮಲ್‌ ಹಾಸನ್‌ , ದೀಪಿಕಾ ಪಡುಕೋಣೆ, ದಿಶಾ ಪಟಾನಿ ಮೊದಲಾದವರು ನಟಿಸಿದ್ದಾರೆ. ಈ ಕಾರಣದಿಂದಲೂ ಚಿತ್ರ ದೊಡ್ಡಮಟ್ಟದಲ್ಲಿ ಗಮನ ಸೆಳೆದಿದೆ.

ಪ್ರೇಕ್ಷಕರು ದುಬಾರಿ ವಿಎಫ್‌ ಎಕ್ಸ್‌  ದೃಶ್ಯಗಳನ್ನು ರೋಮಂಚನಗೊಂಡಿದ್ದಾರೆ.

ವರ್ಷದ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ʼಕಲ್ಕಿ 2898 ಎಡಿʼ ಇದೇ ಜೂನ್‌ 27 ರಂದು ರಿಲೀಸ್‌ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next