Advertisement

ಇಂದಿನಿಂದ ಕಾಳಿದಾಸ ಮೇಷ್ಟ್ರ ಕ್ಲಾಸ್‌

09:41 AM Nov 23, 2019 | mahesh |

ಜಗ್ಗೇಶ್‌ ನಾಯಕರಾಗಿರುವ “ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರ ಇಂದು ತೆರೆಕಾಣುತ್ತಿದೆ. ಕವಿರಾಜ್‌ ನಿರ್ದೇಶಿಸಿರುವ ಈ ಚಿತ್ರದಲ್ಲಿ ಮೇಘನಾ ರಾಜ್‌ ನಾಯಕಿ. ಈಗಾಗಲೇ ಚಿತ್ರದ ಹಾಡು ಹಾಗೂ ಟ್ರೇಲರ್‌ ಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರತಂಡಕ್ಕೆ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ. ಕಾಮಿಡಿ ಹಿನ್ನೆಲೆಯಲ್ಲಿ ಸಾಗುವ ಈ ಸಿನಿಮಾದಲ್ಲಿ ಗಂಭೀರ ವಿಷಯವನ್ನು ಹೇಳಲಾಗಿದೆಯಂತೆ.

Advertisement

ಕವಿರಾಜ್‌ ನಿರ್ದೇಶನದ ಈ ಚಿತ್ರ ನೈಜ ಘಟನೆಯನ್ನು ಆಧರಿಸಿ ಮಾಡಲಾಗಿದೆ. ದುಬೈನಲ್ಲಿ ಎಂಟನೆ ತರಗತಿಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿಯೇ ನಿರ್ದೇಶಕರಿಗೆ ಕಥೆ ರಚಿಸಲು ಕಾರಣವಾಯಿತಂತೆ. ಆ ಅಂಶವನ್ನಿಟ್ಟುಕೊಂಡು ಕವಿರಾಜ್‌ ಈ ಸಿನಿಮಾ ಮಾಡಿದ್ದಾರೆ. ಹಾಗಂತ ಇದು ಗಂಭೀರ ಸಿನಿಮಾವಲ್ಲ. ಚಿತ್ರದಲ್ಲಿ ಸಾಕಷ್ಟು ಮನರಂಜನೆಯ ಅಂಶಗಳನ್ನು ಸೇರಿಸಲಾಗಿದೆ.

ಜಗ್ಗೇಶ್‌ ಅವರು ಈ ಚಿತ್ರದಲ್ಲಿ ಕನ್ನಡ ಶಿಕ್ಷಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮರ್ಥ್ಯ ಮೀರಿ ಮಕ್ಕಳನ್ನು ದೊಡ್ಡ ಶಾಲೆಗೆ ಸೇರಿಸುವ ಪೋಷಕರು, ಶಿಕ್ಷಣ ವ್ಯವಸ್ಥೆಯ ದುರುಪಯೋಗ, ಮಧ್ಯಮ ವರ್ಗದ ತೊಂದರೆ ಸೇರಿದಂತೆ ಹಲವು ಅಂಶಗಳ ಸುತ್ತ ಈ ಸಿನಿಮಾ ಸಾಗುತ್ತದೆಯಂತೆ. ಗಂಭೀರ ವಿಷಯವನ್ನು ಹಾಸ್ಯಮಯವಾಗಿ ಹೇಳುವ ಜೊತೆಗೆ ಚಿತ್ರದಲ್ಲೊಂದು ಸಂದೇಶವನ್ನು ನೀಡಲಾಗಿದೆಯಂತೆ.

ಜೊತೆಗೆ ಈ ಚಿತ್ರದ ಪ್ರಮೋಶನ್‌ ಸಾಂಗ್‌ನಲ್ಲಿ ಕನ್ನಡದ 19ಕ್ಕೂ ಹೆಚ್ಚು ನಟಿಯರು ಹೆಜ್ಜೆ ಹಾಕಿದ್ದಾರೆ. ಚಿತ್ರದಲ್ಲಿ ಮೇಘನಾ ಅವರಿಗೂ ಒಳ್ಳೆಯ ಪಾತ್ರವಿದೆಯಂತೆ. ತಮ್ಮ ಪಾತ್ರದ ಬಗ್ಗೆ ಮಾತಾನಡುವ ಮೇಘನಾ, “ಅದೊಂದು “ಕಾಳಿ’ ತರಹದ ಪಾತ್ರ. ಒಂದರ್ಥದಲ್ಲಿ ಕಾಳಿ ಅಂದುಕೊಂಡರೂ ತಪ್ಪಿಲ್ಲ. ಕಥೆಯಲ್ಲಿ ಕಾಳಿ ಇದ್ದಂತೆ. ಕನ್ನಡ ಮೇಷ್ಟ್ರು ಒಬ್ಬರ ವಿರುದ್ದವಾಗಿ ಇರುವ ಪಾತ್ರವದು. ಇಂಗ್ಲೀಷ್‌
ತುಂಬ ಓದಿಕೊಂಡವಳು. ಒಂದು ರೀತಿಯ ಹೈಫೈ ಹುಡುಗಿ. ಈಗಿನ ಟ್ರೆಂಡ್‌ ಸ್ಟೋರಿ.  ನ್ನಡದವರಾಗಿದ್ದೂ ಇಂಗ್ಲೀಷ್‌ ವ್ಯಾಮೋಹ ಬೆಳೆಸಿಕೊಂಡಂತವಳು. ತನ್ನ ಮಗುವಿಗೂ ಇಂಗ್ಲೀಷ್‌ ಕಲಿಸಬೇಕು, ಆ ಶಾಲೆನೇ ಬೇಕೆಂಬ ಆಸೆ ಪಡುವ ಪಾತ್ರ. ಹಾಗಾಗಿ ಅದು ಕಾಳಿಯಂತೆ ಕಾಣುತ್ತೆ’ ಎನ್ನುತ್ತಾರೆ.

ಚಿತ್ರದಲ್ಲಿ ಅಂಬಿಕ, ತಬಲಾ ನಾಣಿ, ಟಿ ಎಸ್‌ ನಾಗಾಭರಣ, ಸುಂದರ್‌, ಯತಿರಾಜ್‌, ಉಷಾ ಭಂಡಾರಿ, ರಘು ರಾಮನಕೊಪ್ಪ ಸೇರಿದಂತೆ ಅನೇಕರು ನಟಿಸಿದ್ದಾರೆ. ಯು. ಆರ್‌ ಉದಯ ಕುಮಾರ್‌ ಈ ಚಿತ್ರದ ನಿರ್ಮಾಪಕರು. ಚಿತ್ರಕ್ಕೆ ಗುರುಕಿರಣ್‌ ಸಂಗೀತ, ಗುಂಡ್ಲುಪೇಟೆ ಸುರೇಶ್‌ ಛಾಯಾಗ್ರಹಣ, ಕೆ ಎಂ ಪ್ರಕಾಶ್‌ ಸಂಕಲನ, ಥ್ರಿಲ್ಲರ್‌ ಮಂಜು ಸಾಹಸ, ಮೋಹನ್‌ ಬಿ ಕೆರೆ ಕಲಾ ನಿರ್ದೇಶನವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next