Advertisement

ವಿಭಿನ್ನ ಕರಪತ್ರದಿಂದ ಗಮನ ಸೆಳೆದ ಕಲ್ಕೆರೆಯ ಗಂಗಮ್ಮ ಪಡೆದ ಮತ ಎಷ್ಟು ಗೊತ್ತಾ?

10:00 AM Dec 31, 2020 | Team Udayavani |

ತುಮಕೂರು: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಭಿನ್ನ ರೀತಿಯಲ್ಲಿ ಕರಪತ್ರ ಮಾಡಿಸುವ ಮೂಲಕ ರಾಜ್ಯದ ಎಲ್ಲರ ಗಮನ ಸೆಳೆದಿದ್ದ ಹೆಬ್ಬೂರು ಗ್ರಾಪಂ ಕಲ್ಕರೆಯ ಸ್ಪರ್ಧಿಸಿದ್ದ ಎಚ್‌.ಗಂಗಮ್ಮ ಸೋಲುಕಂಡಿದ್ದಾರೆ.

Advertisement

ಕಲ್ಕೆರೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗಂಗಮ್ಮ ಎರಡು ಮತಗಳನ್ನು ಪಡೆದಿದ್ದಾರೆ. ಅವರ ಎದುರು ಟಿ.ಎಂ.ತಿಮ್ಮೇಗೌಡ 453 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ನಾನು ಗೆದ್ದರೆ ಏನು ಮಾಡುತ್ತೇನೆ, ಸೋತರೆ ಏನು ಮಾಡುತ್ತೇನೆ ಎಂದು ತಮ್ಮ ಕರಪತ್ರದಲ್ಲಿ ಮುದ್ರಿಸಿದ್ದ ಎಚ್‌.ಗಂಗಮ್ಮ ಪರಾಭವಗೊಂಡಿದ್ದು, ಸೋತರೆ ಅನರ್ಹವಾಗಿ ಪಡೆದಿರುವ 25 ಕುಟುಂಬಗಳ ಪಡಿತರ ಚೀಟಿ ರೇಷನ್‌ ಕಾರ್ಡ್‌ ರದ್ದು ಮಾಡಿಸುವುದು, ಸರ್ಕಾರಕ್ಕೆ ಸುಳ್ಳು ಮಾಹಿತಿ ಕೊಟ್ಟು ಹಣ ಪಡೆಯುತ್ತಿರುವ 40 ಕುಟುಂಬಗಳ ಫೆಕ್ಷನ್‌ ಮೈತ್ರಿ, ಮನಸ್ವಿನಿ, ವಿಧವಾ ವೇತನ ಯೋಜನೆಯ ಹಣವನ್ನು ನಿಲ್ಲಿಸುವುದು ಸೇರಿದಂತೆ ಇತರ ಕೆಲಸ ಮಾಡುತ್ತಾರೋ ಇಲ್ಲವೋ ನೋಡಬೇಕಿದೆ.

ಇದನ್ನೂ ಓದಿ:ಗುರುವಾರ ಮುಂಜಾನೆ 4.45ರ ವರೆಗೆ ನಡೆದ ಬಂಟ್ವಾಳ ತಾಲೂಕಿನ ಮತ ಎಣಿಕೆ! ತಡರಾತ್ರಿಯ ಫಲಿತಾಂಶಗಳು

Advertisement

Udayavani is now on Telegram. Click here to join our channel and stay updated with the latest news.

Next