Advertisement
ಸಭೆ ನಡೆಸಿದರೆ ಸಾಕೆ?ಕಲ್ಚಪೆì ತ್ಯಾಜ್ಯ ವಿಲೇವಾರಿ ಘಟಕದ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ವಿಷಯ ಪ್ರಸ್ತಾವಿಸಿದ ಸದಸ್ಯ ಗೋಕುಲ್‌ದಾಸ್, 10 ವರ್ಷದ ಬಳಿಕ ಶಾಸಕರು ಅಲ್ಲಿಗೆ ಭೇಟಿ ನೀಡಿದ್ದಾರೆ. ನ.ಪಂ.ತ್‌ನಲ್ಲೂ ಸಭೆ ನಡೆಸಿದ್ದಾರೆ. ಅದಾದ ಬಳಿಕ ಏನಾಗಿದೆ ಎಂಬ ಮಾಹಿತಿ ಇಲ್ಲ. ಇದು ಪತ್ರಿಕಾ ಹೇಳಿಕೆಗಷ್ಟೇ ಸೀಮಿತವಾಗಿದೆ ಎಂದು ಟೀಕಿಸಿದರು. ದುಗಲಡ್ಕದಲ್ಲಿ 21 ಎಕ್ರೆ ಜಾಗವಿದೆ ಎಂದು ಈ ಹಿಂದೆ ಮಾಹಿತಿ ನೀಡಿದ್ದಿರಿ. ಆ ಜಾಗ ಏನಾಯಿತು ಎಂದು ಪ್ರೇಮಾ ಟೀಚರ್ ಪ್ರಶ್ನಿಸಿದರು. ಆ ಜಾಗಕ್ಕೆ ಅಂದೇ ಆಕ್ಷೇಪಣೆಗಳು ಬಂದಿವೆ ಎಂದು ಸದಸ್ಯ ಶಿವಕುಮಾರ್ ಹಾಗೂ ಶೀಲಾವತಿ ಹೇಳಿದರು. ಮುಖ್ಯಾಧಿಕಾರಿ ಪ್ರತಿಕ್ರಿಯಿಸಿ, ಸಾರ್ವಜನಿಕರು ಸಹಕರಿಸದರೆ ತ್ಯಾಜ್ಯ ವಿಲೇವಾರಿ ಕಷ್ಟದ ಕೆಲಸವಲ್ಲ ಎಂದರು.
ಕಂದಡ್ಕ ಸಿ.ಆರ್.ಸಿ. ಕಾಲನಿ ಶ್ಮಶಾನದ ಕಾಡು ಕಡಿದ ಬಗ್ಗೆ ಪಾವತಿಸಿದ ಬಿಲ್ಲಿನ ವಿಚಾರದಲ್ಲಿ ಅಧ್ಯಕ್ಷರು ಆಕ್ಷೇಪ ವ್ಯಕ್ತಪಡಿಸಿದ ವಿಚಾರ ಏನಾಯತು ಎಂದು ಪ್ರಕಾಶ್ ಹೆಗ್ಡೆ ಪ್ರಶ್ನಿಸಿದರು. ಉತ್ತರಿಸಿದ ಮುಖ್ಯಾಧಿಕಾರಿ, ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಬರೆಯಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದರು. ತನಿಖೆಯಲ್ಲಿ ಈ ತನಕ ಯಾವುದೇ ಪ್ರಗತಿಯಾಗಿಲ್ಲ. ಮರು ತನಿಖೆಗೆ ಬರೆಯುವುದು ಉತ್ತಮ ಎಂದು ಗಿರೀಶ್ ಕಲ್ಲಗದ್ದೆ ಹೇಳಿದರೆ, ಈ ಅವ್ಯವಹಾರಕ್ಕೆ ಸಹಕರಿಸಿದವರನ್ನು ತನಿಖೆ ಮಾಡಬೇಕು ಎಂದು ಪ್ರಕಾಶ್ ಹೆಗ್ಡೆ ಆಗ್ರಹಿಸಿದರು. ಮರು ತನಿಖೆಗೆ ಬರೆಯಲು ನಮ್ಮದೇನೂ ಅಭ್ಯಂತರವಿಲ್ಲ ಎಂದು ಹೇಳಿದ ಸದಸ್ಯ ಶಿವಕುಮಾರ್ ಕಂದಡ್ಕ, 2016ರಲ್ಲಿ ಪ್ರಕಾಶ್ ಹೆಗ್ಡೆ ಅವರು ಅಧ್ಯಕ್ಷರಾಗಿದ್ದಾಗ ಕಂದಡ್ಕದ ಮುತ್ತುಮಾರಿಯಮ್ಮ ದೇವಸ್ಥಾನದ ಹತ್ತಿರ ಕಾಡು ಕಡಿಯಲಾಗಿದೆ ಎಂದು 8,600 ರೂ. ಡ್ರಾ ಮಾಡಲಾಗಿದೆ. ಅದರ ಬಗ್ಗೆಯೂ ತನಿಖೆ ನಡೆಯಬೇಕು ಒತ್ತಾಯಿಸಿದರು.
Related Articles
ನ.ಪಂ.ನ ವಿವಿಧ ಸ್ಟಾಲ್‌ಗಳಿಗೆ ನಡೆದ ನಡೆದ ಬಹಿರಂಗ ಏಲಂ ಮಂಜೂರು ಮಾಡುವ ಕುರಿತು ಸುದೀರ್ಘ ಚರ್ಚೆ ನಡೆಯಿತು. ಮೀನು ಮಾರುಕಟ್ಟೆಯ ಕೇವಲ ಕೆಲವು ಸ್ಟಾಲ್‌ಗಳನ್ನು ಮಾತ್ರ ಏಕೆ ಏಲಂ ಮಾಡಿದ್ದೀರಿ? ಎಲ್ಲವನ್ನು ಏಕಕಾಲದಲ್ಲಿ ಏಕೆ ಮಾಡಿಲ್ಲ ಎಂದು ಗೋಕುಲ್‌ದಾಸ್ ಪ್ರಶ್ನಿಸಿದರು.
Advertisement
ವಿದ್ಯುತ್ ಬಿಲ್ ಬಾಕಿ: ಸುದಿನ ವರದಿ ಚರ್ಚೆನ.ಪಂ.ನಿಂದ ಮೆಸ್ಕಾಂಗೆ ವಿದ್ಯುತ್ ಬಿಲ್ ಕಟ್ಟಲು ಬಾಕಿ ಇದೆ ಎಂಬ ಮಂಗಳವಾರದ ಉದಯವಾಣಿ ಸುದಿನ ವರದಿ ಪ್ರಸ್ತಾವಿಸಿದ ಸದಸ್ಯ ಗೋಕುಲ್‌ದಾಸ್, ಈ ಬಗ್ಗೆ ಉತ್ತರ ನೀಡುವಂತೆ ಆಗ್ರಹಿಸಿದರು. ಎಂಜಿನಿಯರ್ ಶಿವಕುಮಾರ್ ಉತ್ತರಿಸಿ, ಎಸ್‌ಎಫ್‌ಸಿಯಿಂದ ಬಂದ ಅನುದಾನಕ್ಕಿಂತ ವಿದ್ಯುತ್ ಖರ್ಚು ಜಾಸ್ತಿಯಾದ ಕಾರಣ ಪಾವತಿಸಲು ಬಾಕಿ ಇದೆ ಎಂದರು. ಹಲವು ಕಡೆಗಳಲ್ಲಿ ವಿದ್ಯುತ್ ಸೋರಿಕೆಯಾಗುತ್ತಿದೆ. ಸಮಗ್ರ ಸರ್ವೆ ಮಾಡಿಸಿ ಎಂದು ಗೋಕುಲ್ ದಾಸ್ ಆಗ್ರಹಿಸಿದರು. ಮೊದಲು ಎಲ್ಲ ಸದಸ್ಯರ ಮನೆಗೆ ಹೋಗಿ ಸೋರಿಕೆಯಾಗುತ್ತಿದ್ದೆಯೇ ಎಂದು ಪರಿಶೀಲನೆ ಮಾಡಬೇಕು ಎಂದು ಪ್ರಕಾಶ್ ಹೆಗ್ಡೆ ಧ್ವನಿಗೂಡಿಸಿದರು. ಕುಡಿಯುವ ನೀರಿಗೆ ವಿದ್ಯುತ್ ಹೆಚ್ಚು ಬಿಲ್ ಜಾಸ್ತಿ ಬರುತ್ತಿದ್ದು, ನೀರಿನ ಕರ ಸಂಗ್ರಹವಾಗದೆ ಪಂಚಾಯತ್‌ಗೆ ನಷ್ಟವಾಗುತ್ತಿದೆ. ಶುಲ್ಕ ಸಂಗ್ರಹಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.