Advertisement

ಕ್ಯಾನ್ಸರ್‌ಗೆ ರೋಬೊಟಿಕ್‌ ಸರ್ಜರಿ ವರದಾನ

03:17 PM Feb 14, 2021 | |

ಕಲಬುರಗಿ: ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಅತ್ಯಾಧುನಿಕ ಮತ್ತು ನಾವಿನ್ಯ ತಂತ್ರಜ್ಞಾನ ಆವಿಷ್ಕಾರಗೊಂಡಿದ್ದು, ಇದರಿಂದ ಕಡಿಮೆ ಸಮಯ ಮತ್ತು ವೆಚ್ಚದಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ಹೈದರಾಬಾದ್‌ನ ಅಮೆರಿಕನ್‌ ಆಂಕಾಲಜಿ ಇನ್‌ಸ್ಟಿಟ್ಯೂಟ್‌ ತಜ್ಞ ಡಾ| ಜಗದೀಶ್ವರ ಗೌಡ ಹೇಳಿದರು.

Advertisement

ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಶನಿವಾರ ಎಂಆರ್‌ಎಂಸಿ, ಅಮೆರಿಕನ್‌ ಆಂಕಾಲಜಿ ಇನ್‌ ಸ್ಟಿಟ್ಯೂಟ್‌, ಸಿಟಿಝೆನ್ಸ್‌ ಹಾಸ್ಟಿಟಲ್‌ ಸಹಯೋಗದಲ್ಲಿ ಕ್ಯಾನ್ಸರ್‌ ಶಸ್ತ್ರ ಚಿಕಿತ್ಸೆಯಲ್ಲಿ ಇತ್ತೀಚೆಯ ಹೊಸ ತಂತ್ರಜ್ಞಾನ ಬೆಳವಣಿಗೆ ಕುರಿತು ಹಮ್ಮಿಕೊಂಡಿದ್ದ ನಿರಂತರ ವೈದ್ಯಕೀಯ ಕಾರ್ಯಾಗಾರ (ಸಿಎಂಇ)ದಲ್ಲಿ ಅವರು ಮಾತನಾಡಿದರು.

ಹೊಸ ತಂತ್ರಜ್ಞಾನ ಬಳಕೆ ಮಾಡಿಕೊಂಡು ಚಿಕಿತ್ಸೆ ನೀಡುವುದರಿಂದ ಶಸ್ತ್ರ ಚಿಕಿತ್ಸೆ ಮಾಡುವುದು ಕೆಲವೊಂದು ಪ್ರಕರಣಗಳಿಗೆ ಅಗತ್ಯವಾಗುವುದಿಲ್ಲ. ರೋಬೊಟಿಕ್‌ ಸರ್ಜರಿ ಕ್ಯಾನ್ಸರ್‌ನ್ನು ಪರಿಣಾಕಾರಿಯಾಗಿ ನಿರ್ವಹಿಸಬಲ್ಲ ವಿಧಾನವಾಗಿದೆ.
ರೋಬೋಟಿಕ್‌ ಸರ್ಜರಿ ಕ್ಯಾನ್ಸರ್‌ ರೋಗಿಗಳಿಗೆ ವರದಾನ ಎಂದರು.

ಕ್ಯಾನ್ಸರ್‌ ಚಿಕಿತ್ಸೆ ಕ್ಷೇತ್ರದಲ್ಲಿ ಆಗಿರುವ ಬದಲಾವಣೆ ಮತ್ತು ತಂತ್ರಜ್ಞಾನ ಬಳಕೆ ಮಾಡಿಕೊಂಡು ಅತ್ಯಲ್ಪ ಸಮಯದಲ್ಲಿ ಪರಿಣಾಮಕಾರಿ ಚಿಕಿತ್ಸೆ
ನೀಡಬಹುದಾಗಿದೆ. ರೋಬೋಟಿಕ್‌ ಸರ್ಜರಿ ವಿಧಾನದಿಂದ ಕ್ಯಾನ್ಸರ್‌ ಪರಿಣಿತರಲ್ಲದವರೂ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು
ಅರಿತುಕೊಳ್ಳಬಹುದಾಗಿದೆ ಎಂದರು.

ಗಂಟಲು ಮತ್ತು ಥೈರಾಡ್‌ ಕ್ಯಾನ್ಸರ್‌ ಕಾಣಿಸಿಕೊಂಡವರಿಗೆ ಕನಿಷ್ಠ 10ರಿಂದ 30ಮಿಲಿ ಕ್ಯೂರಿಯಷ್ಟು ಬಳಸಿಕೊಂಡು ವಿಕಿರಣ ಚಿಕಿತ್ಸೆ
ನೀಡಬಹುದಾಗಿದೆ. ಹೆಚ್ಚು ಕ್ಯಾನ್ಸರ್‌ ಕಣಗಳಿದ್ದರೆ ಅದನ್ನು 100ಮಿಲಿ ಕ್ಯೂರಿಯಷ್ಟು ಬಳಸಬಹುದಾಗಿದೆ ಎಂದು ಮಾಹಿತಿ ನೀಡಿದರು.

Advertisement

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ಎಂಆರ್‌ ಎಂಸಿ ಡೀನ್‌ ಡಾ| ಉಮೇಶ್ಚಂದ್ರ, ಬದಲಾದ ಜೀವನಶೈಲಿಯಿಂದ ಕ್ಯಾನರ್ನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲವೊಂದು ಪದ್ಧತಿ ಪಾಲಿಸುವ ಮೂಲಕ ರೋಗಮುಕ್ತರಾಗಬಹುದು ಎಂದರು.

ಎಂಆರ್‌ಎಂಸಿ ಸರ್ಜರಿ ವಿಭಾಗ ಮುಖ್ಯಸ್ಥ ಡಾ| ವಿಜಯಕುಮಾರ ಕಪ್ಪಿಕೇರಿ, ಡಾ| ರಾಜಶೇಖರ ಪಾಟೀಲ, ಪ್ರಾಧ್ಯಾಪಕರಾದ ಡಾ| ಎಸ್‌.ಎಸ್‌.
ಕಾರಭಾರಿ, ಡಾ| ಸುರೇಶ ಪಾಟೀಲ, ಕೆಬಿಎನ್‌ ಕಾಲೇಜಿನ ಡಾ| ರವೀಂದ್ರ ದೇವಣಿ, ಇಎಸ್‌ ಐಸಿ ಕಾಲೇಜಿನ ಡಾ| ರವೀಂದ್ರ ದಡೇದ,
ಡಾ| ವಿಜಯಕುಮಾರ ವೇಮೂರಿ, ಬಸವೇಶ್ವರ ಆಸ್ಪತ್ರೆಯ ಮೆಡಿಕಲ್‌ ಸಹ ಅಧೀಕ್ಷಕ ಡಾ| ಎಂ.ಆರ್‌. ಪೂಜಾರಿ, ಡಾ| ರವೀಂದ್ರ ಪಾಟೀಲ,
ಡಾ| ಡಿ.ಎಸ್‌.ಸಜ್ಜನ, ಎಂಆರ್‌ಡಿ ವಿಭಾಗದ ಮುಖ್ಯಸ್ಥ ಸದಾನಂದ ಮಹಾಗಾಂವ, ಡಾ| ಪ್ರೀತಿ ಕೊಣ್ಣೂರ ಹಾಗೂ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಓದಿ : ಶಿಥಿಲಾವಸ್ಥೆಯ ಕಚೇರಿಯನ್ನು ಸ್ವತಃ ಸ್ವಚ್ಚಗೊಳಿಸಿದ ಕಲಬುರಗಿ ತಹಶೀಲ್ದಾರ್

Advertisement

Udayavani is now on Telegram. Click here to join our channel and stay updated with the latest news.

Next