Advertisement

ಕಲಬುರಗಿ-ಯಾದಗಿರಿ ಪರಿಷತ್ ಚುನಾವಣೆ: ಬಿಜೆಪಿಯ ಬಿ.ಜಿ.ಪಾಟೀಲ್ ಪ್ರಯಾಸದ ಗೆಲುವು

02:06 PM Dec 14, 2021 | Team Udayavani |

ಕಲಬುರಗಿ: ತೀವ್ರ ಕುತೂಹಲ ಕೆರಳಿಸಿದ್ದ ಸ್ಥಳೀಯ ಸಂಸ್ಥೆಯ ರಾಜ್ಯ ವಿಧಾನ ಪರಿಷತ್ ಸದಸ್ಯ ಸ್ಥಾನದ ಕಲಬುರಗಿ- ಯಾದಗಿರಿ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಬಿ.ಜಿ.ಪಾಟೀಲ್  ಪ್ರಯಾಸದ ಗೆಲುವು ಸಾಧಿಸಿದ್ದಾರೆ.

Advertisement

ಇಲ್ಲಿನ ಗುಲ್ಬರ್ಗ ವಿವಿಯಲ್ಲಿ ನಡೆದ ಮತ ಎಣಿಕೆಯ ಅಂತೀಮವಾಗಿ ಬಿಜೆಪಿಯ 150 ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಬಿಜೆಪಿಯ ಬಿ ಜಿ ಪಾಟೀಲ್ 3453 ಮತಗಳನ್ನು ಪಡೆದಿದ್ದರೆ ಕಾಂಗ್ರೆಸ್ ನ ಶಿವಾನಂದ ಪಾಟೀಲ್ ಮರತೂರ  3305 ಮತಗಳನ್ನು ಪಡೆದು ಸೋಲು ಅನುಭವಿಸಿದರು.

ಇದನ್ನೂ ಓದಿ: ಬೆಳಗಾವಿ: ಪಕ್ಷೇತರ ಲಖನ್ ಜಾರಕಿಹೊಳಿಗೆ ಭರ್ಜರಿ ಜಯ: ಬಿಜೆಪಿಗೆ ಭಾರೀ ಮುಖಭಂಗ

ಒಟ್ಟಾರೆ ಚಲಾವಣೆಯಾದ 7079 ಕಾಂಗ್ರೆಸ್ ಬಿಜೆಪಿ ನಡುವೆ ನೇರ ಹಣಾ ಹಣಿ ಏರ್ಪಟ್ಟಿತ್ತು.

Advertisement

ಎಲ್ಲ ಸುತ್ತುಗಳಲ್ಲಿ ಸಮಬಲದ ಹೋರಾಟ ನಡೆದು ಕೊನೆಗೆ ಬಿ.ಜಿ.ಪಾಟೀಲ್ 151ಕ್ಕೂ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿದರು.

ದಾಖಲೆ ಗೆಲುವು:  ಬಿ.ಜಿ.ಪಾಟೀಲ್ ಗೆಲುವು ಸಾಧಿಸುವ ಮೂಲಕ ದಾಖಲೆ ನಿರ್ಮಿಸಿದ್ದು, ಈ ಕ್ಷೇತ್ರದಲ್ಲಿ ಎರಡು ಸಲ ಯಾರೂ ಗೆದ್ದಿಲ್ಲ. ಆದರೆ ಬಿ.ಜಿ. ಪಾಟೀಲ್ ಗೆಲುವು ಮೂಲಕ ಗೆಲುವು ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next