ಕಲಬುರಗಿ: ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಂದ ಉತ್ತಮ ಮಳೆ ಸುರಿಯುತ್ತಿದ್ದು, ಕಳೆದ 24 ಗಂಟೆಯಲ್ಲಿ ಕಲಬುರಗಿ ತಾಲೂಕಿನ ನೀಲಕೋಡ್ ಗ್ರಾಮದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ದಾಖಲಾಗಿದೆ.
ಮಂಗಳವಾರ ಬೆಳಿಗ್ಗೆ 8.30ರಿಂದ ಬುಧವಾರ ಬೆಳಿಗ್ಗೆ 8.30ರೊಳಗೆ ನೀಲಕೋಡ್ ಗ್ರಾಮದಲ್ಲಿ 131 ಮಿಮೀ ದಾಖಲೆಯ ಮಳೆ ಸುರಿದಿದೆ. ಉಳಿದಂತೆ ಕಲಬುರಗಿ ನಗರ ಸೇರಿ ಜಿಲ್ಲೆಯ ವಿವಿಧ ಭಾಗಗಳಲ್ಲೂ ಉತ್ತಮ ಆಗುತ್ತಿದೆ. ಈಗಲೂ ಜಿಟಿಜಿಟಿಯಾಗಿ ಮಳೆ ಸುರಿಯುತ್ತಲೇ ಇದೆ. ಎಲ್ಲೆಡೆಯೂ ತಣ್ಣನೆಯ ವಾತಾವರಣ ನಿರ್ಮಾಣವಾಗಿದೆ.
ಮರಗುತ್ತಿ ಗ್ರಾಮದಲ್ಲಿ 89 ಮಿಮೀ, ನೆದಲಗಿ ಗ್ರಾಮದಲ್ಲಿ 77 ಮಿಮೀ, ಹೇರೂರು ಕೆ. ಗ್ರಾಮದಲ್ಲಿ 64 ಮಿಮೀ, ಲಿಂಗಂಪಲ್ಲಿ ಗ್ರಾಮದಲ್ಲಿ 58 ಮಿಮೀ, ರೇವೂರ (ಬಿ) ಗ್ರಾಮದಲ್ಲಿ 57 ಮಿಮೀ, ಹರಸೂರು ಗ್ರಾಮ ಮತ್ತು ಶೇಷಗಿರಿವಾಡಿಯಲ್ಲಿ ತಲಾ 54 ಮಿಮೀ ಮಳೆ ದಾಖಲಾಗಿದೆ.