Advertisement

ಬಾಲಕಿಯ ರೇಪ್‌&ಮರ್ಡರ್‌ ಖಂಡಿಸಿ ಕಲಬುರಗಿ,ಚಿಕ್ಕೋಡಿ ಬಂದ್‌

11:54 AM Dec 28, 2017 | |

ಕಲಬುರಗಿ /ಚಿಕ್ಕೋಡಿ: ವಿಜಯಪುರ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಹಾಗೂ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ಡಿ. 28ರಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಕಲಬುರಗಿ ಮತ್ತು ಬೆಳಗಾವಿಯ ಚಿಕ್ಕೋಡಿ ವಲಯದಲ್ಲಿ  ಬಂದ್‌ಗೆ ಕರೆ ನಡೆಸಿ ಪ್ರತಿಭಟನೆ ನಡೆಸಲಾಗುತ್ತಿದೆ. 

Advertisement

ಕಲಬುರಗಿ ನಗರದಲ್ಲಿ  ಅಂಗಡಿ ಮುಂಗಟ್ಟುಗಳು ಬಾಗಿಲುಐ ತೆರೆದಿಲಲ. ಸಂಘಟನೆಯ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕೋಡಿಯ ರಾಯಭಾಗ, ಹಾರೋಗೇರಿ ಮತ್ತು ಅಥಣಿ ವಲಯದಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಗಡಿ ಮುಂಗಟ್ಟುಗಳು ತೆರೆದಿಲ್ಲ. ವಾಹನ ಸಂಚಾರ ವಿರಳವಾಗಿದೆ. 

ಬಿಗಿ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next