Advertisement

ಇಂದು ಕಳ್ಬೆಟ್ಟದ ದರೋಡೆಕೋರರು ಚಿತ್ರದ ಟ್ರೈಲರ್ ಬಿಡುಗಡೆ

10:29 AM Jun 25, 2018 | Harsha Rao |

ಬೆಂಗಳೂರು: ನಿರ್ದೇಶಕ ದೀಪಕ್ ಮಧುವನಹಳ್ಳಿ ಅವರ `ಕಳ್ಬೆಟ್ಟದ ದರೋಡೆಕೋರರು’ ಚಿತ್ರದ ಟ್ರೈಲರ್  ರಾಜ್ಯಾದ್ಯಂತ ಇಂದು ಬಿಡುಗಡೆಗೊಳ್ಳಲಿದೆ. `ಭ್ಯಾಗರಾಜ್’ ನ ನಂತರ ಇದು ಇವರ ನಿರ್ದೇಶನದ ಎರಡನೇ ಚಿತ್ರವಾಗಿದೆ ಅನುಷ್ ಶೆಟ್ಟಿ ಬರೆದಿರುವ ಕಳ್ಬೆಟ್ಟದ ದರೋಡೆಕೋರರು ಕಾದಂಬರಿಯನ್ನು ಆದರಿಸಿ ಸಿನಿಮಾ ಮಾಡಲು ಮುಂದಾದ ದೀಪಕ್ ಚಿತ್ರೀಕರಣ ಪೂರ್ಣಗೊಂಡಿದ್ದು ಜೂನ್ 25 ರಂದು ತೆರೆಮೇಲೆ ಕಾಣಲಿದೆ. 

Advertisement

‘ರಾಮಾ ರಾಮಾ ರೇ’ ಖ್ಯಾತಿಯ ನಟರಾಜ್ ಈ ಚಿತ್ರದ ನಾಯಕ ನಟರಾಜ್ ಗೆ `ರಾಧಾರಮಣ’ ಟಿವಿ  ಧಾರವಾಹಿಯ ಶ್ವೇತಾ ಪ್ರಸಾದ್ ಜೋಡಿಯಾಗಿದ್ದಾರೆ.

ಮೊದಲಬಾರಿಗೆ ಬ್ರಿಗೇಡ್ ಫಿಲಂ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣಗೊಂಡಿರುವ ಚಿತ್ರಕ್ಕೆ ಅನೂಪ್ ಸೀಲಿನ್ ಸಂಗೀತ ನೀಡಿದ್ದು ಚಿತ್ರಕ್ಕೆ ಕಿರಣ್ ಹಾಂಪುರ್, ಲವಿತ್ , ಪ್ರದೀಪ್ ಛಾಯಾಗ್ರಹಣ ಮಾಡಿದ್ದಾರೆ. ಅಮರಾವತಿ ಖ್ಯಾತಿಯ ಹೇಮಂತ್ ಸುಶಿಲ್, ಸುಂದರ್ ವೀಣಾ ಮತ್ತು ರಮಣ್ಣ ಮೊದಲಾದ ನಟರು ಈ ಚಿತ್ರದಲ್ಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next