Advertisement

ಕಾಳಾವರ: ದಲಿತ ಸಶಕ್ತೀಕರಣಕ್ಕೆ ಜಾಗೃತಿ ಸಮಿತಿ ರಚನೆ

08:55 AM Mar 29, 2018 | |

ಕುಂದಾಪುರ: ನಾಯಕರ ಹಿಂದೆ ಹೋಗುವ ಸಂಪ್ರದಾಯ ಬಿಟ್ಟು, ಸಮಗ್ರ ಶಿಕ್ಷಣವನ್ನು ಮೈಗೂಡಿಸಿಕೊಂಡು ತನ್ನ ಸ್ವಂತ ಕಾಲ ಮೇಲೆ ನಿಲ್ಲುವ ಜೀವನ ಶಿಕ್ಷಣ ಪಡೆದುಕೊಂಡಾಗ ದಲಿತರು ತಮ್ಮನ್ನು ತಾವು ಮುಖ್ಯವಾಹಿನಿಯತ್ತ ಸಾಗಲು ಸಾಧ್ಯ ಎಂದು ಕಾಳಾವರ ದಲಿತ ಜಾಗೃತಿ ಸಮಿತಿ ಅಧ್ಯಕ್ಷ ಮೋಹನಚಂದ್ರ ಕಾಳಾವರ ಹೇಳಿದರು.
 
ಅವರು ಕಾಳಾವರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ದಲಿತ ಜಾಗೃತ ಸಮಿತಿಯ ಉದ್ಘಾಟನ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಅಂಬೇಡ್ಕರ್‌ ಭಾವಚಿತ್ರಕ್ಕೆ  ದೀಪಿ ಬೆಳಗಿಸಿ ಮಾತನಾಡಿದ ಉಪನ್ಯಾಸಕ ಸುಧಾಕರ ವಕ್ವಾಡಿ, ಅಂಬೇಡ್ಕರ್‌ ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗುವು ದಕ್ಕೆ ಮೊದಲು  ಅವರನ್ನು° ಅರ್ಥ ಮಾಡಿಕೊಳ್ಳಬೇಕು. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಈ ಮೂರು ಪ್ರಮುಖ ಅಂಶಗಳಾದರೆ ಅಂಬೇಡ್ಕರ್‌ ಅವರ ಪಂಚ ಸೂತ್ರಗಳನ್ನು ದಲಿತ ನಾಯಕರು ದಲಿತರಿಗೆ ತಿಳಿ ಹೇಳಬೇಕು. ಸಂವಿಧಾನಬದ್ಧವಾಗಿ ಸಿಗಬೇಕಾದ ಸವಲತ್ತು  ಪಡೆದುಕೊಳ್ಳುವ ಮೊದಲು ಅದಕ್ಕೆ ಸಂಬಂಧಿಸಿ ಇಲಾಖೆ ಮತ್ತು ಅದಕ್ಕೆ ಬೇಕಾದ ದಾಖಲೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಆಗ ಸದೃಢತೆ, ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು. 

ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಪತ್ರಕರ್ತ ಜಯಶೇಖರ್‌ ಮಡಪ್ಪಾಡಿ ಈಗಾಗಲೇ ಇರುವ ಸಾಕಷ್ಟು ದಲಿತ ಸಂಘಟನೆಗಳು ನಾಯಕತ್ವ ಕೇಂದ್ರೀಕೃತ ಸಂಘಟನೆಗಳಾಗುತ್ತಿರುವ ಈ ಅಪಾಯಕಾರಿ ಸನ್ನಿವೇಶದಲ್ಲಿ ದಲಿತರು ಜಾಗೃತರಾಗಬೇಕಾಗಿದೆ. ದಲಿತ ನಾಯಕರು ಏನು ಮಾಡಬೇಕು ಎಂಬುದನ್ನು ದಲಿತರು ತೀರ್ಮಾನಿಸುವಂತಾದಾಗ ಸಂಘಟನೆಗಳು ಬಲಗೊಳ್ಳುತ್ತವೆ. ಅದಕ್ಕಾಗಿ ಪ್ರತಿಯೊಬ್ಬ ದಲಿತನೂ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ಶಿಕ್ಷಣ ಪಡೆಯಬೇಕು. ದಲಿತ ಸ್ವತಃ ನಾನು ಸಮಾಜದ ಇತರ ವರ್ಗಗಳಂತೆ ಎನ್ನುವ ಭಾವನೆಯಿಂದ ಸಮಾಜದಲ್ಲಿ ಬೆರೆತಾಗ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. 

ಅಧ್ಯಕ್ಷತೆಯನ್ನು ಮಂಜುನಾಥ ಮೇಸಿŒ ವಹಿಸಿದ್ದರು.  ಎಲ್‌.ಐ.ಸಿ.ಯ ಮಂಜುನಾಥ ಬಿ., ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್‌ ಇಲಾಖೆಯ ಸಂಪನ್ಮೂಲ ವ್ಯಕ್ತಿ ನಾಗರಾಜ್‌ ಎಸ್‌.ವಿ. ಉಪಸ್ಥಿತರಿದ್ದರು. ಶಿಕ್ಷಕ ಕುಮಾರ್‌ ನಿರೂಪಿಸಿದರು. ಮೋಹನ್‌ಚಂದ್ರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next