Advertisement

ಟಾಲಿವುಡ್‌ ರಂಗದ ʼಕಲಾ ತಪಸ್ವಿʼ, ದಿಗ್ಗಜ ನಿರ್ದೇಶಕ ಕೆ.ವಿಶ್ವನಾಥ್‌ ನಿಧನ

09:02 AM Feb 03, 2023 | Team Udayavani |

ಹೈದ್ರಾಬಾದ್: ಟಾಲಿವುಡ್‌ ಸಿನಿಮಾ ರಂಗದ ದಿಗ್ಗಜ, ಖ್ಯಾತ ನಿರ್ದೇಶಕ ಕೆ.ವಿಶ್ವನಾಥ್‌ (92) ಗುರುವಾರ ರಾತ್ರಿ ವಯೋಸಹಜ ಕಾಯಿಲೆಯಿಂದ ನಿಧನರಾದರು.

Advertisement

ಟಾಲಿವುಡ್‌ ನಲ್ಲಿ ‘ಕಲಾ ತಪಸ್ವಿ’ ಎಂದೇ ಹೆಸರುವಾಸಿಯಾಗಿದ್ದ ಕೆ.ವಿಶ್ವನಾಥ್ ಕಳೆದ ಕೆಲ ಸಮಯದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

1951 ರಲ್ಲಿ ತೆಲುಗು-ತಮಿಳು ಚಲನಚಿತ್ರ ʼಪಾತಾಳ ಭೈರವಿʼಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು 1965 ರಲ್ಲಿ ʼ ಆತ್ಮ ಗೌರವಂʼ ಮೂಲಕ ನಿರ್ದೇಶಕನಾಗಿ ಕಾಲಿಟ್ಟರು. ಆ ಬಳಿಕ ಅವರ ನಿರ್ದೇಶನದ ʼ ಶಂಕರಾಭರಣಂʼ ಸಿನಿಮಾ ಆ ಕಾಲದಲ್ಲಿ ಸೂಪರ್‌ ಹಿಟ್‌ ಆಗಿ, ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿತು.

ಟಾಲಿವುಡ್‌ ನಲ್ಲಿ ʼಸಪ್ತಪದಿʼ, ʼಸಿರಿವೆನ್ನೆಲʼ, ʼಸೂತ್ರಧಾರಳುʼ, ʼಶುಭಲೇಖʼ, ʼಶ್ರುತಿಲಯಲುʼ, ಶುಭ ಸಂಕಲ್ಪʼ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದೂ ಮಾತ್ರವಲ್ಲದೆ, ಹಿಂದಿಯಲ್ಲಿ ʼಈಶ್ವರ್ʼ, ʼಸಂಜೋಗ್ʼ,ʼ ಸುರ್ ಸಂಗಮ್ʼ, ʼಸಂಗೀತ್ʼ, ʼಧನ್ವನ್ʼ ಮುಂತಾದ ಸಿನಿಮಾಗಳನ್ನು ಮಾಡಿದ್ದಾರೆ.

ಹತ್ರ ಹತ್ರ ಸುಮಾರು 50 ಚಿತ್ರಗಳನ್ನು ನಿರ್ದೇಶನ ಮಾಡಿರುವ ಅವರಿಗೆ 7 ರಾಜ್ಯ ನಂದಿ ಪ್ರಶಸ್ತಿ, 10 ಫಿಲ್ಮ್‌ ಫೇರ್‌ ಹಾಗೂ 2017 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯೂ ಅವರಿಗೆ ಲಭಿಸಿತು.

Advertisement

 

 

 

Advertisement

Udayavani is now on Telegram. Click here to join our channel and stay updated with the latest news.

Next