Advertisement

ಕಳಸ: ಬೆಂಕಿ ಹತ್ತಿ ಭದ್ರಾ ನದಿಗೆ ತುಂಡಾಗಿ ಬಿದ್ದ ವಿದ್ಯುತ್ ತಂತಿ

12:53 PM Jul 24, 2023 | Team Udayavani |

ಚಿಕ್ಕಮಗಳೂರು: ಕಾಫಿನಾಡ ಮಲೆನಾಡು ಭಾಗದಲ್ಲಿ ಗಾಳಿ-ಮಳೆ ಅಬ್ಬರ ಮುಂದುವರಿದಿದ್ದು, ವಿದ್ಯುತ್ ತಂತಿಯೊಂದಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ಭದ್ರಾ ನದಿಗೆ ತುಂಡಾಗಿ ಬಿದ್ದ ಘಟನೆ ನಡೆದಿದೆ.

Advertisement

ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಬಳಿ ವಿದ್ಯುತ್ ತಂತಿ ಭದ್ರಾ ನದಿಗೆ ಬಿದ್ದಿದೆ. ಭಾರೀ ಗಾಳಿ-ಮಳೆ ಮಧ್ಯೆ ದುರಸ್ಥಿ ಕೂಡ ಕಷ್ಟವಾದ ಕಾರಣ ಸುತ್ತಲಿನ ಹೊರನಾಡು, ಬಲಿಗೆ, ಸೇರಿದಂತೆ ಹತ್ತಾರು ಹಳ್ಳಿಗಳು ಕತ್ತಲಲ್ಲಿ ಜೀವನ ನಡೆಸಬೇಕಾಗಿದೆ.

ತುಂಬಿದ ಮದಗದ ಕೆರೆ: ಮಾಯದಂತ ಮಳೆಯಿಂದ ತುಂಬುವ ಕೆರೆ ಎಂಬ ಖ್ಯಾತಿಯ ಮದಗದ ಕೆರೆಯಲ್ಲಿ ನೀರು ತುಂಬಿದೆ. 15 ದಿನಗಳ ಹಿಂದೆ ಸಂಪೂರ್ಣ ಖಾಲಿಯಾಗಿದ್ದ 336 ಹೆಕ್ಟೇರ್, 2036 ಎಕರೆ ವಿಸ್ತೀರ್ಣದ ಬೃಹತ್ ಕೆರೆಯಲ್ಲಿ ಈಗ ಅರ್ಧಕ್ಕಿಂತ ಹೆಚ್ಚು ನೀರು ತುಂಬಿದೆ.

ಇದನ್ನೂ ಓದಿ:ಪತ್ನಿ, ಸೋದರಳಿಯನನ್ನು ಗುಂಡಿಕ್ಕಿ, ತಾನೂ ಆತ್ಮಹತ್ಯೆಗೆ ಶರಣಾದ ಹಿರಿಯ ಪೊಲೀಸ್ ಅಧಿಕಾರಿ

ಪಶ್ಷಿಮಘಟ್ಟದ ಸಾಲಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಮದಗದ ಕೆರೆಗೆ ನೀರು ಹರಿದು ಬರುತ್ತಿದೆ. ಈ ಕೆರೆ ತುಂಬಿದರೆ ಕಡೂರು ತಾಲೂಕಿನ ನೀರಿನ ಬವಣೆ ತಪ್ಪಲಿದೆ. ಕೋಡಿ ಬಿದ್ದು ಮಾರಿಕಣಿವೆ ಡ್ಯಾಂಗೆ ನೀರು ಸೇರುತ್ತದೆ. ಕೆರೆ ತಪ್ಪಲಿನ 34 ಹಳ್ಳಿಯ ಜನ-ಜಾನುವಾರುಗಳಿಗೆ ಈ ನೀರೇ ಜೀವಜಲವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next