Advertisement

‘ಕಾಲಾ ಪತ್ಥರ್‌’ಗೆ ವಿಕ್ಕಿ ನಿರ್ದೇಶನ

04:12 PM Apr 24, 2022 | Team Udayavani |

ಸಿನಿಮಾ ರಂಗವೇ ಹಾಗೆ. ಇಲ್ಲಿ ಹೀರೋ ಆಗಲು ಬಂದವರು ನಿರ್ದೇಶಕರಾಗಿದ್ದಾರೆ, ನಿರ್ದೇಶಕರಾಗುವ ಕನಸು ಕಂಡವರು ಹೀರೋಗಳಾಗುತ್ತಾರೆ. ಇನ್ನೊಂದಿಷ್ಟು ಮಂದಿ ನಿರ್ದೇಶನ-ನಟನೆ ಎರಡನ್ನೂ ಬ್ಯಾಲೆನ್ಸ್‌ ಮಾಡಿಕೊಂಡು ಹೋಗುತ್ತಾರೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ ವಿಕ್ಕಿ. ಈಗಾಗಲೇ “ಕೆಂಡಸಂಪಿಗೆ’, “ಕಾಲೇಜ್‌ ಕುಮಾರ್‌’ ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿರುವ ವಿಕ್ಕಿ ಈಗ “ಕಾಲಾ ಪತ್ಥರ್‌’ ಎಂಬ ಸಿನಿಮಾ ಮಾಡಿದ್ದಾರೆ. ನಟನೆ ಜೊತೆಗೆ ಮೊದಲ ಬಾರಿಗೆ ನಿರ್ದೇಶನ ಕೂಡಾ ಮಾಡಿದ್ದಾರೆ.

Advertisement

ಈಗ ಆ ಚಿತ್ರದ ಫ‌ಸ್ಟ್‌ಲುಕ್‌ ಇಂದು ಬಿಡುಗಡೆಯಾಗುತ್ತಿದೆ ವಿಕ್ಕಿ ಜೋಡಿಯಾಗಿ ಧನ್ಯಾ ರಾಮ್‌ಕುಮಾರ್‌ ನಟಿಸಿದ್ದಾರೆ. ಭುವನ್‌ ಮೂವೀಸ್‌ ಬ್ಯಾನರ್‌ ಅಡಿಯಲ್ಲಿ ಸುರೇಶ್‌, ನಾಗರಾಜ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಇದನ್ನೂ ಓದಿ:ಜಗ ಮೆಚ್ಚಿದ ತೋತಾಪುರಿ ಟ್ರೇಲರ್‌

ಯೋಗರಾಜ್‌ ಭಟ್‌ ಹಾಗೂ ಸೂರಿ ಬಳಿ ನಿರ್ದೇಶನ ಕಲಿತಿರುವ ವಿಕ್ಕಿ, ಚಿತ್ರರಂಗಕ್ಕೆ ನಿರ್ದೇಶಕ ಆಗಬೇಕೆಂಬ ಆಸೆಯಿಂದ ಬಂದವರು. ಆದರೆ, ಅವರ ಆಸೆ ಈಗ ಈಡೇರಿದೆ. ಅಂದಹಾಗೆ, “ಕಾಲಾ ಪತ್ಥರ್‌’ಗೆ ಸತ್ಯಪ್ರಕಾಶ್‌ ಅವರ ಕಥೆ ಇದೆ.

ಚಿತ್ರಕ್ಕೆ ಸಂದೀಪ್‌ ಕುಮಾರ್‌ ಛಾಯಾಗ್ರಹಣ, ಅನೂಪ್‌ ಸೀಳಿನ್‌ ಸಂಗೀತ ಸಂಯೋಜನೆ ಹಾಗೂ ದೀಪು ಎಸ್‌ ಕುಮಾರ್‌ ಸಂಕಲನವಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next