Advertisement

ವಿದ್ಯಾರ್ಥಿ ದಾಖಲಾತಿಗೆ ಕಲನ ಅಭಿಯಾನ

11:25 PM Jun 02, 2019 | Suhan S |

ಪುತ್ತೂರು: ನಮ್ಮ ಶಾಲೆಗೆ ಮಕ್ಕಳು ಬರಬೇಕು. ಪೋಷಕರಲ್ಲಿರುವ ಸರಕಾರಿ ಶಾಲೆಯೆಂಬ ಕೀಳರಿಮೆಯನ್ನು ದೂರ ಮಾಡಬೇಕು. ಇಂತಹ ಮಹತ್ವದ ಯೋಚನೆಯನ್ನು ಮಾಡಿದವರು ಸರಕಾರಿ ಶಾಲೆಯ ಶಿಕ್ಷಕರು. ಅದಕ್ಕಾಗಿ ಅವರೆಲ್ಲರೂ ಸೇರಿ ರೂಪಿಸಿದ್ದು ಶಿಕ್ಷಣ ವ್ಯವಸ್ಥೆಯೇ ಮೆಚ್ಚುವಂತಹ ವಿಶೇಷ ದಾಖಲಾತಿ ಅಭಿಯಾನ “ಕಲನ’.

Advertisement

ಶತಮಾನದ ಹಿಂದೆ ಬ್ರಿಟಿಷರ ಕಾಲದಲ್ಲಿ ಆರಂಭ ಗೊಂಡ ಕೊಂಬೆಟ್ಟು ಬೋರ್ಡ್‌ ಹೈಸ್ಕೂಲ್‌ ಈಗ ಕೊಂಬೆಟ್ಟು ಸ.ಪ.ಪೂ. ಕಾಲೇಜು ಆಗಿದೆ. ರಾಜ್ಯ ದಲ್ಲಿಯೇ ಮಕ್ಕಳ ಹಾಜ ರಾತಿಯಲ್ಲಿ 2ನೇ ಸ್ಥಾನ ಹೊಂದಿದ್ದ ಹೆಗ್ಗಳಿಕೆ ಈ ಶಾಲೆಗಿದೆ. ಪ್ರಸ್ತುತ ಈ ಶಾಲೆಯಲ್ಲಿಯೂ ಮಕ್ಕಳ ಸಂಖ್ಯೆ ಕಡಿಮೆ ಯಾಗುತ್ತಿ ರುವ ಹಿನ್ನೆಲೆಯಲ್ಲಿ ಶಾಲೆಯ ಶಿಕ್ಷಕರು ವಿಭಿನ್ನ ಪ್ರಯತ್ನವೊಂದರ ಮೂಲಕ ತಮ್ಮ ಶಾಲೆಯ ದಾಖಲಾತಿ ಯನ್ನು ಹೆಚ್ಚಿಸುವ ಸಾಧನೆ ಮಾಡಿದ್ದಾರೆ.

ಅಟಲ್‌ ಟಿಂಕರಿಂಗ್‌ ಲ್ಯಾಬ್‌ ಹೊಂದಿರುವ ಜಿಲ್ಲೆಯ ಏಕೈಕ ಸರಕಾರಿ ಶಾಲೆ ಎನ್ನುವ ಖ್ಯಾತಿ, ಎನ್‌ಸಿಸಿ ಕೆಡೆಟ್‌ ಇರುವ ತಾಲೂಕಿನ ಏಕಮಾತ್ರ ಸರಕಾರಿ ಪ್ರೌಢಶಾಲೆ, ವೃತ್ತಿಪರ ಕೋರ್ಸು ಆರಂಭಿಸಿರುವ ಸರಕಾರಿ ಶಾಲೆ, ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್‌, ಸ್ಮಾರ್ಟ್‌ ಕ್ಲಾಸ್‌, ಸುಸಜ್ಜಿತ ಗ್ರಂಥಾಲಯ, ಲೇಖನಿ ಸಾಮಗ್ರಿಗಳ ಸಹಕಾರ ಸಂಘ, ಹೀಗೆ 10ಕ್ಕಿಂತಲೂ ಹೆಚ್ಚಿನ ಸೌಲಭ್ಯಗಳಿರುವ ಶಾಲೆ, ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾಗುವಂತಹ 14ರಷ್ಟು ವಿವಿಧ ಸಂಘಗಳು ಇರುವ ಶಾಲೆ ಎಂಬುದನ್ನು ಪ್ರಚಾರ ಪತ್ರಿಕೆಯ ಮೂಲಕ ಪ್ರಚಾರ ಮಾಡುತ್ತಿದ್ದಾರೆ.

ಸಾಧನೆಯ ಹಿಂದಿರುವವರು
ಕೊಂಬೆಟ್ಟು ಸರಕಾರಿ ಪ್ರೌಢಶಾಲಾ ಶಿಕ್ಷಕರ ತಂಡದ ಈ ವಿಭಿನ್ನ ಪ್ರಯತ್ನಕ್ಕೆ ಪ್ರಭಾರ ಮುಖ್ಯ ಶಿಕ್ಷಕಿ ಜಯಶ್ರೀ ಬಿ. ಮಾರ್ಗದರ್ಶನ ನೀಡಿದ್ದಾರೆ. ಶಿಕ್ಷಕರಾದ ಬಾಲಕೃಷ್ಣ ಬಿ.ಟಿ., ಗ್ರೆಗೋರಿ ರೋನಿ ಪಾಯಸ್‌, ಗೀತಾಮಣಿ, ಸಿಂಧು ವಿ.ಕೆ., ಆಶ್ಲೇಷ್‌ ಕುಮಾರ್‌, ಶಶಿಕುಮಾರ್‌, ಉಮೇರಾ ತಬಸ್ಸಮ್‌, ಪೂರ್ಣಿಮಾ ನಾಯಕ್‌, ಮಮತಾ ಮೋನಿಸ್‌, ಮಾಲಿನಿ, ವಿಮಲಾ ಮತ್ತು ರಶ್ಮಿ ಅವರನ್ನೊಳಗೊಂಡ ತಂಡ ತಮ್ಮ ಸ್ವಂತ ಖರ್ಚು, ಶ್ರಮ ವಿನಿಯೋಗಿಸಿದ್ದಾರೆ. ಶಿಕ್ಷಕರ ಈ ಪ್ರಯತ್ನಕ್ಕೆ ಸಾರ್ವಜನಿಕರಿಂದಲೂ ಶ್ಲಾಘನೆ ವ್ಯಕ್ತವಾಗಿದೆ.

ಪ್ರಯತ್ನ ಹೇಗೆ?
ಶಾಲೆಯಲ್ಲಿರುವ ಸೌಲಭ್ಯಗಳ ಕುರಿತು ಸುಂದರವಾದ ಪ್ರಣಾಳಿಕೆ (ಪ್ರಚಾರ ಪತ್ರಿಕೆ) ತಯಾರಿಸಿ ಸುತ್ತಮುತ್ತಲ 35 ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಮಕ್ಕಳು ಕೊಂಬೆಟ್ಟು ಸರಕಾರಿ ಪ್ರೌಢಶಾಲಾ ವಿಭಾಗಕ್ಕೆ ಬರುವಂತೆ ಪ್ರೇರೇಪಿಸುವ ಅಭಿಯಾನ ನಡೆಸುತ್ತಿದ್ದಾರೆ. ಈ ಮಕ್ಕಳ ಜತೆ ಹಾಡಿ ಕುಣಿದು, ಚಿತ್ರ ಬಿಡಿಸಿ ಮಕ್ಕಳ ಮನಸ್ಸನ್ನು ಸೆಳೆಯುವ ಕಾಯಕದಲ್ಲಿ ನಿರತರಾಗಿದ್ದಾರೆ.

Advertisement

ಪರಿಣಾಮವೇನು?
ಕೊಂಬೆಟ್ಟು ಪ್ರೌಢಶಾಲಾ ಶಿಕ್ಷಕ ಜಗನ್ನಾಥ್‌ ಅರಿಯಡ್ಕ ಎನ್ನುವ ಕಲಾ ಶಿಕ್ಷಕರ ನೇತೃತ್ವದಲ್ಲಿ ಕಲನ ಅಭಿಯಾನದ ಮೂಲಕ ಯಶಸ್ವಿ ಸಾಧನೆ ಮಾಡಿದ ಶಿಕ್ಷಕರ ತಂಡ ಸರ ಕಾರಿ ಶಾಲೆಗಳನ್ನು ಉಳಿಸುವ ಕಾಯಕದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ತಮಗೆ ಅನ್ನ ನೀಡುವ ಶಾಲೆಗಾಗಿ ತಮ್ಮ ರಜೆಯ ಅವಧಿಯನ್ನು ಪೂರ್ತಿ ಮಕ್ಕಳ ದಾಖಲಾತಿಗಾಗಿ ಬಳಸುವ ಮೂಲಕ ಇತರರಿಗೆ ಮಾದರಿಯಾಗುತ್ತಾರೆ. ಪರಿಣಾಮ 350 ಮಕ್ಕಳು ಶಾಲೆಗೆ ಸೇರಲು ಅರ್ಜಿ ಹಾಕಿದ್ದು, ಇದರಲ್ಲಿ 268 ಮಕ್ಕಳು ದಾಖಲಾಗಿದ್ದಾರೆ.

“ಕಲನ’ದ ಸ್ಪಂದನ
ಕಲನ ಎಂದರೆ ಸೇರಿಸುವುದು ಎಂದು ಅರ್ಥ. ನಮ್ಮ ಶಾಲೆ ಯಲ್ಲಿ ಮಕ್ಕಳ ದಾಖಲಾತಿ ಕಡಿಮೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಮೂರು ವರ್ಷಗಳ ಹಿಂದೆ ಹೊಸ ಅಭಿಯಾನ ವೊಂದನ್ನು ಹುಟ್ಟು ಹಾಕಿದೆವು. ನಮ್ಮ ಶಾಲೆಯಲ್ಲಿರುವ ಸೌಲಭ್ಯ, ಅವಕಾಶಗಳ ಕುರಿತು ಹಾಡು, ಚಿತ್ರ ಬಿಡಿಸುವುದು, ಪಿಪಿಟಿ ಜತೆಗೆ ಆ ಮಕ್ಕಳೊಂದಿಗೆ ಬೆರೆತೆವು. ನಮ್ಮ ಈ ಅಭಿಯಾನಕ್ಕೆ ದೊಡ್ಡ ಮಟ್ಟದ ಸ್ಪಂದನೆ ಸಿಕ್ಕಿದೆ. ಈ ಬಾರಿ 350 ಮಕ್ಕಳು ದಾಖಲಾತಿ ಪಡೆದುಕೊಳ್ಳಲು ಮುಂದಾಗಿದ್ದಾರೆ.
– ಜಗನ್ನಾಥ್‌ ಅರಿಯಡ್ಕ ಕಲಾ ಶಿಕ್ಷಕ, ಕೊಂಬೆಟ್ಟು ಪ್ರೌಢಶಾಲೆ

Advertisement

Udayavani is now on Telegram. Click here to join our channel and stay updated with the latest news.

Next