Advertisement

ಸಿಕೆಪಿಯಲ್ಲಿ ಕಲಾಮೇಳ

09:14 PM Nov 08, 2019 | Lakshmi GovindaRaju |

ಕರಕುಶಲ ಕಲೆಗೆ ಹೆಸರುವಾಸಿಯಾದ ರಾಜ್ಯ ರಾಜಸ್ಥಾನ. ಅಲ್ಲಿನ ಎಲ್ಲ ಕರಕುಶಲ ವಸ್ತುಗಳನ್ನೀಗ ಒಂದೇ ಸೂರಿನಡಿ ಖರೀದಿಸಬಹುದು. ಎಂವಿ ಹ್ಯಾಂಡಿಕ್ರಾಫ್ಟ್ ಸಂಸ್ಥೆ ವತಿಯಿಂದ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ರಾಜಸ್ಥಾನ ಗ್ರಾಮೀಣ ಮೇಳ ನಡೆಯುತ್ತಿದೆ. ಬಣ್ಣ ಬಣ್ಣದ ಗೃಹಾಲಂಕಾರ ವಸ್ತುಗಳು, ಸಾಂಪ್ರದಾಯಿಕ ಚಿತ್ರಪಟಗಳು, ಬಟ್ಟೆಯನ್ನು ಆಧರಿಸಿದ ಸಾಲ್‌ ಪೇಟಿಂಗ್‌, ಕೈಮಗ್ಗದ ವಸ್ತುಗಳು, ಕಾಶ್ಮೀರಿ ಕಾಪೆಟ್‌ಗಳು, ಕಲಂಕಾರಿ ಕಾಶ್ಮೀರಿ ಪ್ರಿಂಟ್‌ಗಳು, ಬಾಗಲ್ಪುರಿ ಸೀರೆಗಳು ಹಾಗೂ ಬೆಳ್ಳಿಯ ಆಭರಣಗಳು ಮೇಳದಲ್ಲಿ ದೊರೆಯಲಿವೆ.

Advertisement

ಅದೇ ರೀತಿ ಜೈಪುರ ಹಾಗೂ ಪಂಜಾಬಿ ಜೂತಿಗಳು, ಕೋಲ್ಕತ್ತಾ ಶಾಂತಿನಿಕೇತನ ಬ್ಯಾಗ್‌ಗಳು, ಬುಡಕಟ್ಟು ಸಮುದಾಯದ ಸಾಂಪ್ರದಾಯಿಕ ಆಭರಣಗಳು, ಕೋಲ್ಕತ್ತಾ ಲಿನೆನ್‌ ಸೀರೆಗಳು, ಕಾಶ್ಮೀರಿ ರೇಷ್ಮೆ ಸೀರೆಗಳು, ಕಲಂಕಾರಿ ಕಾಟನ್‌ ಸೀರೆಗಳು, ಹುಬ್ಬಳ್ಳಿ ಕಾಟನ್‌ ಸೀರೆಗಳು, ಅಸ್ಸಾಂ ಕೈಮಗ್ಗದ ಸೀರೆಗಳು, ಕೈಮಗ್ಗದ ಬೆಡ್‌ ಲೂಮ್‌ಗಳು, ಆಂಧ್ರ ಚರ್ಮದ ಬೊಂಬೆ, ಮೊಸಾಯಿಕ್‌ ಲ್ಯಾಂಪ್‌, ಲೋಹದ ಕೈ ಮಗ್ಗದ ವಸ್ತುಗಳು, ಮರದ ಹೊರಾಂಗಣ ಪೀಠೊ ಪಕರಣಗಳು, ಪಿಂಗಾಣಿ ಪಾತ್ರೆಗಳು, ಪಿಂಗಾಣಿ ವಸ್ತು ಗಳು, ತಾಮ್ರದ ವಸ್ತುಗಳು, ಮಣ್ಣಿನ ದೀಪಗಳು, ಸಾಂಪ್ರದಾಯಿಕಕ ಹಾಗೂ ಹರಳುಗಳನ್ನು ಹೊಂದಿರುವ ಆಭರಣಗಳು ಈ ಮೇಳದಲ್ಲಿ ಲಭ್ಯ.

ಯಾವಾಗ?: ನ. 8-17, ಬೆಳಗ್ಗೆ 10-7
ಎಲ್ಲಿ?: ಕರ್ನಾಟಕ ಚಿತ್ರಕಲಾ ಪರಿಷತ್‌, ಕುಮಾರ ಪಾರ್ಕ್‌ ರಸ್ತೆ
ಪ್ರವೇಶ: ಉಚಿತ

Advertisement

Udayavani is now on Telegram. Click here to join our channel and stay updated with the latest news.

Next