Advertisement
ಮೂಲತಃ ಮಂಗಳೂರಿನವರಾದ ಮಮತಾ, ಎಳವೆಯಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದರು. ಶಾಲಾದಿನಗಳಲ್ಲಿ ಬಹುಮಾನಗಳನ್ನೂ ಗಳಿಸಿದ್ದರು. ಆದರೆ, ಹೆಚ್ಚಿನ ಮಾರ್ಗದರ್ಶನ, ತರಬೇತಿಗೆ ಪೂರಕ ವಾತಾವರಣವಿರಲಿಲ್ಲ. ಆದರೂ, ದೊಡ್ಡ ಚಿತ್ರಗಾರಳಾಗಬೇಕೆಂಬ ಮಹದಾಸೆ ಮಮತಾರ ಮನದಲ್ಲಿತ್ತು.
Related Articles
Advertisement
ಸಕಲ ಕಲಾವಲ್ಲಭೆಮಕ್ಕಳ ಚಿತ್ರಕಲಾ ಗುರುವಾಗಿ, ಅವರಿಂದಲೂ ಕಲಾಪ್ರದರ್ಶನ ನಡೆಸಿದ ಖ್ಯಾತಿ ಇವರದ್ದು. ಹೆಂಗಸರಿಗೆ ಉಚಿತವಾಗಿ ಎಂಬ್ರಾಯಿಡರಿ ತರಬೇತಿ ನೀಡುವ ಮಮತಾ, ಚಿತ್ರಕಲೆ ಮಾತ್ರವಲ್ಲದೆ, ಎಂಬ್ರಾಯxರಿ, ರಂಗೋಲಿ, ಅಡಿಕೆ ಹಾಳೆಯಿಂದ, ಭತ್ತದ ಪೈರಿನಿಂದ ಕಲಾಕೃತಿಗಳ ರಚನೆ, ಸುಲಭವಾಗಿ ಸಿಗುವ ವಸ್ತುಗಳಿಂದ ಕ್ರಾಫ್ಟ್, 3ಡಿ ಮಾಡೆಲಿಂಗ್ ಆರ್ಟ್, ಪೇಪರ್ ಫ್ಲವರಿಂಗ್ ,ಕ್ವಿಲ್ಲಿಂಗ್ ಕಲೆಯಲ್ಲೂ ಸಿದ್ಧ ಹಸ್ತರು. ಅಷ್ಟೇ ಅಲ್ಲದೆ, ಉಚಿತವಾಗಿ ಭಜನಾ ತರಗತಿ, ಶ್ಲೋಕ ಕ್ಲಾಸ್‌ಗಳನ್ನೂ ನಡೆಸುತ್ತಾರೆ. ಈಕೆ, ಕದ್ರಿಯ ದೇವೇಂದ್ರ ಅಂಚನ್- ರೋಹಿಣಿ ಅಂಚನ್‌ರ ಮಗಳು. ಪತಿ ರವಿ ಕೋಟ್ಯಾನ್, ಭಾವಿಕ್, ದಕ್ಷ ಎಂಬ ಇಬ್ಬರು ಮಕ್ಕಳ ಸುಖೀ ಕುಟುಂಬ ಇವರದ್ದು. ಭವಿಷ್ಯದಲ್ಲಿ ಆರ್ಟ್ ಗ್ಯಾಲರಿ ಆರಂಭಿಸುವ ಕನಸು ಹೊಂದಿರುವ ಮಮತಾರ ಕುಂಚಕ್ಕೆ, ಬದುಕಿಗೆ ಇನ್ನಷ್ಟು ಬಣ್ಣಗಳು ತುಂಬಲಿ. -ರಜನಿ ಭಟ್ ಕಲ್ಮಡ್ಕ