ದೇವನಹಳ್ಳಿ: ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರ ಮಾದರಿಯಲ್ಲೇಕಲಾಕ್ಷೇತ್ರ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ತಿಳಿಸಿದರು.
ತಾಲೂಕಿನ ಬೊಮ್ಮವಾರ ಗ್ರಾಮದ ಸಮೀಪದಲ್ಲಿರುವ ನಿರ್ಮಿತಿ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಬೆಂಗಳೂರಿನ4 ದಿಕ್ಕುಗಳಿಗೆ ಮಧ್ಯವಾಗಿ ರವೀಂದ್ರ ಕಲಾಕ್ಷೇತ್ರ ಇದ್ದು, ಅದೇ ಮಾದರಿಯಲ್ಲಿ ಕಲಾಕ್ಷೇತ್ರ ನಿರ್ಮಿಸಲು ಸ್ಥಳ ಪರಿಶೀಲನೆಗೆ ಆಗಮಿಸಲಾಗಿದೆ ಎಂದು ಹೇಳಿದರು.
ಸಿಎಂಯಡಿಯೂರಪ್ಪ ನೇತೃತ್ವದ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ರವೀಂದ್ರ ಕಲಾ ಕ್ಷೇತ್ರ ಮಾದರಿಯಲ್ಲಿ ಜಿಲ್ಲಾ ರಂಗಮಂದಿರನಿರ್ಮಾಣಮಾಡಲಾಗುವುದು ಎಂದರು. ದೇವನಹಳ್ಳಿ ತಾಲೂಕಿನಲ್ಲಿ ಈಗಾ ಗಲೇ2 ಸ್ಥಳಗಳನ್ನು ಗುರುತಿಸಲಾಗಿದೆ.ದೇವನ ಹಳ್ಳಿ ನಿರ್ಮಿತಿ ಕೇಂದ್ರದಲ್ಲಿ ಯೋಜನೆ ರೂಪಿಸಿ,ಪಾರಿವಾಟಗುಟ್ಟ ಸಮೀಪದಲ್ಲಿ ಸ್ಥಳ ಗುರುತಿಸಲಾಗಿದೆ ಎಂದರು.
ಕನ್ನಡ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಸರ್ಕಾರಿ ಕಚೇರಿಗಳಲ್ಲಿ ಕನ್ನಡದಲ್ಲಿಯೇ ವ್ಯವಹರಿಸಬೇಕು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂಬಂತೆ ಮಾಡಬೇಕು. ನಿರ್ಮಿತಿ ಕೇಂದ್ರದಲ್ಲಿನ ಕಾಮಗಾರಿಗಳನ್ನು ವೀಕ್ಷಿಸಿ, ನಿರ್ಮಿತಿ ಕೇಂದ್ರದ ಕಟ್ಟಡ ಮಾದರಿಯನ್ನು ನೋಡಿ ಸಂತಸ ವ್ಯಕ್ತ ಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಂಗಪ್ಪಮಾತನಾಡಿ,ಬೆಂಗಳೂರಿನ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ದಿಕ್ಕುಗಳ4 ಕಲಾಕ್ಷೇತ್ರಗಳನ್ನು ನಿರ್ಮಿ ಸಲುಕಳೆದ ಸಾಲಿನ ಬಜೆಟ್‌ನಲ್ಲಿ ಅಂದಾಜು 25 ಕೋಟಿ ರೂ. ಮೀಸಲಿಡಲಾಗಿದೆ. ಈ ಬಗ್ಗೆ ಸಚಿವ ಸಿ.ಟಿ.ರವಿ ಅವರು ಬಿಡಿಎ, ಕೆಐಡಿಬಿ, ಕರ್ನಾಟಕ ಹೌಸಿಂಗ್ ಬೋರ್ಡ್, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಅಧಿಕಾರಿಗಳನ್ನು ಒಳಗೊಂಡಂತೆ ಸಭೆ ನಡೆಸಿ ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದರು. ಅದರಂತೆ ಹೊಸಕೋಟೆಯ ಹೊಸೂರು ಮುಖ್ಯರಸ್ತೆ ಸಮೀಪ ಹಾಗೂ ಕರ್ನಾಟಕ ಹೌಸಿಂಗ್ ಬೋರ್ಡ್‌ನಲ್ಲಿಯೂ ಸಹ ಜಾಗ ಗುರ್ತಿಸಲಾಗಿದೆ. ದೇವನಹಳ್ಳಿಯ ಪಾರಿವಾಟ ಗುಟ್ಟದ ಸಮೀಪ ಹಾಗೂ ಅದೇ ರೀತಿ ಬಿಡಿಎನಲ್ಲಿ ಬೆಂಗಳೂರು ಪೂರ್ವ ಮತ್ತು ದಕ್ಷಿಣಕ್ಕೆ ಸೂಕ್ತ ಜಾಗವನ್ನು ಗುರ್ತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದರು. ಈ ವೇಳೆಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಆರಾಧ್ಯ, ದೇವನ ಹಳ್ಳಿ ಕಂದಾಯ ಇಲಾಖಾಧಿಕಾರಿ ರಘು ಮೂರ್ತಿ, ಎಂಜೀನಿಯರ್ ಮತ್ತಿತರರು ಇದ್ದರು.