ಬೆಳಗಾವಿ: ತಾಲೂಕಿನ ಕಲಕಾಂಬ ಗ್ರಾಮ ಪಂಚಾಯತ್ ಕಟ್ಟಡಕ್ಕೆ ಶುಕ್ರವಾರ (ನ.8) ತಡರಾತ್ರಿ ಕಿಡಿಗೇಡಿಗಳು ಪೆಟ್ರೋಲ್ ಬಾಂಬ್ ಎಸೆದು ಬೆಂಕಿ ಹಚ್ಚಲು ಯತ್ನಿಸಿದ ಘಟನೆ ನಡೆದಿದೆ.
ಎರಡು ಗುಂಪುಗಳ ನಡುವಿನ ಗಲಾಟೆಯಿಂದ ಗ್ರಾಪಂ ಕಚೇರಿಗೆ ಬೆಂಕಿ ಹಚ್ಚಿರಬಹುದೆಂದು ಶಂಕಿಸಲಾಗಿದೆ.
ಕಚೇರಿಯ ಪೀಠೋಪಕರಣಕ್ಕೆ ಹಾನಿಯಾಗಿದೆ. ಸಿಸಿ ಕ್ಯಾಮರಾ ಕಿತ್ತು ಹಾಕಲಾಗಿದೆ. ಬೀಯರ್ ಬಾಟಲಿಗೆ ಪೆಟ್ರೋಲ್ ತುಂಬಿ ಅದಕ್ಕೆ ಬೆಂಕಿ ಹಚ್ಚಿ ಗ್ರಾಮ ಪಂಚಾಯಿತಿ ಕಿಟಕಿಯ ಮೂಲಕ ಒಳಗೆ ಎಸೆಯಲಾಗಿದೆ. ಕಾಗದ ಪತ್ರಗಳಿಗೆ ಯಾವುದೇ ಹಾನಿಯಾಗಿಲ್ಲ. ಟೇಬಲ್, ಕುರ್ಚಿಗಳು ಹಾನಿಗೊಂಡಿವೆ.
ಮಾರಿಹಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: Parkala: ಹಿಮ್ಮುಖವಾಗಿ ಚಲಿಸಿ ಗ್ಯಾರೇಜ್ ಗೆ ನುಗ್ಗಿದ ಲಾರಿ… ಹಲವು ವಾಹನಗಳು ಜಖಂ