Advertisement

ಮಾ.21: “ಕಲೈಕಾರ್‌ ಮ್ಯೂಸಿಯಂ’ಉದ್ಘಾಟನೆ

09:53 PM Mar 10, 2021 | Team Udayavani |

ಗಂಗೊಳ್ಳಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಪೂರ್ವ ಪ್ರಾಚೀನ ವಸ್ತು ಸಂಗ್ರಹಕಾರ, ಕಲಾವಿದ ಗಂಗೊಳ್ಳಿಯ ಜಿ.ಬಿ.ಕಲೈಕಾರ್‌ ಅವರು ಮುಂದಿನ ಪೀಳಿಗೆಗಾಗಿ ಗಂಗೊಳ್ಳಿಯ ಕಲೈಕಾರ್‌ ಮಠದ ಬಳಿಯಲ್ಲಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ “ಗಂಗೊಳ್ಳಿ ಭಾಸ್ಕರ ಕಲೈಕಾರ್‌ ಮ್ಯೂಸಿಯಂ’ ಮಾ.21ರಂದು ಉದ್ಘಾಟನೆ ನಡೆಯಲಿದೆ.

Advertisement

ಹಂಗಾರಕಟ್ಟೆ ಶ್ರೀ ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರು ಉದ್ಘಾಟಿಸಿ ಆಶೀರ್ವಚಿಸಲಿದ್ದು, ಪತ್ರಕರ್ತ ಯು.ಎಸ್‌.ಶೆಣೈ, ಅಂಕಣಕಾರ ಕೋ.ಶಿವಾನಂದ ಕಾರಂತ, ಉದ್ಯಮಿ ದೇವರಾಯ ಶೇರುಗಾರ್‌, ಎಂ.ರಾಮಕೃಷ್ಣ ಪೈ, ವಸಂತ ಎಚ್‌.ಕರ್ಕಿಕರ್‌ ಹೊನ್ನಾವರ, ಡಾ| ಎಚ್‌.ರಾಮಮೋಹನ, ಘನಶ್ಯಾಮ ಟಿ.ಮೇಸ್ತ, ಡಾ| ಬಾಲಚಂದ್ರ ಮೇಸ್ತ ಹೊನ್ನಾವರ, ಪಿ.ಜಯವಂತ ಪೈ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಅಪೂರ್ವ ವಸ್ತುಗಳ ಸಂಗ್ರಹ
ಕಳೆದ ಆರು ದಶಕಗಳಿಂದ ಅಪೂರ್ವ ವಸ್ತುಗಳ ಸಂಗ್ರಹದ ಹವ್ಯಾಸ ಬೆಳೆಸಿಕೊಂಡು ಬಂದಿರುವ ನಿವೃತ್ತ ಶಿರಸ್ತೇದಾರ ಗಂಗೊಳ್ಳಿಯ ಜಿ.ಭಾಸ್ಕರ ಕಲೈಕಾರ್‌ ಅಪೂರ್ವ ದೇಶ ವಿದೇಶಗಳ ಅಂಚೆ ಚೀಟಿಗಳು, ನೋಟುಗಳು, ನಾಣ್ಯಗಳು, ಪುರಾತನ ಛಾಯಾಚಿತ್ರಗಳು, ಕಂಚಿನ ಕಲಾತ್ಮಕ ಪಾತ್ರೆಗಳು, ಹಳೆ ದಿನ ಪತ್ರಿಕೆಗಳು, ಗಡಿಯಾರಗಳು, ಗ್ರಾಮಾಫೋನ್‌, ಮದ್ಯ ತುಂಬುವ ಕಲಾತ್ಮಕ ಬಾಟಲಿಗಳು, ಪಂಚಲೋಹದ ವಿಗ್ರಹಗಳು, ಹಳೆ ವಿದೇಶಿ ಕ್ಯಾಮರಾಗಳು, ಹಳೆ ಕಾಲದ ವಿವಿಧ ಬಗೆಯ ಬೀಗಗಳು, ಟಿ.ವಿ., ರೇಡಿಯೊ, ಟೇಪ್‌ ರೆಕಾರ್ಡರ್‌, ಕ್ಯಾಸೆಟ್‌, ಫೌಂಟೇನ್‌ ಪೆನ್ನು ಇತ್ಯಾದಿಗಳು ಕಲೈಕಾರ್‌ ಸಂಗ್ರಹದಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next