Advertisement

ಮಣಿಪುರ: ಆನೆಗುಂದಿ ಶ್ರೀಗಳ ಸೀಮೋಲ್ಲಂಘನ

11:06 PM Sep 14, 2019 | Sriram |

ಕಟಪಾಡಿ: ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿ ಗಳವರ 15ನೇ ಚಾತುರ್ಮಾಸ್ಯ ವ್ರತಾಚರಣೆಯ ಸಮಾರೋಪದ ಅಂಗ ವಾಗಿ ಸೀಮೋಲ್ಲಂಘನವು ಕಟಪಾಡಿ ಬಳಿಯ ಮಣಿಪುರ ಹೊಳೆಯಲ್ಲಿ ಸೆ. 14ರ ಬೆಳಗ್ಗೆ ಜರಗಿತು.

Advertisement

ಧಾರ್ಮಿಕ ಕಾರ್ಯಕ್ರಮದ ಅಂಗ ವಾಗಿ ಬೆಳಗ್ಗೆ ವಿಶ್ವಕರ್ಮ ಯಜ್ಞ, ಕಟಪಾಡಿ ಮಣಿಪುರ ನದಿಯಲ್ಲಿ ಸಿಮೋಲ್ಲಂಘನ ಅನಂತರ ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೆಶ್ವರ ದೇವಸ್ಥಾನ ಮತ್ತು ಕಾಪು ಶ್ರೀ ಕಾಳಿಕಾಂಬಾ ದೇಗುಲಕ್ಕೆ ಭೇಟಿ ನೀಡಿ ಪಡುಕುತ್ಯಾರು ಶ್ರೀ ದುರ್ಗಾದೇವಿ ಮಂದಿರವನ್ನು ಸಂದರ್ಶಿಸಿ ಪಡುಕುತ್ಯಾರು ಶ್ರೀಮತ್‌ ಆನೆಗುಂದಿ ಮಹಾಸಂಸ್ಥಾನಕ್ಕೆ -ಪೂರ್ಣಕುಂಭ ಮೆರವಣಿಗೆಯಲ್ಲಿ ಪಾದಾರ್ಪಣೆಗೈದರು.

ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ, ಶ್ರೀಮತ್‌ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ಬಿ. ಸೂರ್ಯಕುಮಾರ್‌ ಆಚಾರ್ಯ ಹಳೆಯಂಗಡಿ, ಪ್ರ| ಕಾರ್ಯದರ್ಶಿ ಲೋಕೇಶ್‌ ಎಂ.ಬಿ. ಆಚಾರ್‌ ಕಂಬಾರು, ಪ್ರಮುಖರಾದ ಕೇಶವ ಆಚಾರ್ಯ ಮಂಗಳೂರು, ಬಿ. ಯಜ್ಞೆàಶ್‌ ಆಚಾರ್‌, ಗಂಗಾಧರ ಆಚಾರ್ಯ ಕೊಂಡೆವೂರು, ಪ್ರಶಾಂತ್‌ ಆಚಾರ್ಯ ಕಟಪಾಡಿ, ಮಧು ಆಚಾರ್ಯ ಮೂಲ್ಕಿ, ವಡೇರ ಹೋಬಳಿ ಶ್ರೀಧರ ಆಚಾರ್ಯ, ಮಠದ ದಿವಾಣರಾದ ಲೋಲಾಕ್ಷ ಆಚಾರ್ಯ, ರೂಪೇಶ್‌ ಆಚಾರ್ಯ ಮಂಚಕಲ್‌, ಪುರೋಹಿತ್‌ ಅಕ್ಷಯ ಶರ್ಮ, ಹರಿಶ್ಚಂದ್ರ ಆಚಾರ್ಯ, ನಾಗರಾಜ ಆಚಾರ್ಯ, ಬಿ.ಸಿ. ರಾಜೇಶ್‌ ಆಚಾರ್ಯ ಕಟಪಾಡಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next