Advertisement

ಬಡ ಕಲಾವಿದರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸಿ: ನಿಂಬಣ್ಣವರ

05:31 PM Nov 16, 2018 | |

‌ಕಲಘಟಗಿ: ಕನ್ನಡ ಭಾಷೆ, ಕಲೆ, ಸಾಹಿತ್ಯ, ಸಂಗೀತ, ನಾಟಕ, ಜಾನಪದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ದುರ್ಬಲ ಮತ್ತು ಬಡ ಕಲಾವಿದರಿಗೆ ವಿಳಂಬ ಮಾಡದೇ ಮಾಸಾಶನ ಶಾಸನ ಮತ್ತು ಇತರೇ ಸೌಲಭ್ಯ ಒದಗಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು.

Advertisement

ಹಿರೇಹೊನ್ನೀಹಳ್ಳಿಯಲ್ಲಿ ಶ್ರೀ ಗಜಾನನ ನಾಟ್ಯಕಲಾ ಸಾಂಸ್ಕೃತಿಕ ಸಂಘದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯೋತ್ಸವ, ಕನ್ನಡ ನಾಡು-ನುಡಿ ಚಿಂತನಾ ಸಮಾವೇಶ ಹಾಗೂ ಶ್ರೀ ಗಜಾನನ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಪಂ ಅಧ್ಯಕ್ಷ ಸಹದೇವಪ್ಪ ಧನಿಗೊಂಡ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಈರವ್ವ ದಾಸನಕೊಪ್ಪ ದೀಪ ಬೆಳಗಿಸಿದರು. ಸಮಾವೇಶಕ್ಕೆ ಕನ್ನಡ-ಸಂಸ್ಕೃತಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಿ.ಡಿ. ಹಿರೇಗೌಡರ ಚಾಲನೆ ನೀಡಿದರು. ಕೆಎಂಎಫ್‌ ನಿರ್ದೇಶಕ ವೈ.ಬಿ. ದಾಸನಕೊಪ್ಪ ಮಾತನಾಡಿದರು. ಪ್ರಶಸ್ತಿ ಪ್ರದಾನ: ಶಿವಲಿಂಗಪ್ಪ ಜೋಡಳ್ಳಿ, ಶಾಸಕ ಸಿ.ಎಂ. ನಿಂಬಣ್ಣವರ, ಕಿರಣಗೌಡ್ರ ಪಾಟೀಲಕುಲಕರ್ಣಿ, ಬಿ.ಡಿ. ಹಿರೇಗೌಡರ, ಪದ್ಮಾಕ್ಷಿ ಸೋಮಲಿಂಗ ಒಡೆಯರ, ಮೋಹನ ಬಾಂಬೂಲೆ, ದ್ಯಾಮಣ್ಣ ಬಡಿಗೇರ, ಚಂದ್ರಶೇಖರ ಕುಸುಗಲ್‌, ಎಂ.ಆರ್‌. ತೋಟಗಂಟಿ, ಅಣ್ಣಪ್ಪ ಓಲೇಕಾರ, ಬಸವರಾಜ ಮಾದಿ, ಗುರುಸಿದ್ಧಪ್ಪ ಬಡಿಗೇರ, ಪರಮಾನಂದ ಒಡೆಯರ, ಪ್ರಭು ಕಿಚಡಿ, ಸಿದ್ರಾಮಪ್ಪ ಶಿವಳ್ಳಿ, ಪ್ರಭುಲಿಂಗ ರಂಗಾಪುರ, ವಿರೂಪಾಕ್ಷಪ್ಪ ಶಿರಕೋಳ, ಜಯವಂತ ಬಾಂಬೂಲೆ, ಸಹದೇವಪ್ಪ ಧನಿಗೊಂಡ, ಶ್ರೀ ಗ್ರಾಮದೇವಿ ಕೋಲಾಟದ, ಜಾನಪದ ಕಲಾ ಸಂಘದ ಕಲಾವಿದರಿಗೆ ಶ್ರೀ ಗಜಾನನ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಭಾಕರ ನಾಯಕ, ಗದಿಗೆಪ್ಪ ಕಳ್ಳಿಮನಿ, ಸಿದ್ದಪ್ಪ ಪಟ್ಟಣಶೆಟ್ಟಿ, ಮಂಜುನಾಥಗೌಡ್ರ ಮುರಳ್ಳಿ, ಶಂಕ್ರವ್ವ ಮಡ್ಲಿ, ಚೆನ್ನಪ್ಪ ಕೊಟಗೊಣಸಿ, ಶಂಕ್ರಣ್ಣ ಮನಗುಂಡಿ, ವೈ.ಎನ್‌. ರಾಮನಾಳ, ಬಸವರಾಜ ಕೆಲಗೇರಿ, ಪ್ರಭು ರಾಮನಾಳ, ನಿಂಗಪ್ಪ ಬೆಳ್ಳಿವಾಲಿ, ಸದಾಶಿವ ರಾಮನಾಳ, ಷಣ್ಮುಖಪ್ಪ ತಾರಿಹಾಳ, ಷಣ್ಮುಖಪ್ಪ ಬಡಿಗೇರ, ಶಂಕರಲಿಂಗ ಕೆಲಗೇರಿ, ಅಡಿವೆಪ್ಪ ಬಡಿಗೇರ, ವಿಜಯ ಧನಿಗೊಂಡ, ಮಲ್ಲೇಶಪ್ಪ ರಾಮನಾಳ, ಹರೀಶ ಚಳಮಟ್ಟಿ, ರಫಿಕ ಸುಂಕದ ಇದ್ದರು. ಪ್ರಭು ಕಿಚಡಿ, ಮಹೇಶ ಹಡಪದ, ಮಂಜುನಾಥ ಧನಿಗೊಂಡ, ಗವಿಸಿದ್ದಯ್ಯ ಹಳ್ಳಿಕೇರಿಮಠ, ಕು| ಪಲ್ಲವಿ ಬಳ್ಳಾರಿ, ಸಂತೋಷ ಹಾಗೂ ಮೃತ್ಯುಂಜಯ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ದ್ಯಾಮಣ್ಣ ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು. ಗುರುಸಿದ್ದಪ್ಪ ಬಡಿಗೇರ ನಿರೂಪಿಸಿದರು. ಜಿ.ಎಸ್‌. ಬಡಿಗೇರ ಸ್ವಾಗತಿಸಿದರು. ಉಮೇಶ ನೆನಕ್ಕಿ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next