ಶಹಾಬಾದ: ಇತಿಹಾಸ ತಿಳಿಸುವ ಅದೆಷ್ಟೋಸ್ಮಾರಕಗಳು, ಜೈನ ಬಸದಿಗಳು, ಉದ್ಭವ ಗಣಪಗಳುಹಾಗೂ ಉತVನನ ಮಾಡದೇ ಇರುವ ಗುಹಾಂತರ ದೇವಾಲಯಗಳನ್ನು ಹೊಂದಿರುವ ಭಂಕೂರಗ್ರಾಪಂನಲ್ಲಿ ಕೆಲಸವಿಲ್ಲದೆ ಪರದಾಡುತ್ತಿದ್ದ ಕೂಲಿಕಾರ್ಮಿಕರಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿಯೋಜನೆ ವರದಾನವಾಗಿದೆ.
ತಾಲೂಕಿನ ಭಂಕೂರ ಗ್ರಾಪಂ ವ್ಯಾಪ್ತಿಯಲ್ಲಿಮುತ್ತಗಾ, ತರಿತಾಂಡಾ, ವಾಡಾ ತಾಂಡಾಗಳುಬರುತ್ತವೆ. ಉದ್ಯೋಗ ಖಾತ್ರಿ ಯೋಜನೆಅನುಷ್ಠಾನದಲ್ಲಿ ಹಿದೆಂದಿಗಿಂತಲೂ ಈ ಬಾರಿ ಮಾತ್ರಯಶಸ್ವಿಯಾಗಿ ಖಾತ್ರಿ ಕೆಲಸವನ್ನು ಸಮರ್ಪಕವಾಗಿ ಮಾಡಲಾಗಿದೆ.
ಗ್ರಾಪಂ ಸದಸ್ಯರೆಲ್ಲರೂ ವಿಶೇಷ ಆಸಕ್ತಿ ವಹಿಸಿರೈತರ ಹೊಲಗಳಿಗೆ ಬದು ನಿರ್ಮಾಣ, ನಾಲಾಹೂಳೆತ್ತುವುದು, ಚೆಕ್ ಡ್ಯಾಮ್ ನಿರ್ಮಾಣ, ಬಾವಿಹೂಳೆತ್ತುವುದು, ಕೊಳವೆ ಬಾವಿ ನೀರು ಇಂಗಿಸುವಕಾರ್ಯ ಕೈಗೊಳ್ಳಲಾಗಿದೆ. ಈಗಾಗಲೇ ಮಳೆ ಬಂದು ಚೆಕ್‌ಡ್ಯಾಮ್‌ನಲ್ಲಿ ನೀರು ತುಂಬಿಕೊಂಡು ಹರಿಯುತ್ತಿರುವದೃಶ್ಯ ಗ್ರಾಮಸ್ಥರಲ್ಲಿ ಖುಷಿ ನೀಡಿದೆ.ಈಗಾಗಲೇ ಸುಮಾರು 1365 ಜನರಿಗೆಜಾಬಕಾರ್ಡ್ ನೀಡಲಾಗಿದೆ.
ಒಟ್ಟು 444ಕೂಲಿಕಾರ್ಮಿಕರು ಕೆಲಸ ಮಾಡಿದ್ದು,ಇದರಲ್ಲಿ 100 ಗಂಡು ಹಾಗೂ 344ಹೆಣ್ಣು ಕಾರ್ಮಿಕರು ಒಳಗೊಂಡಿದ್ದಾರೆ.ಏಪ್ರಿಲ್ ತಿಂಗಳಿನಿಂದ ಪ್ರಾರಂಭವಾದಯೋಜನೆ ಮೇ ತಿಂಗಳ ವರೆಗೆಸುಮಾರು 7555 ಮಾನವ ದಿನಗಳನ್ನುಸೃಜನೆ ಮಾಡಲಾಗಿದೆ. ಸರಿಸುಮಾರು 11,53,000ಸಾವಿರ ರೂ. ಕೂಲಿ ಕಾರ್ಮಿಕರಿಗೆ ಪಾವತಿಸಲಾಗಿದೆ.ಈಗಾಗಲೇ ಅವರವರ ಬ್ಯಾಂಕ್ ಖಾತೆಗೆ ಹಣಸಂದಾಯ ಮಾಡಲಾಗಿದೆ. ಗ್ರಾಮದಲ್ಲೂ ಕೃಷಿ ಹೊಂಡ ಉತ್ತಮವಾಗಿ ನಿರ್ಮಾಣಮಾಡಿದ್ದು ವಿಶೇಷವಾಗಿದೆ. ಕೃಷಿಹೊಂಡಕ್ಕಾಗಿ ಮೈರಾಡ ಸಂಸ್ಥೆ ವಿಶೇಷಕಾಳಜಿ ವಹಿಸಿ ಕೃಷಿ ಹೊಂಡವನ್ನುಸಮರ್ಪಕವಾಗಿ ಮಾಡಿಸಿದ್ದು ಗ್ರಾಮಸ್ಥರಮೆಚ್ಚುಗೆಗೆ ಪಾತ್ರವಾಗಿದೆ.
ಭಂಕೂರ ಗ್ರಾಮದ ಸುತ್ತಮುತ್ತಲಿನಲ್ಲಿ ಕಲ್ಲಿನಗಣಿ, ಕಲ್ಲಿನ ಪಾಲಿಷ್ ಮಶಿನ್‌ಗಳು ಹೆಚ್ಚಾಗಿ ಕಾರ್ಯನಿರ್ವಹಣೆ ಮಾಡುತ್ತಿರುವುದರಿಂದ ಸಾಕಷ್ಟುಕೂಲಿ ಕಾರ್ಮಿಕರು ಇಲ್ಲಿಯೇ ಕೆಲಸ ಮಾಡುತ್ತಿದ್ದರು. ಇದರಿಂದ ಕೂಲಿ ಕಾರ್ಮಿಕರ ಸಂಖ್ಯೆಕಡಿಮೆ ಇರುತ್ತಿತ್ತು. ಆದರೆ ಕೊರೊನಾದಿಂದಪಾಲಿಷ್ ಮಶಿನ್ ಹಾಗೂ ಕಲ್ಲಿನ ಗಣಿ ಬಂದ್‌ಆಗಿದ್ದರಿಂದ ಕೆಲಸವಿಲ್ಲದೇ ಕಾರ್ಮಿಕರು ಉದ್ಯೋಗಖಾತ್ರಿ ಕೆಲಸಕ್ಕೆ ಬರುತ್ತಿದ್ದಾರೆ.
ಇದರಿಂದ ಈಗಕಾರ್ಮಿಕರ ಸಂಖ್ಯೆಯೂ ಹೆಚ್ಚಾಗಿ ಕೆಲಸವೂಸಮರ್ಪಕವಾಗಿ ನಡೆಯುತ್ತಿದೆ.ಭಂಕೂರ ಗ್ರಾಪಂ ವ್ಯಾಪ್ತಿಯ ಗ್ರಾಮದಲ್ಲಿ ಸುಮಾರು 444 ಕಾರ್ಮಿಕರು ಬದು ನಿರ್ಮಾಣ,ಕೃಷಿ ಹೊಂಡ, ಚೆಕ್ ಡ್ಯಾಮ್, ಬಾವಿ ಹೂಳೆತ್ತುವಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಲಿನ ಪ್ರತಿ ಕೂಲಿಕಾರ್ಮಿಕರಿಗೆ ದಿನಕ್ಕೆ 289ರೂ. ಜತೆಗೆ ಸಲಕರಣಾವೆಚ್ಚ 10ರೂ. ಸೇರಿ 299ರೂ. ಕೂಲಿ ಪಾವತಿಮಾಡಲಾಗುತ್ತಿದೆ. ಇದರಿಂದ ದುಡಿಯುವಕೈಗಳಿಗೆ ಬಲ ಬಂದಂತಾಗಿದೆ. ಪ್ರತಿ ಇಪ್ಪತ್ತುಕೂಲಿಕಾರ್ಮಿಕರಿಗೆ ಒಬ್ಬ ಕಾಯಕ ಬಂಧುವನ್ನುನೇಮಿಸಲಾಗಿದೆ.
ಕಾಯಕ ಬಂಧು ಕೂಡ ಕೂಲಿ ಕಾರ್ಮಿಕನಾಗಿದ್ದು,ಅವನು ಪ್ರತಿದಿನ ಸ್ಥಳದ ಅಳತೆ ಮಾಡಿ ಕಾರ್ಮಿಕರಿಗೆಕೆಲಸ ನೀಡುವುದು, ಹಾಜರಿ ತೆಗೆದುಕೊಳ್ಳುವುದುಹಾಗೂ ಕಾಮಗಾರಿ ಮುಗಿದ ನಂತರ ಅಳತೆಮಾಡುವ ಕೆಲಸ ಮಾಡುತ್ತಾನೆ. ಹೀಗೆ ಗ್ರಾಮೀಣಜನರ ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆನೀಡುವಲ್ಲಿ ಗ್ರಾಪಂ ಅಧ್ಯಕ್ಷೆ ರಾಜಶ್ರೀ ರಜನಿಕಾಂತಕಂಬಾನೂರ, ಉಪಾಧ್ಯಕ್ಷ ಯಶ್ವಂತ ಚವ್ಹಾಣ,ಸರ್ವ ಸದಸ್ಯರು, ತಾಪಂ ಇಒ, ಪಿಡಿಒ ಜವಾಬ್ದಾರಿತೆಗೆದುಕೊಂಡು ನರೇಗಾ ಯೋಜನೆ ಸಮರ್ಪಕಅನುಷ್ಠಾನಕ್ಕಾಗಿ ಶ್ರಮಿಸುತ್ತಿದ್ದಾರೆ.
ಮಲ್ಲಿನಾಥ ಜಿ. ಪಾಟೀಲ