Advertisement

ಆರೋಗ್ಯಕಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ : ಅನುಪಾ

12:15 PM Apr 10, 2020 | Naveen |

ಕಲಬುರಗಿ: ಮನುಷ್ಯ ಸಾಕಷ್ಟು ಭೌತಿಕ ಸಂಪತ್ತು ಗಳಿಸಿದರೂ ಅವುಗಳನ್ನು ಅನುಭವಿಸಲು ಆರೋಗ್ಯ ಇರದಿದ್ದರೆ ಎಲ್ಲವೂ ವ್ಯರ್ಥವಾಗುತ್ತದೆ. ಆದ್ದರಿಂದ ಆರೋಗ್ಯವೇ ದೊಡ್ಡ ಸಂಪತ್ತು ಎಂದು ವೈದ್ಯಾ ಧಿಕಾರಿ ಡಾ| ಅನುಪಾ ಕೇಶ್ವಾರ ಹೇಳಿದರು. ನಗರದ ಶೇಖರೋಜಾದಲ್ಲಿರುವ ಶಹಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ವಿಶ್ವ ಆರೋಗ್ಯ ದಿನಾಚರಣೆ ಹಾಗೂ ಕೋವಿಡ್-19  ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೂ ಕೋವಿಡ್-19 ನಂತ ಹೊಸ ರೋಗಗಳು ಸೃಷ್ಟಿಯಾಗುತ್ತಿವೆ. ಮನುಷ್ಯ ಯಾಂತ್ರಿಕ ಬದುಕು ಸಾಗಿಸುತ್ತಿದ್ದಾನೆ. ಅನಿಯಮಿತ ದುಡಿಮೆ, ಆಹಾರ ಪದ್ಧತಿ, ಆರೋಗ್ಯದ ಕಡೆ ಗಮನ ಹರಿಸದೇ ಅನಾರೋಗ್ಯಕ್ಕೆ ಈಡಾಗುತ್ತಿರುವುದು ಕಂಡು ಬರುತ್ತಿದೆ ಎಂದರು. ದೈನಂದಿನ ಜೀವನ ಶಿಸ್ತುಬದ್ಧವಾಗಿರಬೇಕು. ಹಾನಿಕಾರಕ ವಸ್ತುಗಳಿಂದ ದೂರವಿರಬೇಕು. ಜೀವನ ವಿಧಾನದಲ್ಲಿ ಸಂದರ್ಭಕ್ಕೆ ತಕ್ಕಂತೆ ಬದಲಾವಣೆ ಇರಬೇಕು. ಸಿಕ್ಕಂತೆ ತಿನ್ನುವುದು, ರಾಸಾಯನಿಯುಕ್ತ ಪಾನೀಯ, ಜಂಕ್‌ಫುಡ್‌ ಸೇವನೆ ಮಾಡುವುದು, ಕೆಲಸ ಮಾಡದಿರುವುದು, ಸರಿಯಾಗಿ ವಿಶ್ರಾಂತಿ ಪಡೆಯದಿರುವಂತಹ ಅನೇಕ ಕಾರಣಗಳಿಂದ ಬೊಜ್ಜು, ಕ್ಯಾನ್ಸರ್‌, ಮಧುಮೇಹ, ಅಧಿ ಕ ರಕ್ತದೊತ್ತಡ, ಹೃದಯ ಕಾಯಿಲೆಗಳು, ಮಾನಸಿಕ ರೋಗಗಳು ಕಾಣಿಸಿಕೊಳ್ಳು¤ವೆ. ಆದ್ದರಿಂದ ಆರೋಗ್ಯಕರ ಹವ್ಯಾಸ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಎಚ್‌.ಬಿ. ಪಾಟೀಲ ಮಾತನಾಡಿ, ವಿಶ್ವಆರೋಗ್ಯ ಸಂಸ್ಥೆಯ ಪ್ರಕಾರ ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಅಧ್ಯಾತ್ಮಿಕವಾಗಿ ಯಾವುದೇ ರೀತಿಯ ರೋಗ-ರುಜನಿಗಳಿಂದ ಮುಕ್ತವಾದ ಸ್ಥಿತಿಯೇ ಆರೋಗ್ಯವೆಂದು ವ್ಯಾಖ್ಯಾನಿಸಿದೆ. ಪ್ರತಿಯೊಬ್ಬರಲ್ಲಿಯೂ ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕೆಂಬ ಉದ್ದೇಶದಿಂದ 1948ರ ಏ. 7 ರಂದು ಮೊದಲ ಬಾರಿಗೆ ವಿಶ್ವ ಆರೋಗ್ಯ ದಿನಾಚರಣೆ ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಏ. 7ರಂದು ಇದನ್ನು ಆಚರಿಸುತ್ತಾ ಬರಲಾಗಿದೆ. ಆರೋಗ್ಯಕರ ಜೀವನದ ಅಂಶಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನಾಚರಣೆಯ ಉದ್ದೇಶವಾಗಿದೆಯೆಂದರು. ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ರೇಷ್ಮಾ ನಕ್ಕುಂದಿ, ನಾಗೇಶ್ವರಿ, ಅಶೋಕ ಪಾಟೀಲ, ನಾಗೇಶ್ವರಿ, ಚಂದಮ್ಮ, ಗಂಗಾಜ್ಯೋತಿ ಗಂಜಿ, ಮಂಗಲಾ, ಸಂಗೀತಾ ಡಿ.ಜಾಧವ, ಶ್ರೀದೇವಿ ಶಿಂಧೆ, ಗುರುರಾಜ ಖೆ„ನೂರ್‌, ಜಗನ್ನಾಥ ಗುತ್ತೇದಾರ, ನಾಗಮ್ಮ ಚಿಂಚೋಳಿ, ಸಂಗಪ್ಪ ಅತನೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next