Advertisement
ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಮತ ಎಣಿಕೆ ದಿನದಂದು ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಮತ ಎಣಿಕೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
ಪ್ರತಿ ಸುತ್ತು ಮತ ಎಣಿಕೆ ಕುರಿತ ಪತ್ರಗಳಿಗೆ ಆಯಾ ಟೇಬಲ್ ಏಜೆಂಟರ ಸಹಿ ಕಡ್ಡಾಯವಾಗಿ ಮಾಡಿಸಬೇಕು. ಇಲ್ಲದಿದ್ದರೆ ಮುಂದೆ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷಗಳು ಆಕ್ಷೇಪಣೆ ಸಲ್ಲಿಸಬಹುದು. ಹಾಗಾಗಿ ತಪ್ಪದೇ ಸಹಿ ಮಾಡಿಸಿಕೊಳ್ಳಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.
ಈ ಬಾರಿ ಪ್ರತಿ ವಿಧಾನಸಭಾ ಕ್ಷೇತ್ರದ 5 ವಿವಿಪ್ಯಾಟ್‌ಗಳ ಸ್ಲಿಪ್ ಎಣಿಕೆ ಸಹ ಮಾಡಬೇಕಾಗಿರುವುದರಿಂದ ಯಾವುದೇ ಗೊಂದಲವಾಗದಂತೆ ಎಣಿಸಬೇಕು. ಪ್ರತಿಬಾರಿ 12:30ರ ವರೆಗೆ ಫಲಿತಾಂಶ ಹೊರಬೀಳುತ್ತಿತ್ತು. ಈ ಬಾರಿ ವಿವಿಪ್ಯಾಟ್‌ಗಳ ಸ್ಲಿಪ್ ಮತ ಎಣಿಕೆಯಿಂದಾಗಿ ಮಧ್ಯಾಹ್ನ 3 ಅಥವಾ 4 ಗಂಟೆಗೆ ಫಲಿತಾಂಶ ಬರಬಹುದು ಎಂದು ಅವರು ತಿಳಿಸಿದರು. ಸೇಡಂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ| ಶಶಿಶೇಖರ್ ರೆಡ್ಡಿ ಮಾತನಾಡಿದರು. ಚಿಂಚೋಳಿ ಮೀಸಲು (ಎಸ್.ಸಿ) ವಿಧಾನಸಭಾ ಉಪಚುನಾವಣೆಗೆ ನೇಮಕವಾಗಿರುವ ಸಾಮಾನ್ಯ ವೀಕ್ಷಕ ಬಿ.ರಾಮರಾವ್, ಉಪ ಚುನಾವಣೆಯ ಚುನಾವಣಾಧಿಕಾರಿ ಸೋಮಶೇಖರ್ ಎಸ್.ಜಿ, ಪಾಲಿಕೆ ಆಯುಕ್ತೆ ಫೌಜಿಯಾ ಬಿ. ತರನ್ನುಮ, ಜಿಪಂ ಉಪ ಕಾರ್ಯದರ್ಶಿ ಅಶೋಕ್ ದುಡಗುಂಟಿ, ಕೆ. ರಾಮೇಶ್ವರಪ್ಪ, ಸುಧೀಂದ್ರ ಅವಧಾನಿ, ಎಲ್ಲಾ ಸಹಾಯಕ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರರು ಹಾಜರಿದ್ದರು.
ವಿವಿಯ ಪರೀಕ್ಷಾ ವಿಭಾಗದ ಹಾಲ್ನಲ್ಲಿ ಚಿತ್ತಾಪುರ, ಗುಲ್ಬರ್ಗಾ ಗ್ರಾಮೀಣ ಹಾಗೂ ಜೇವರ್ಗಿ ವಿಧಾನಸಭಾ ಕ್ಷೇತ್ರ, ಒಳಾಂಗಣ ಕ್ರೀಡಾಂಗಣದಲ್ಲಿ ಗುಲ್ಬರ್ಗಾ ಉತ್ತರ ಮತ್ತು ಗುರುಮಠಕಲ್ ಮತಕ್ಷೇತ್ರ, ಗಣಿತಶಾಸ್ತ್ರ ವಿಭಾಗದಲ್ಲಿ ಅಫಜಲಪುರ ಹಾಗೂ ಸಸ್ಯಶಾಸ್ತ್ರ ವಿಭಾಗದಲ್ಲಿ ಗುಲ್ಬರ್ಗಾ ದಕ್ಷಿಣ ಮತಕ್ಷೇತ್ರ, ಕನ್ನಡ ಅಧ್ಯಯನ ಕೇಂದ್ರ ಸಭಾಂಗಣ (ನೆಲಮಹಡಿ) ಸೇಡಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯಲಿವೆ. ಹಾಗೆಯೇ ಕನ್ನಡ ಅಧ್ಯಯನ ಕೇಂದ್ರ ಸಭಾಂಗಣದ ಮೊದಲ ಮಹಡಿಯಲ್ಲಿ ಚಿಂಚೋಳಿ ವಿಧಾನಸಭಾ ಉಪಚುನಾವಣೆ ಮತ ಎಣಿಕೆ ನಡೆಯಲಿದೆಂದು ಅಪರ ಜಿಲ್ಲಾಧಿಕಾರಿ ಟಿ. ಯೋಗೇಶ್ ವಿವರಿಸಿದರು.