Advertisement

ರಾಮರಾವ್‌ ಮಹಾರಾಜರ ದರ್ಶನ ಪಡೆದ ಅಭ್ಯರ್ಥಿಗಳು

11:27 AM May 02, 2019 | Naveen |

ಕಲಬುರಗಿ/ಚಿಂಚೋಳಿ: ಚಿಂಚೋಳಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಗೆಲ್ಲುವ ಜಿದ್ದಿನಲ್ಲಿರುವ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳು ಬಂಜಾರ ಸಮುದಾಯದ ಮತಬೇಟೆಗೆ ಇಳಿದಿದ್ದು. ಪೌರಾದೇವಿ ಪೀಠದ ಪೀಠಾಧಿಪತಿಗಳಾದ ಡಾ| ರಾಮರಾವ್‌ ಮಹಾರಾಜರ ಮೊರೆ ಹೋಗಿದ್ದಾರೆ.

Advertisement

ಕಾಂಗ್ರೆಸ್‌ ಅಭ್ಯರ್ಥಿ ಸುಭಾಷ ರಾಠೊಡ ಮಹಾರಾಷ್ಟ್ರಕ್ಕೆ ತೆರಳಿ ರಾಮರಾವ್‌ ಮಹಾರಾಜರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿ ಡಾ| ಅವಿನಾಶ ಜಾಧವ ಕೂಡ ಆಶೀರ್ವಾದ ಪಡೆದಿದ್ದಾರೆ. ಬುಧವಾರ ಬೆಳಗ್ಗೆ ಸುಭಾಷ ರಾಠೊಡ ರಾಮರಾವ್‌ ಮಹಾರಾಜರನ್ನು ಭೇಟಿಯಾಗಿ ತಮ್ಮನ್ನು ಬೆಂಬಲಿಸುವಂತೆ ಗುರುಗಳಲ್ಲಿ ಮನವಿ ಮಾಡಿಕೊಂಡಿದ್ದರು ಎಂದು ಹೇಳಲಾಗಿತ್ತು.

ಇದಾದ ನಂತರ ಬುಧವಾರ ಸಂಜೆ ಬಿಜೆಪಿ ಅಭ್ಯರ್ಥಿ ಡಾ| ಅವಿನಾಶ ಜಾಧವ ಅವರು ಡಾ| ರಾಮರಾವ್‌ ಮಹಾರಾಜರನ್ನು ಭೇಟಿ ಮಾಡಿ ತಮ್ಮನ್ನು ಬೆಂಬಲಿಸುವಂತೆ ಕೋರಿದ್ದಾರೆ ಎನ್ನಲಾಗಿದೆ. ಚಿಂಚೋಳಿ ಕ್ಷೇತ್ರದಲ್ಲಿ ಬಂಜಾರಾ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲದೇ, ಇಬ್ಬರೂ ಅಭ್ಯರ್ಥಿಗಳು ಬಂಜಾರಾ ಸಮುದಾಯಕ್ಕೆ ಸೇರಿದ್ದರಿಂದ ಸಮುದಾಯದ ಮತಗಳನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ.

ರಾಠೊಡಗೆ ಶುಭ ಹಾರೈಕೆ: ಮೀಸಲು ಚಿಂಚೋಳಿ ಮತಕ್ಷೇತ್ರಕ್ಕೆ ಸ್ಪರ್ಧಿಸಿದ ಕಾಂಗ್ರೆಸ್‌ ಅಭ್ಯರ್ಥಿ ಸುಭಾಶ ರಾಠೊಡ ನಾಮಪತ್ರ ಸಲ್ಲಿಸಿದ ಮರುದಿನವೇ ಮಹಾರಾಷ್ಟ್ರದ ಪೌರಾದೇವಿ ಬಳಿ ಸಮಾಜದ ಮುಖಂಡರೊಂದಿಗೆ ಭೇಟಿ ನೀಡಿ ಪೌರಾದೇವಿ ಶಕ್ತಿಪೀಠದ ಬಂಜಾರಾ ಧರ್ಮಗುರು ಪೂಜ್ಯ ಡಾ| ರಾಮರಾವ ಮಹಾರಾಜರ ಆಶೀರ್ವಾದ ಪಡೆದುಕೊಂಡಿದ್ದಾರೆ.

ಪೂಜ್ಯರು ಈ ಸಂದರ್ಭದಲ್ಲಿ ಮಾತನಾಡಿ, ಬಂಜಾರಾ ಸಮಾಜದ ಏಳ್ಗೆ, ಪ್ರಗತಿ ಹಾಗೂ ಅಭಿವೃದ್ದಿಗಾಗಿ ಕಳೆದ 25 ವರ್ಷಗಳಿಂದ ಸುಭಾಶ ರಾಠೊಡ ಹೋರಾಟ ನಡೆಸುತ್ತಲೇ ಬರುತ್ತಿದ್ದಾರೆ. ಒಳ್ಳೆಯ ಸಮಾಜದ ಕಾಳಜಿಯುಳ್ಳ ಸುಭಾಶ ರಾಠೊಡ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ ಎಂದು ಸಮಾಜದ ಮುಖಂಡ ತುಕಾರಾಮ ಪವಾರ ತಿಳಿಸಿದ್ದಾರೆ. ತಾಲೂಕು ಬಂಜಾರಾ ಸಮಾಜದ ಮುಖಂಡರಾದ ಜಗನ್ನಾಥ ರಾಠೊಡ, ಮೇಘರಾಜ ರಾಠೊಡ, ಚಂದರ ಕಾರಬಾರಿ, ತಾಲೂಕು ಬಂಜಾರಾ ಸಮಾಜದ ಅಧ್ಯಕ್ಷ ರಾಮಶೆಟ್ಟಿ ಪವಾರ, ಸುನೀಲ ರಾಠೊಡ, ಅಶೋಕ ಚವ್ಹಾಣ, ಪ್ರೇಮಸಿಂಗ ಜಾಧವ ಹಾಗೂ ಇನ್ನಿತರರು ಈ ಸಂದರ್ಭದಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next