Advertisement

ಲೈಂಗಿಕ ಸಂಬಂಧಕ್ಕಾಗಿ ಶಿಕ್ಷಕಿಯಿಂದಲೇ ವಿದ್ಯಾರ್ಥಿಯ ಕಿಡ್ನಾಪ್!

01:25 PM Mar 01, 2017 | Team Udayavani |

ಕಲಬುರಗಿ:ಲೈಂಗಿಕ ತೀಟೆ ತೀರಿಸಿಕೊಳ್ಳಲು ಶಿಕ್ಷಕಿಯೇ ವಿದ್ಯಾರ್ಥಿಯನ್ನು ಅಪಹರಿಸಿರುವುದಾಗಿ ಪೋಷಕರು ಆರೋಪಿಸಿರುವ ಘಟನೆ ಬುಧವಾರ ಕಲಬುರಗಿಯಲ್ಲಿ ನಡೆದಿದೆ.

Advertisement

ಕಲಬುರಗಿ ನಗರದ ಶಾಲೆಯೊಂದರ ಶಿಕ್ಷಕಿ ವಿರುದ್ಧ ಸ್ವತಃ ವಿದ್ಯಾರ್ಥಿಯ ಪೋಷಕರೇ ಅಶೋಕ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಮ್ಮ ಮಗ 2016ರ ನವೆಂಬರ್ 15ರಿಂದ ನಾಪತ್ತೆಯಾಗಿದ್ದಾನೆ. ವಿದ್ಯಾರ್ಥಿ ಜತೆ ಶಿಕ್ಷಕಿ ಅಸಭ್ಯವಾಗಿ ವರ್ತಿಸುತ್ತಿದ್ದು, ಆತನನ್ನು ಮನೆಗೆ ಕರೆಯಿಸಿಕೊಂಡು ಲೈಂಗಿಕ ಸಂಬಂಧ ಇಟ್ಟುಕೊಂಡಿರುವುದಾಗಿ ಪೋಷಕರು ಆರೋಪಿಸಿದ್ದಾರೆಂದು ಮಾಧ್ಯಮದ ವರದಿ ತಿಳಿಸಿದೆ.

ಆತನ ಜೊತೆ ಲೈಂಗಿಕ ಸಂಬಂಧಕ್ಕಾಗಿಯೇ ಶಿಕ್ಷಕಿ  ವಿದ್ಯಾರ್ಥಿಯನ್ನು ಅಪಹರಿಸಿರುವುದಾಗಿ ಪೋಷಕರು ದೂರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next