ಕಲಬುರಗಿ: ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಸಂಸ್ಥಾನದಲ್ಲಿ ಶ್ರಾವಣ ಮಾಸದಲ್ಲಿ ಪ್ರತಿ ವರ್ಷದಂತೆ ನಡೆಯುವ ಮಹಾತ್ಮರ ಹಾಗೂ ಶರಣರ ತತ್ವಗಳ ಕುರಿತ ಉಪನ್ಯಾಸ ಮಾಲಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಗಸ್ಟ್ 1ರಿಂದ 40 ದಿನಗಳ ಕಾಲ ನಡೆಯಲಿವೆ.
ಅಖೀಲ ಭಾರತ ಅನುಭವ ಮಂಟಪ, ಶರಣಬಸವ ವಿಶ್ವವಿದ್ಯಾಲಯ ಸಹಯೋಗದಲ್ಲಿ ಶ್ರಾವಣಮಾಸ ಉಪನ್ಯಾಸ ಮಾಲಿಕೆ ನಡೆಯಲಿದೆ ಎಂದು ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದ ಪೀಠಾಧಿಪತಿ ಹಾಗೂ ಶರಣಬಸವ ವಿವಿ ಕುಲಾಧಿಪತಿ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಶತಮಾನದ ಅವಧಿಯಿಂದಲೂ ಶ್ರಾವಣ ಮಾಸದ ಶಿವಾನುಭವ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಪ್ರತಿವರ್ಷ ಶರಣರ ತತ್ವಗಳ ಕುರಿತಾಗಿ ಉಪನ್ಯಾಸ ಮಾಲಿಕೆ ನಡೆದು ಬಂದಿದ್ದರೆ ಈ ಸಲ ಶರಣಬಸವೇಶ್ವರರ ಜೀವನ ಹಾಗೂ ತತ್ವಗಳ ಉಪನ್ಯಾಸ ಮಾಲಿಕೆ ನಡೆದು ಬರಲಿದೆ. ಗೋದುತಾಯಿ ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಡಾ| ನೀಲಾಂಬಿಕಾ ಪೊಲೀಸ್ ಪಾಟೀಲ ರಚಿಸಿರುವ ಶರಣಬಸವೇಶ್ವರರ ಶಿವಲೀಲೆಗಳು ಎನ್ನುವ ಕೃತಿ ಆಧರಿಸಿ 40 ದಿನಗಳ ಉಪನ್ಯಾಸ ಸಿದ್ಧಗೊಳಿಸಲಾಗಿದೆ ಎಂದು ವಿವರಿಸಿದರು.
ಉಪನ್ಯಾಸವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸ ಲಾಗುವುದು. ಶ್ರಾವಣ ಮಾಸದ ಶಿವಾನುಭವ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿದ ಮಹಾದಾಸೋಹಿ ಲಿಂಗೈಕ್ಯ ಪೂಜ್ಯ ದೊಡ್ಡಪ್ಪ ಅಪ್ಪ ಅವರ 36ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಎಂಟು ದಿನ ವಿಶೇಷ ಕಾರ್ಯಕ್ರಮಗಳು ಜರುಗಲಿವೆ. ಅಲ್ಲದೇ ತಾವು ಮಹಾದಾಸೋಹ ಪೀಠಾರೋಹಣ ಮಾಡಿ 36 ವರ್ಷವಾದ ಸವಿನೆನಪಿಗೆ ಉಪನ್ಯಾಸ ಮಾಲಿಕೆ ಜರುಗಲಿದೆ ಎಂದು ತಿಳಿಸಿದರು.
ಆಗಸ್ಟ್ 1ರಂದು ಡಾ| ನೀಲಾಂಬಿಕಾ ಶೇರಿಕಾರ, ಆ.2 ರಂದು ಕ್ಷೇಮಲಿಂಗ ಬಿರಾದಾರ, ಆ. 3ರಂದು ಡಾ| ಪುಟ್ಟಮಣಿ ದೇವಿದಾಸ, 4ರಂದು ಪ್ರೊ| ವೆಂಕಣ್ಣ ದೊಡ್ಡೇಗೌಡ, 5ರಂದು ಡಾ| ಸೋಮಶಂಕ್ರಯ್ಯ ವಿಶ್ವನಾಥಮಠ, 6ರಂದು ಡಾ| ಕಲ್ಯಾಣರಾವ್ ಜಿ. ಪಾಟೀಲ, 7ರಂದು ಡಾ| ಸಾರಿಕಾದೇವಿ ಕಾಳಗಿ, ಆ. 8ರಂದು ನಾನಾಸಾಹೇಬ ಹಚ್ಚಡದ, 9ರಂದು ಡಾ| ಸುಮಂಗಲಾ ಎನ್ ರೆಡ್ಡಿ, ಆ. 10ರಂದು ಡಾ| ಪ್ರಭಾವತಿ ಚಿತಕೋಟೆ, ಆ. 11ರಂದು ಸುಜಾತಾ ಜಂಗಮಶೆಟ್ಟಿ, ಆ. 12ರಂದು ಡಾ| ಇಂದಿರಾ ಶೆಟಕಾರ್, 13ರಂದು ಡಾ| ಸಿದ್ಧಮ್ಮ ಗುಡೇದ್, 14ರಂದು ಪ್ರೊ| ಸಾವಿತ್ರಿ ಜಂಬಲದಿನ್ನಿ, 15ರಂದು ಡಾ| ಎಸ್.ಎಸ್. ಪಾಟೀಲ, 16ರಂದು ಡಾ| ಎಸ್.ಎಸ್. ಪಾಟೀಲ, ಆ. 17ರಂದು ಪ್ರೊ| ಜಗದೀಶ ಬಿಜಾಪುರೆ, 18ರಂದು ಡಾ| ಆನಂದ ಸಿದ್ಧಾಮಣಿ, ಆ. 19ರಂದು ಪ್ರೊ| ವಿಠೊಬಾ ದೊಣ್ಣೆಗೌಡ, ಆ. 20ರಂದು ಡಾ| ಮರಿಯಮ್ಮ ಎಸ್., 21ರಂದು ಪ್ರೊ| ಜಗದೇವಿ ಗುಳೇದ್, 22ರಂದು ಅನಿತಾ ಗೊಬ್ಬುರ, 23ರಂದು ಡಾ| ಶ್ರೀಶೈಲ ನಾಗರಾಳ, 24ರಂದು ಸುಂದರಬಾಯಿ ನಾಗಶೆಟ್ಟಿ, 25ರಂದು ಡಾ| ಅರುಣಕುಮಾರ ಲಗಶೆಟ್ಟಿ, 26ರಂದು ವಿಜಯಲಕ್ಷ್ಮೀ, 27ರಂದು ಪ್ರೊ| ಜಗದೇವಿ ಕೋಲಕುಂದಾ, 28ರಂದು ಡಾ| ಮಹಾದೇವ ಬಡಿಗೇರ್, 29ರಂದು ಪ್ರೊ| ನಿಂಗಮ್ಮ ಪತಂಗೆ, 30ರಂದು ಶ್ರೀದೇವಿ ಮಹಾದೇವನಮಠ, 31ರಂದು ಡಾ| ಶಿವರಾಜ ಶಾಸ್ತ್ರೀ, ಸೆ. 1ರಂದು ಡಾ| ಚಿದಾನಂದ ಚಿಕ್ಕಮಠ, 2ರಂದು ಡಾ| ಲಿಂಗರಾಜ ಶಾಸ್ತ್ರೀ, 3ರಂದು ಡಾ| ಸುರೇಶ ನಂದಗಾಂವ, 4ರಂದು ಪ್ರೊ| ಪವನ ಕಲಬುರಗಿ, 5ರಂದು ಪ್ರೊ| ನಿರ್ಮಲಾ ದೊರೆ, 6ರಂದು ಡಾ| ಎಂ.ಎಸ್. ಪಾಟೀಲ ಉಪನ್ಯಾಸ ನೀಡುವರು.
1100 ಶರಣರ ದೇವಸ್ಥಾನ: ಮಹಾದಾಸೋಹಿ ಶರಣಬಸವೇಶ್ವರ ದೇವಸ್ಥಾನ ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಗುಜರಾತ, ಅಮೆರಿಕಾ ಸೇರಿದಂತೆ ಒಟ್ಟಾರೆ 1100 ಇದ್ದು, ಇದು ಶರಣರ ಮಹಿಮೆ ನಿರೂಪಿಸುತ್ತದೆ. ಶರಣರ ಪುರಾಣ ಕನ್ನಡ, ಹಿಂದಿ, ತೆಲಗು, ಮರಾಠಿ ಭಾಷೆಯಲ್ಲಿ ಸಂಪುಟವಾಗಿ ಪ್ರಕಟವಾಗಿವೆ.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಗೋದು ತಾಯಿ ಕಾಲೇಜಿನ ಪ್ರಾಚಾರ್ಯ ಡಾ| ನೀಲಾಂಬಿಕಾ ಪೊಲೀಸ್ ಪಾಟೀಲ, ಶರಣಬಸವೇಶ್ವರ ಸಂಯುಕ್ತ ವಿದ್ಯಾಲಯ ಪ್ರಾಚಾರ್ಯ ಬಿ.ಸಿ. ಚವ್ಹಾಣ, ಪ್ರಾಧ್ಯಾಪಕರಾದ ಶಿವರಾಜ ಶಾಸ್ತ್ರೀ ಹೇರೂರ, ಪ್ರೊ| ಸುರೇಶ ನಂದಗಾಂವ, ಕೃಪಾ ಗೊಬ್ಬುರ ಇದ್ದರು.