ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (ಟೂರಿಸಂ ಆ್ಯಂಡ್ ಟ್ರಾವೆಲ್ ಮ್ಯಾನೇಜಮೆಂಟ್, ಪ್ರವಾಸೋದ್ಯಮ ಮತ್ತು ಪ್ರಯಾಣ ನಿರ್ವಹಣೆ)ವಿಭಾಗಕ್ಕೆ ಬೇಡಿಕೆ ಹೆಚ್ಚಿದೆ.
ಮೂರು ವರ್ಷದ ಅವಧಿಯ ಬ್ಯಾಚುಲರ್ ಆಫ್ ಬಿಜಿನೆಸ್ ಮ್ಯಾನೇಜಮೆಂಟ್ (ಟೂರಿಸಂ ಆ್ಯಂಡ್ ಟ್ರಾವೆಲ್- ಪ್ರವಾಸೋದ್ಯಮ ಮತ್ತು ಪ್ರಯಾಣ ನಿರ್ವಹಣೆ) ಮತ್ತು ಎರಡು ವರ್ಷ ಅವಧಿಯ ಸ್ನಾತಕೋತ್ತರ ಪದವಿ ಇದಾಗಿದೆ. ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಹೇರಳ ಉದ್ಯೋಗಾವಕಾಶಗಳು ಲಭ್ಯವಿರುವದೇ ಈ ಕೋರ್ಸಿನ ವಿಶಿಷ್ಟ ಗುಣವಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿನ ಪ್ರವಾಸೋದ್ಯಮ ನಿರ್ದೇಶನಾಲಯಗಳು ಮತ್ತು ಪ್ರಯಾಣ, ಪ್ರವಾಸೋದ್ಯಮ ವಿಭಾಗದಲ್ಲಿ ಉದ್ಯೋಗಾವಕಾಶಗಳು ಸಮೃದ್ಧವಾಗಿದ್ದರೆ, ಖಾಸಗಿ ವಲಯದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ.
ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಈ ಕೋರ್ಸ್‌ನ್ನು ಹೈಕ ಭಾಗದ ವಿದ್ಯಾರ್ಥಿಗಳಿಗಾಗಿ ಆರಂಭಿಸಿದ್ದಾರೆ. ಪ್ರವಾಸೋದ್ಯಮ ಮತ್ತು ಪ್ರಯಾಣ ನಿರ್ವಹಣೆ ವಿಭಾಗವು ಹಿರಿಯ ಮತ್ತು ನುರಿತ ಅಧ್ಯಾಪಕರನ್ನು ಹೊಂದಿದೆ. ವಿದ್ಯಾರ್ಥಿಗಳ ಕೌಶಲ್ಯ ಉತ್ತಮಗೊಳಿಸಲು ಮತ್ತು ಅವರಿಗೆ ತರಬೇತಿ ನೀಡಲು ಸುಸಜ್ಜಿತ ಪ್ರಯೋಗಾಲಯ ಮತ್ತು ಮೂಲಭೂತ ಸೌಲಭ್ಯ ಹೊಂದಿದೆ. ವಿದ್ಯಾರ್ಥಿಗಳು ಪ್ರವಾಸೋದ್ಯಮ ಕ್ಷೇತ್ರಕ್ಕೆ ನಿಯಮಿತ ಪ್ರವಾಸ ಕೈಗೊಳ್ಳುತ್ತಾರೆ. ಹೆಸರಾಂತ ಪ್ರವಾಸಿ ನಿರ್ವಾಹಕರು, ಹೋಟೆಲ್ಗಳು ಮತ್ತು ಆತಿಥ್ಯ ವಲಯದ ನಿರ್ವಾಹಕರನ್ನು ಅಧ್ಯಯನ ಸಂದರ್ಭದಲ್ಲಿ ಭೇಟಿ ಮಾಡುತ್ತಾರೆ.
ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಅನುಕೂಲಕ್ಕಾಗಿ 2000 ಕ್ಕೂ ಅಧಿಕ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ನಿಯತಕಾಲಿಕಗಳ ಸಂಪುಟಗಳ ಸಂಗ್ರಹವನ್ನು ಹೊಂದಿದೆ. ವಿದ್ಯಾರ್ಥಿಗಳ ಕಲಿಕೆಯ ಕೌಶಲ್ಯ ಹೆಚ್ಚಿಸಲು ಎಲ್ಸಿಡಿಯೊಂದಿಗೆ ಆಧುನಿಕ ಬೋಧನಾ ಸಾಧನಗಳನ್ನು ಬಳಸುವುದರ ಜೊತೆಗೆ ವೈಫೈ ಸೌಲಭ್ಯ ಹೊಂದಿದ ಕಂಪ್ಯೂಟರ್ ಲ್ಯಾಬ್ ಸಹ ವಿದ್ಯಾರ್ಥಿಗಳಿಗೆ ಶರಣಬಸವ ವಿಶ್ವವಿದ್ಯಾಲಯದ ವಿಭಾಗದಲ್ಲಿ ಲಭ್ಯವಿದೆ.
ದೇಶ-ವಿದೇಶದಲ್ಲಿಂದು ಪ್ರವಾಸೋದ್ಯಮ ಕ್ಷೇತ್ರ ವಿಸ್ತಾರವಾಗಿ ಬೆಳೆಯುತ್ತಿರುವುದರಿಂದ ಹಾಗೂ ವಿಫುಲ ಅವಕಾಶಗಳಿರುವುದನ್ನು ಮನಗಂಡು ವಿವಿಯಲ್ಲಿ ಆದ್ಯತೆ ಮೇರೆಗೆ ಪ್ರವಾಸೋದ್ಯಮ ಕೋರ್ಸ್ ಪ್ರಾರಂಭಿಸಲಾಗಿದೆ. ಸಂಸ್ಥೆಯಡಿ ಈಗಾಗಲೇ ಈ ಕೋರ್ಸ್ ಯಶಸ್ವಿಯಾಗಿರುವುದು ಎಲ್ಲರಿಗೂ ಗೊತ್ತಿದೆ. ಅದೇ ನಿಟ್ಟಿನಲ್ಲಿ ವಿವಿಯಲ್ಲೂ ಕಾರ್ಯಾರಂಭವಾಗಿದೆ.
•
ಡಾ| ಶರಣಬಸವಪ್ಪ ಅಪ್ಪ,
ಕುಲಾಧಿಪತಿಗಳು, ಶರಣಬಸವ ವಿವಿ