Advertisement

ಮತದಾರರ ಪಟ್ಟಿ ಪರಿಶೀಲನೆಯಾಗಲಿ

04:15 PM Feb 07, 2020 | |

ಕಲಬುರಗಿ: ತಹಶೀಲ್ದಾರರು ಹಾಗೂ ಚುನಾವಣಾ ಕಾರ್ಯಗಳಿಗೆ ನೇಮಿಸಿದ ಅಧಿಕಾರಿಗಳು ಪ್ರತಿ ಗ್ರಾಮ ಮತ್ತು ಬೂತ್‌ಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಶೀಲಿಸಬೇಕು. ಪ್ರತಿ ಬಿ.ಎಲ್‌.ಒಗಳಿಂದ ಹೊಸ ಮತದಾರರ ಹಾಗೂ ತಿದ್ದುಪಡಿ ಅರ್ಜಿಗಳ ಕುರಿತು ಮಾಹಿತಿ ಸಂಗ್ರಹಿಸಿಸಬೇಕು ಎಂದು ಪ್ರಾದೇಶಿಕ ಆಯುಕ್ತ ಹಾಗೂ ಮತದಾರರ ಪಟ್ಟಿ ವೀಕ್ಷಕ ಸುಬೋಧ ಯಾದವ ತಿಳಿಸಿದರು.

Advertisement

ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮತದಾರರ ಪಟ್ಟಿ ಪರಿಷ್ಕರಣೆ-2019 ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಧಿಕಾರಿಗಳು ಮತದಾರರ ಪಟ್ಟಿಗೆ ಸಂಬಂಧಿ ಸಿದ ತಾಲೂಕು ಬಿ.ಎಲ್‌. ಎಗಳೊಂದಿಗೆ ನೇರವಾಗಿ ಸಂಪರ್ಕವನ್ನು ಹೊಂದಬೇಕು. ನಿಗದಿತ ಸಮಯದೊಳಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಆಗ ಮಾತ್ರ ಮತದಾರರ ಪಟ್ಟಿ ಸ್ವಚ್ಛ ಮತ್ತು ತ್ವರಿತವಾಗಿ ಪೂರ್ಣಗೊಳಿಸಲು ಸಾಧ್ಯ ಎಂದರು.

ಮತದಾರರ ಪಟ್ಟಿ ತಯಾರಿಕೆಗೆ ಚುನಾವಣೆ ಅಧಿಕಾರಿಗಳಿಗೆ ಹಾಗೂ ಬಿ.ಎಲ್‌.ಎಗಳಿಗೆ ಸೂಕ್ತ ತರಬೇತಿ ನೀಡಬೇಕು. ಜಿಲ್ಲೆಯಲ್ಲಿ 21.77 ಲಕ್ಷ ಮತದಾರರಿದ್ದು, ಶೇ.97ರಷ್ಟು ಮತದಾರರ ನೋಂದಣಿ ಕಾರ್ಯ ಮುಗಿದಿದೆ ಎಂದರು.

ಡಿಸಿ ಶರತ್‌ ಬಿ. ಮಾತನಾಡಿ, ಜೇವರ್ಗಿ ತಾಲೂಕಿನಲ್ಲಿ ಮೂರು, ಚಿತ್ತಾಪುರ ತಾಲೂಕಿನಲ್ಲಿ 20, ಸೇಡಂ ತಾಲೂಕಿನಲ್ಲಿ ಎರಡು, ಚಿಂಚೋಳಿ ತಾಲೂಕಿನಲ್ಲಿ 40, ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಆರು, ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ 612 ಮತದಾರರ ಪಟ್ಟಿ ಕುರಿತು ದೂರುಗಳು ಬಂದಿವೆ. ಕಲಬುರಗಿ ಉತ್ತರ ಕ್ಷೇತ್ರದಲ್ಲಿ 417 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ವಿವರಿಸಿದರು.

ಮೊಬೈಲ್‌ ಆಪ್‌ ಮೂಲಕ ಮತದಾರರ ಪಟ್ಟಿಗೆ ಹೆಸರು ಸೇರಿಸಲು ನೋಂದಣಿ ಹಾಗೂ ಮತದಾರರ ಪಟ್ಟಿ ಸ್ವಯಂ ದೃಢೀಕರಣ ಮಾಡುವ ಸಂದರ್ಭದಲ್ಲಿ ತಾಂತ್ರಿಕ ತೊಂದರೆಯಿಂದ ಕೆಲವೊಮ್ಮೆ ಎರಡೆರಡು ಬಾರಿ ಅರ್ಜಿಗಳು ಸಲ್ಲಿಕೆಯಾಗಿದೆ. ಇವುಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಮತದಾರರ ಪಟ್ಟಿ ಸಿದ್ಧಪಡಿಸಬೇಕು ಎಂದು ನಿರ್ದೇಶನ ನೀಡಿದರು.

Advertisement

ಎಡಿ ಸಿ ಡಾ. ಶಂಕರ ವಣಿಕ್ಯಾಳ, ಮಹಾನಗರ ಪಾಲಿಕೆ ಆಯುಕ್ತ ರಾಹುಲ್‌ ತುಕಾರಾಂ ಪಾಂಡ್ವೆ, ತಾಲೂಕುಗಳ ತಹಶೀಲ್ದಾರರು, ಕ್ಷೇತ್ರವಾರು ಮತದಾರರ ನೊಂದಣಾಧಿಕಾರಿ, ಸಹಾಯಕ ಮತದಾರರ ನೊಂದಣಾಧಿಕಾರಿ, ಬಿ.ಎಲ್‌.ಎ.ಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next