Advertisement

ಬಾರ್‌-ರೆಸ್ಟೋರೆಂಟ್ ‌ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ

05:59 PM May 13, 2020 | Naveen |

ಕಲಬುರಗಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜಿಲ್ಲೆಯ 124 ಸನ್ನದು(ಸಿಎಲ್‌-4,ಸಿಎಲ್‌-9 ಮತ್ತು ಸಿಎಲ್‌-7)ಗಳಲ್ಲಿ ಈಗಾಗಲೇ ದಾಸ್ತಾನಿರುವ ಮದ್ಯ ಮಾರಾಟವಾಗದೇ ಉಳಿದಿರುವ ಮದ್ಯ ಮತ್ತು ಬಿಯರ್‌ಗಳ ದಾಸ್ತಾನು ಖಾಲಿಯಾಗುವವರೆಗೆ ಅಥವಾ ಮೇ 17ರ ವರೆಗೆ ಬಾರ್‌ ಮತ್ತು ರೆಸ್ಟೋರೆಂಟ್‌ ತೆರೆದು ಷರತ್ತಿಗೊಳಪಟ್ಟಂತೆ ಮಾರಾಟ ಮಾಡುವಂತೆ ಜಿಲ್ಲಾಧಿಕಾರಿ ಶರತ್‌ ಬಿ. ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ.

Advertisement

ಮದ್ಯದ ಅಂಗಡಿಗಳು ಪ್ರತಿದಿನ ಬೆಳಗ್ಗೆ 9:00ರಿಂದ ಸಂಜೆ 7:00ರ ವರೆಗೆ ಮದ್ಯ ಮಾರಾಟ ಮಾಡಬೇಕು. ಅಂಗಡಿಯಲ್ಲಿ ಕೇವಲ 5 ಜನರಿಗೆ ಮಾತ್ರ ಇರುವಂತೆ ನೋಡಿಕೊಳ್ಳಬೇಕು. ಜೊತೆಗೆ 6 ಅಡಿಗಿಂತ ಕಡಿಮೆಯಿಲ್ಲದಂತೆ ಸಾಮಾಜಿಕ ಅಂತರ ಪಾಲನೆ ಮಾಡಬೇಕು.ಅಂಗಡಿಯಲ್ಲಿನ ನೌಕರರು ಹಾಗೂ ಮದ್ಯ ಖರೀದಿಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸ್ಯಾನಿಟೈಸರ್‌ ಬಳಸಬೇಕು ಎಂದು ಸೂಚಿಸಿದ್ದಾರೆ.

ಚಿಂಚೋಳಿ ತಾಲೂಕು ಕೋಡ್ಲಿ ಗ್ರಾಮದ ಮೇ| ಜೈ ಭವಾನಿ ಲಾಡ್ಜಿಂಗ್‌ ಬೋರ್ಡಿಂಗ್‌ ಸಿಎಲ್‌.-7 (ಸನ್ನದು) ಮದ್ಯದ ಅಂಗಡಿ ಕಂಟೇನ್ಮೆಂಟ್‌ ಝೋನ್‌ ವ್ಯಾಪ್ತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next