Advertisement
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನೇಮಕ ಮಾಡಿದ್ದು, ಈ ಕುರಿತು ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯದ ಅಧೀನ ಕಾರ್ಯದರ್ಶಿ ಸಿ.ಪಿ ರತ್ನಾಕರನ್ ಅಧಿಸೂಚನೆ ಹೊರಡಿಸಿದ್ದಾರೆ.
Related Articles
Advertisement
ಕಳೆದ ಜುಲೈ 16 ರ ಉದಯವಾಣಿ ಯಲ್ಲಿ ವಾರದೊಳಗೆ ಸಿಯುಕೆಗೆ ಪ್ರೊ ಬಿ. ಸತ್ಯನಾರಾಯಣ ಕುಲಪತಿಗಳಾಗಿ ನೇಮಕವಾಗಲಿದ್ದಾರೆ ಎಂದು ವಿಶೇಷ ವರದಿ ಮಾಡಲಾಗಿತ್ತು. ವರದಿಯಂತೆ ವಾರದೊಳಗೆ ನೇಮಕವಾಗಿದೆ.
ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪರಿಸರ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಪ್ರೊ.ಸತ್ಯನಾರಾಯಣ ಅವರು, 31 ಸಂಶೋಧನಾ ವರದಿಗಳನ್ನು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ನಿಯತಕಾಲಿಕದಲ್ಲಿ ಪ್ರಕಟಿಸಿದ್ದಾರೆ.
ಐವರು ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಮಾರ್ಗದರ್ಶನ ಪೂರ್ಣಗೊಳಿಸಿದ್ದು, ಇನ್ನೂ ಎಂಟು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.
ಸಿಯುಕೆಯಲ್ಲಿ ಇವರ ಅವಧಿ ಗರಿಷ್ಠ 5 ವರ್ಷ ಅಥವಾ 70 ವರ್ಷ ವಯೋಮಿತಿಯವರೆಗೆ ಇರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
2009-10 ಆರಂಭಗೊಂಡಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಪ್ರಥಮವಾಗಿ ಪ್ರೊ. ಎಂ. ಎ ಪಠಾಣ್ ಕುಲಪತಿಯಾದರೆ ನಂತರ ಎಸ್.ಎಸ್. ಮೂರ್ತಿ ಎರಡನೇ ಹಾಗೂ ಪ್ರೊ.ಎಚ್. ಎಂ ಮಹೇಶ್ವರಯ್ಯ ಮೂರನೇ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಈಗ ಸತ್ಯನಾರಾಯಣ ಸಿಯುಕೆಗೆ ನಾಲ್ಕನೇ ಕುಲಪತಿಯಾಗಿದ್ದಾರೆ.
ಇದನ್ನೂ ಓದಿ : ಹಳಿ ಮೇಲೆ ನಿಂತ ಮಳೆ ನೀರು : ಸಾಗರದಿಂದ ಹೊರಡಲಿದೆ ತಾಳಗುಪ್ಪ-ಮೈಸೂರು ರೈಲು