ಕಲಬುರಗಿ : ಜಿಲ್ಲೆಯ ಚಿಂಚೋಳಿ ತಾಲೂಕಿನ ಕುಂಚಾವರಂ ಗಡಿ ಪ್ರದೇಶದಲ್ಲಿರುವ ಶಾದಿಪುರ ಗ್ರಾಮ ಮತ್ತು ತಾಂಡಾಗಳಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಶಾದಿಪುರ ಕೆರೆಯ ಕೋಡಿ ಒಡೆದು ಅಪಾರ ಪ್ರಮಾಣದ ನೀರು ಬೆಳೆ ನಾಶವಾಗಿದೆ.
ಶಾದಿಪುರ ಸುತ್ತಮುತ್ತ ನಿನ್ನೆ ಮಧ್ಯಾಹ್ನವೇ ಬಿರುಗಾಳಿ ಮತ್ತು ಸಿಡಿಲು ಮಿಂಚಿನ ಹಾಗೂ ಗುಡುಗಿನ ಆರ್ಭಟ ದಿಂದ ಮಳೆಯಾಗಿತ್ತು. ಶಾದಿಪುರ ಕೆರೆಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದು ಪರಿಣಾಮವಾಗಿ ಕಿರಗಿ ನಿರ್ಮಿಸಿದ ಕುಡಿವ ನೀರಿನ ರಭಸಕ್ಕೆ ಒಡೆದು ಕೊಚ್ಚಿಕೊಂಡು ಹೋಗಿದೆ.
ಇದರಿಂದಾಗಿ ಕೆರೆಯ ಕೆಳಭಾಗದಲ್ಲಿ ಜಮೀಲ್ ಬೆಳೆದ ಕಬ್ಬು ಹೆಸರು ಉದ್ದು ತೊಗರಿ ಬೆಳೆಯು ಸಂಪೂರ್ಣ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ ಎಂದು ಗ್ರಾಮದ ಮುಖಂಡ ಹೇಮಂತ್ ಕುಮಾರ್ ತಿಳಿಸಿದ್ದಾರೆ. ಕೆರೆ ಕೋಡಿ ಹಗಲಲ್ಲಿ ಒಡೆದು ಹೋಗಿದ್ದರೆ ಕೂಲಿ ಕೆಲಸಕ್ಕೆ ಹೋಗಿದ್ದ ಅನೇಕರು ನೀರಲ್ಲಿ ಕೊಚ್ಚಿಹೋಗುವ ಸಂಭವವಿತ್ತು ಅದೃಷ್ಟವಶಾತ್ ರಾತ್ರಿಯಲ್ಲಿ ಕೆರೆಯ ಕೋಡಿ ಒಡೆದು ಭಾರಿ ಅನಾಹುತ ತಪ್ಪಿದೆ ಎಂದು ಗ್ರಾಮಸ್ಥರು ತಿಳಿಸಿದರು.
ಶಾದಿಪೂರ್ ಕೆರೆ ಪ್ರದೇಶಕ್ಕೆ ಇದುವರೆಗೂ ಯಾವ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿಲ್ಲ ಎಂದು ಜೆಡಿಎಸ್ ಮುಖಂಡ ಸುರೇಂದ್ರ ಆರೋಪಿಸಿದ್ದಾರೆ.
ಇದನ್ನೂ ಓದಿ : ಸಾವರ್ಕರ್ ಮೆರವಣಿಗೆ ಮಾಡಿದರೆ ನಾವು ಕಿತ್ತೂರು ಚೆನ್ನಮ್ಮ ಯಾತ್ರೆ ಮಾಡ್ತೇವೆ :ಎಂ.ಬಿ.ಪಾಟೀಲ