Advertisement

ತಹಶೀಲ್ದಾರ್‌ ಹಲ್ಲೆ ಪ್ರಕರಣ : ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹ

11:33 AM Jan 31, 2022 | Team Udayavani |

ಕಲಬುರಗಿ : ಬೀದರ ಜಿಲ್ಲೆಯ ಹುಮನಾಬಾದ ತಹಶೀಲ್ದಾರ್‌ ಡಾ| ಪ್ರದೀಪ ಹಿರೇಮಠ ಅವರ ಮೇಲೆ ಹಲ್ಲೆ ಮಾಡಿದವರ ಮೇಲೆ ಗೂಂಡಾ ಕಾಯ್ದೆ ಹಾಕಿ, ಕಠಿಣ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ವೀರಶೈವ (ಲಿಂಗಾಯತ) ನೌಕರರ ಕಲ್ಯಾಣ ಸಂಘದ ಗೌರವಾಧ್ಯಕ್ಷ ರವೀಂದ್ರ ಶಾಬಾದಿ ಒತ್ತಾಯಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಚೇರಿಗೆ ನುಗ್ಗಿ ಕರ್ತವ್ಯನಿರತ ತಹಶೀಲ್ದಾರ್‌ ಮೇಲೆಯೇ ಹಲ್ಲೆ ಮಾಡಲಾಗಿದೆ. ಅಲ್ಲದೇ, ತಹಶೀಲ್ದಾರ್‌ ಮತ್ತು ಕಚೇರಿಯ 25 ಸಿಬ್ಬಂದಿ ಮೇಲೆ ದೌರ್ಜನ್ಯ ತಡೆ ಕಾಯ್ದೆ (ಅಟ್ರಾಸಿಟಿ)ಯಡಿ ಪ್ರಕರಣ ದಾಖಲಿಸಿದ್ದು ಖಂಡನೀಯವಾಗಿದೆ ಎಂದರು.

ಪ್ರತಿಭಟನೆ ನೆಪದಲ್ಲಿ ಮಾರಣಾಂತಿಕ ಹಲ್ಲೆ ಮಾಡುವುದು, ಅವಾಚ್ಯ ಶಬ್ದಗಳಿದ ನಿಂದಿಸುವುದು ಸರಿಯಲ್ಲ. ಆದ್ದರಿಂದ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಬೃಹತ್‌ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂಘದ ಅಧ್ಯಕ್ಷ ಗುರುಬಸಪ್ಪ ಪಾಟೀಲ, ಪ್ರಮುಖರಾದ ಪ್ರಭುಲಿಂಗ ಮಹಾಗಾಂವಕರ್‌ ಶಿವಲಿಂಗಪ್ಪ ಬಂಡಕ, ಡಾ| ಶ್ರೀಶೈಲ ಘೂಳಿ, ಬಸವರಾಜ ಮೊರಬದ, ಆರ್‌.ಜಿ.ಶೆಟಗಾರ, ಶ್ರೀಧರ ನಾಗನಹಳ್ಳಿ, ಗುರುರಾಜ ಇದ್ದರು.

ಚಿತ್ತಾಪುರ: ಇತ್ತೀಚೆಯ ದಿನಗಳಲ್ಲಿ ಸರ್ಕಾರಿ ನೌಕರರ ಮೇಲೆ ಹಲ್ಲೆಯಂತ ಪ್ರಕರಣಗಳು ಹೆಚ್ಚಾಗುತ್ತಿದ್ದು, ನೌಕರರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬಳೂಂಡಗಿ ಒತ್ತಾಯಿಸಿದ್ದಾರೆ.

Advertisement

ಇದನ್ನೂ ಓದಿ : ಸನ್ಮಾರ್ಗದ ನಡೆಯಿಂದ ಪುಣ್ಯ ಸಂಪಾದನೆ: ವಿದ್ವಾನ್‌ ಶ್ರೀ ರಾಮಚಂದ್ರ ಬಾಯಾರಿ

ಪಟ್ಟಣದ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಸರ್ಕಾರ ಈ ಪ್ರಕರಣ ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ತಹಶೀಲ್ದಾರ್‌ ಉಮಾಕಾಂತ ಹಳ್ಳೆಗೆ ಮನವಿ ಸಲ್ಲಿಸಿದರು. ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಸುನೀಲ ಯನಗುಂಟಿಕರ್‌, ಗ್ರಾಮ ಲೇಖಾಧಿ ಕಾರಿಗಳ ಸಂಘದ ಅಧ್ಯಕ್ಷ ಮೋತಿಲಾಲ ಚವ್ಹಾಣ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರ, ಬಸಪ್ಪ ಎಂಬತ್ನಾಳ, ಪರಶುರಾಮ, ಶರಣು ಸಾಲೊಟಗಿ, ಮಧುಸೂಧನ ಘಾಳೆ, ರಾಜೀವಕುಮಾರ,
ಮೈಮುನ್ನಿಸಾಬೇಗಂ, ಭೀಮರಾಯ ಪತ್ತಾರ, ಅಬ್ದುಲ್‌ ಸಲಿಂ, ಸೊಮಶೇಖರ, ಹುಸೇನ ಪಾಶಾ, ಬಸವರಾಜ ಪಾಟೀಲ, ಶ್ರೀಧರ ರಾಠೊಡ, ನಾಗೇಂದ್ರಪ್ಪ ಕಾಶಿ, ಸುರೇಶ ಸರಾಫ ಇತರರು ಇದ್ದರು.

ಯಡ್ರಾಮಿ: ಬೀದರ ಜಿಲ್ಲೆಯ ಹುಮನಾಬಾದ ತಹಶೀಲ್ದಾರ್‌ ಡಾ| ಪ್ರದೀಪ ಹಿರೇಮಠ ಮೇಲೆ ಉಂಟಾದ ಹಲ್ಲೆ ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಶನಿವಾರ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಘಟಕದ ಅಧ್ಯಕ್ಷ ಬಲವಂತ್ರಾಯ ಬಿರಾದಾರ ಮಾತನಾಡಿ, ಸರ್ಕಾರಿ ನೌಕರರು ನಿರ್ಭಯವಾಗಿ ಕರ್ತವ್ಯ ನಿರ್ವಹಿಸುವಂತ ವಾತಾವರಣ ನಿರ್ಮಿಸಲು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಭೀಮರಾಯ ಬಿಳವಾರ, ಖಜಾಂಚಿ ನಾಗೇಂದ್ರ ಗುಂಡಗುರ್ತಿ, ಸತೀಶ ರಾಠೊಡ, ಈರಣ್ಣ ಗಿಡ್ಡೆಪ್ಪಗೋಳ, ಉಪ ತಹಶೀಲ್ದಾರ್‌ ನಾಗೇಂದ್ರಪ್ಪ, ಸತ್ಯಪ್ರಸಾದ, ರೇಣುಕಾ, ಗಿರೀಶ ಉಪ್ಪಾರ, ಸುರೇಶ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next