Advertisement

ಶೇಕಡಾವಾರು ಮತ‌ ಯಾರಿಗೆ ಲಾಭ?

09:53 AM Apr 26, 2019 | Team Udayavani |

ಕಲಬುರಗಿ: ಲೋಕಸಭೆ ಚುನಾವಣೆ ಮುಗಿದಿದೆ. ಈಗೇನಿದ್ದರೂ ಶೇಕಡಾವಾರು ಮತದಾನ ಹಾಗೂ ಇನ್ನಿತರ ಅಂಶಗಳ ಆಧಾರದ ಆತ್ಮಾವಲೋಕನ, ಚರ್ಚೆ ನಡೆದಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಅಫಜಲಪುರ ವಿಧಾನಸಭೆ ಕ್ಷೇತ್ರ ಬಹು ಮುಖ್ಯ ಪಾತ್ರ ಪಡೆದಿದೆ. ಏಕೆಂದರೆ ಕಳೆದ ಹಲವಾರು ಚುನಾವಣೆಗಳಿಂದ ಬಿಜೆಪಿಯೇ ಮೇಲುಗೈ ಸಾಧಿಸುತ್ತಾ ಬಂದಿದೆ.

Advertisement

ಹಿಂದಿನ ಅಂದರೆ 2009 ಹಾಗೂ 2014, ಅಲ್ಲದೇ ಹಿಂದಿನ ಲೋಕಸಭೆ ಚುನಾವಣೆಗಳಲ್ಲದೇ ಹಿಂದಿನ ಚುನಾವಣೆಯಲ್ಲೂ ಬಿಜೆಪಿ ಕಾಂಗ್ರೆಸ್‌ಗಿಂತ ಹೆಚ್ಚಿಗೆ ಮತ ಪಡೆದಿದೆ. 2009ರಲ್ಲಿ ಬಿಜೆಪಿ ಕಾಂಗ್ರೆಸ್‌ಗಿಂತ 13400 ಹಾಗೂ 2014ರಲ್ಲಿ 4125 ಮತಗಳು ಹೆಚ್ಚಿಗೆ ಬಂದಿದ್ದವು. ಅದೇ ರೀತಿ 2009ರಲ್ಲಿ ಶೇ. 48.31, 2014ರಲ್ಲಿ ಶೇ. 56.89 ಮತ್ತು ಪ್ರಸ್ತುತ ಶೇ. 62.54 ಮತದಾನವಾಗಿದೆ. ಹಿಂದಿನ ಚುನಾವಣೆಗಿಂತ ಶೇ. ಆರು ಪ್ರಮಾಣದಷ್ಟು ಹೆಚ್ಚಳವಾಗಿರುವುದು ಯಾರಿಗೆ ಅನುಕೂಲ ಎನ್ನುವ ಕುರಿತು ಈಗ ಕ್ಷೇತ್ರದಾದ್ಯಂತ ಚರ್ಚೆ ನಡೆದಿದೆ.

ಹೆಚ್ಚಿಗೆ ಮತದಾನ ಆಗಿರುವುದು ಬಿಜೆಪಿಗೆ ಅನುಕೂಲ ಎನ್ನುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಆದರೆ ಕಾಂಗ್ರೆಸ್‌ ಪಕ್ಷದವರು ಕನಿಷ್ಠ ಐದು ಸಾವಿರ ಮತಗಳಾದರೂ ಲೀಡ್‌ ಆಗುತ್ತದೆ ಎನ್ನುತ್ತಾರೆ. ಬಿಜೆಪಿಯವರು ಈ ಹಿಂದಿನ ಚುನಾವಣೆಗಳಲ್ಲಿ ಗಳಿಸಿದ ಮತಗಳಿಗಿಂತ ಕನಿಷ್ಠ ನೂರಾದರೂ ಈ ಸಲ ಲೀಡ್‌ ಪಡೆಯವುದು ನಿಶ್ಚಿತ ಎನ್ನುತ್ತಿದ್ದಾರೆ. ಅಂದರೆ 15ರಿಂದ 18 ಸಾವಿರ ಲೀಡ್‌ ಬರಬಹುದು ಎನ್ನುತ್ತಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮಾಲೀಕಯ್ಯ ಗುತ್ತೇದಾರ ಹಾಗೂ ಎಂ.ವೈ. ಪಾಟೀಲ ಜೆಡಿಎಸ್‌ದಿಂದ ಶಾಸಕರಾದ ಸಂದರ್ಭದಲ್ಲೂ ಬಿಜೆಪಿಯೇ ಲೀಡ್‌ ಪಡೆಯುತ್ತಾ ಬಂದಿದೆ.

ಅಫಜಲಪುರ ಪಟ್ಟಣದಲ್ಲಿ ಯಾವಾಗಲೂ ಪ್ರಸ್ತುತ ಕ್ಷೇತ್ರದ ಶಾಸಕರಾದ ಎಂ.ವೈ. ಪಾಟೀಲ ಅವರಿಗೆ ಯಾವಾಗಲೂ ಲೀಡ್‌ ಬಂದಿವೆ. ಆದರೆ ಇದೇ ಪ್ರಥಮ ಸಲ ಬಿಜೆಪಿಗೆ ಲೀಡ್‌ ಆಗಲಿದೆ ಎನ್ನಲಾಗುತ್ತಿದೆ. ಹೀಗಾಗಿ ಕಲಬುರಗಿ ಜಿಲ್ಲೆಯಾದ್ಯಂತ ಅಫಜಲಪುರ ಕ್ಷೇತ್ರದಲ್ಲಿ ಯಾವ ಪಕ್ಷಕ್ಕೆ ಎಷ್ಟು ಮತಗಳು ಬರುತ್ತವೆ ಎನ್ನುವುದು ಗಮನ ಸೆಳೆದಿದೆ.

ಅಫಜಲಪುರ ವಿಧಾನಸಭೆ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಯಾವಾಗಲೂ ಬಿಜೆಪಿಗೆ ಲೀಡ್‌ ಆಗುತ್ತಾ ಬಂದಿದೆ. ಈ ಸಲ ಕಾಂಗ್ರೆಸ್‌ಗೆ ಲೀಡ್‌ ಬರಬಹುದೆಂದು ನಿರೀಕ್ಷಿಸಲಾಗಿದೆ. ಆದರೆ ಹಿಂದಿನ ಫಲಿತಾಂಶ ಹಾಗೂ ಈಗಿನ ತಾಲೂಕಿನ ಮತದಾರರ ಒಲವು ನೋಡಿದರೆ ಈ ಸಲವೂ ಬಿಜೆಪಿಗೆ ಸ್ವಲ್ಪ ಲೀಡ್‌ ಬರಬಹುದು ಎಂದು ಅಂದಾಜಿಸಲಾಗಿದೆ.
•ಮಹಾಂತೇಶ ಪಾಟೀಲ ಸೊನ್ನ,
ಅಫಜಲಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ

Advertisement

ಅಫಜಲಪುರದಲ್ಲಿ ಬಿಜೆಪಿ ಭಾರಿ ಲೀಡ್‌ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ, ನಿತೀನ ಗುತ್ತೇದಾರ ಹಾಗೂ ಪಕ್ಷದ ಇತರ ಮುಖಂಡರ ಮತ್ತು ಕಾರ್ಯಕರ್ತರೂ ಸಂಘಟನಾತ್ಮಕವಾಗಿ ಕೆಲಸ ಮಾಡಿರುವುದು ಜತೆಗೆ ಪ್ರಧಾನಿ ನರೇಂದ್ರ ಮೋದಿ ಹವಾ ಲೀಡ್‌ನ್ನು ಈಗ ಮತ್ತಷ್ಟು ದಾಖಲೆ ನಿರ್ಮಿಸಲಿದೆ. ಇದೇ ಲೀಡ್‌ ಐತಿಹಾಸಿಕ ಗೆಲುವಿಗೆ ಕಾರಣವಾಗಲಿದೆ ಎನ್ನುವ ವಿಶ್ವಾಸ ಹೊಂದಲಾಗಿದೆ.
•ಸೂರ್ಯಕಾಂತ ನಾಕೇದಾರ,
ಅಧ್ಯಕ್ಷರು, ಬಿಜೆಪಿ ಅಫಜಲಪುರ ತಾಲೂಕು ಘಟಕ

ಅಫಜಲಪುರದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಧರ್ಮ ಪಾಲಿಸಲಾಗಿದೆ. ಕ್ಷೇತ್ರದ ಶಾಸಕರಾದ ಎಂ.ವೈ. ಪಾಟೀಲ ಅವರೊಂದಿಗೆ ಕ್ಷೇತ್ರದಾದ್ಯಂತ ಸುತ್ತಾಡಿ ಮತದಾರರಿಗೆ ಸರ್ಕಾರ ಸಾಧನೆಗಳನ್ನು ಮನವರಿಕೆ ಮಾಡಲಾಗಿದೆ. ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅಭಿವೃದ್ಧಿ ಕಾರ್ಯಗಳನ್ನು ತಿಳಿ ಹೇಳಲಾಗಿದೆಯಾದರೂ ಜನರ ಒಲವು ಬಿಜೆಪಿ ಕಡೆ ತೋರಿರುವುದು ಚುನಾವಣೆ ನಂತರ ತಮ್ಮ ಅರಿವಿಗೆ ಬಂದಿದೆ.
ರಾಜಕುಮಾರ ಬಡದಾಳ,
ಜೆಡಿಎಸ್‌ ತಾಲೂಕಾಧ್ಯಕ್ಷರು, ಅಫಜಲಪುರ

ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next