Advertisement

ಭ್ರಷ್ಟಾಚಾರ ಆರಂಭವಾಗಿದ್ದೇ ಯಡಿಯೂರಪ್ಪರಿಂದ

12:44 PM Apr 21, 2019 | Team Udayavani |

ಯಾದಗಿರಿ: ರಾಜ್ಯ ರಾಜಕೀಯದಲ್ಲಿ ಭ್ರಷ್ಟಾಚಾರ ಆರಂಭವಾಗಿದ್ದೇ ಬಿ.ಎಸ್‌.ಯಡಿಯೂರಪ್ಪ ಅವರಿಂದ ಎಂದು ಗುರುಮಠಕಲ್‌ ಜೆಡಿಎಸ್‌ ಶಾಸಕ ನಾಗನಗೌಡ ಕಂದಕೂರ ಹೇಳಿದರು.

Advertisement

ಕಲಬುರಗಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಗುರುಮಠಕಲ್‌ ವಿಧಾನಸಭೆ ಕ್ಷೇತ್ರದ ಹತ್ತಿಕುಣಿಯಲ್ಲಿ ಮೈತ್ರಿ ಅಭ್ಯರ್ಥಿ ಡಾ|
ಮಲ್ಲಿಕಾರ್ಜುನ ಖರ್ಗೆ ಪರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಹಿಂದೆ ಜೆಡಿಎಸ್‌ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಸಣ್ಣ ತಪ್ಪಿನಿಂದ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಬಳ್ಳಾರಿ ಹಾಳು ಮಾಡಿ ಭ್ರಷ್ಟಾಚಾರ ಎಸಗಿದ ಕೀರ್ತಿ ಯಡಿಯೂರಪ್ಪರದ್ದು. ತಮ್ಮ ಮಗನ ಪ್ರೇರಣಾ ಟ್ರಸ್ಟ್‌ ಹೆಸರಿಗೆ 20 ಕೋಟಿ ರೂ. ಮೊತ್ತದ ಚೆಕ್‌ ಮೂಲಕ ಲಂಚ ಪಡೆದು ಯಡಿಯೂರಪ್ಪ ಜೈಲು ಸೇರಿದ್ದರು. ಹಾಗಾಗಿ ಬಿಜೆಪಿ ನಮಗೆ ಬೇಕಾ ಎನ್ನುವುದನ್ನು ಮತದಾರರ ನಿರ್ಣಯಿಸಬೇಕು ಎಂದು ಹೇಳಿದರು.

ಬಿಜೆಪಿ ಈಗ ಖರ್ಗೆ ವಿರುದ್ಧ ಬಟ್ಟೆ ಹಾವು ಬಿಟ್ಟಿದೆ. ಖರ್ಗೆ ಸಾಕಷ್ಟು ಚುನಾವಣೆ ಎದುರಿಸಿದ್ದಾರೆ. ಇಂತಹ ಎಷ್ಟು ಜನರನ್ನು ನೋಡಿರಲಿಕ್ಕಿಲ್ಲ. ಇದರಿಂದ ಹೆದರಲ್ಲ. ಖರ್ಗೆ ಅವರ ಅಭಿವೃದ್ಧಿ ಕೆಲಸ ನೋಡಿ ಮತ ನೀಡಿ ಪ್ರಚಂಡ ಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಕ್ಷೇತ್ರದಲ್ಲಿ ನಾಗನಗೌಡ ಅವರು ಪ್ರಚಾರ ನಡೆಸಲ್ಲ ಎಂದು ಸಾಕಷ್ಟು ಊಹಾಪೋಹಗಳು ಎದ್ದಿದ್ದವು. ಆದರೆ, ಈಗ ಮೈತ್ರಿ ಅಭ್ಯರ್ಥಿ ಖರ್ಗೆ ಪರ ಪ್ರಚಾರ ನಡೆಸುತ್ತಿರುವುದು ಬೆರಳೆಣಿಕೆಯಷ್ಟು ಜನರಿಗೆ ತೊಂದರೆಯಾಗಿರಬಹುದು.

Advertisement

ಆದರೆ ಸಾಕಷ್ಟು ಜನರಿಗೆ ಸಂತಸ ಮೂಡಿಸಿದೆ ಎಂದು ನಂಬಿದ್ದೇನೆ ಎಂದು ಹೇಳಿದರು. ಸಮಾಜ ಕಲ್ಯಾಣ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿ, ಉತ್ತಮ ಸಮಾಜ ಕಟ್ಟಲು ಕೆಲವು ಶಕ್ತಿಗಳನ್ನು ದೂರವಿಡಲು ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಿದೆ. ಹಿಂದೆ
ಕಾಂಗ್ರೆಸ್‌ ಕೋಟೆಯಾಗಿದ್ದ ಗುರುಮಠಕಲ್‌ನಲ್ಲಿ ಈಗ ಜೆಡಿಎಸ್‌ನ ನಾಗನಗೌಡ ಕಂದಕೂರ ಶಾಸಕರಾಗಿದ್ದಾರೆ. ಕಂದಕೂರ ಪ್ರಚಾರ ನಡೆಸಲ್ಲ. ಇನ್ನೇನು ಗುರುಮಠಕಲ್‌ ದಿಂದಲೇ ಖರ್ಗೆ ಸೋಲುತ್ತಾರೆ ಎಂದು ಹಗಲು ಕನಸು ಕಾಣುತ್ತಿದ್ದವರು ಎದೆ ಒಡೆದುಕೊಂಡಿದ್ದಾರೆ ಎಂದು
ಹೇಳಿದರು.

ಬಿಜೆಪಿ ದೇಶ ಮೊದಲು ಎಂದು ದೇಶದ ಸೈನಿಕರ ಹೆಸರಿನಲ್ಲಿ ರಾಜಕೀಯ ಮಾಡಿದೆ. ಐದು ವರ್ಷದಲ್ಲಿ
ಮೋದಿ ಸರ್ಕಾರ ಏನೂ ಮಾಡಿಲ್ಲ. ದೇಶಕ್ಕಾಗಿ ಹೋರಾಡಿ ಕಾಂಗ್ರೆಸ್‌ನವರು ಜೈಲಿಗೆ ಸೇರಿದರೆ ಭ್ರಷ್ಟಾಚಾರ ಮಾಡಿ ಬಿಜೆಪಿಗರು ಜೈಲಿಗೆ ಹೋಗಿರುವ ವಿಚಾರ ನಿಮಗೆಲ್ಲ ಗೊತ್ತು ಎಂದು ಹೇಳಿದರು.
ಡಾ| ಉಮೇಶ ಜಾಧವ ಸ್ಪರ್ಧೆಯಿಂದ ಖರ್ಗೆ ಅವರಿಗೆ
ನಡುಕ ಶುರುವಾಗಿದೆ ಎಂದು ಕೆಲವರು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಖರ್ಗೆ ಅವರಿಂದ ಸಂಸತ್‌ನಲ್ಲಿ ಮೋದಿಗೆ ನಡುಕ ಹುಟ್ಟುತ್ತದೆ. ಖರ್ಗೆಗೆ ನಡುಕ ಹುಟ್ಟಲು ಜಾಧವ ಏನು ತೀಸ್ಮಾರ್ಕ್‌ನಾ ಎಂದು ಹೇಳಿದರು.

ಜನರು ಮೂರ್ಖರಲ್ಲ. ಯಾವ ಎತ್ತು ಗಟ್ಟಿ ಇದೆಯೋ ಅವರಿಗೆ ಮತ ಹಾಕುತ್ತಾರೆ. ಕಲಬುರಗಿಯಲ್ಲಿ ಜೋಡಿತ್ತುಗಳಿದ್ದರೆ ಅದು ದಿ| ಧರ್ಮಸಿಂಗ್‌ ಮತ್ತು ಖರ್ಗೆ. ಅವರನ್ನು ಹೊರತುಪಡಿಸಿ ಹಿಂದೆಯೂ ಆಗಲ್ಲ. ಮುಂದೆನೂ
ಇಲ್ಲ ಎಂದು ಹೇಳಿದರು. ಗುತ್ತೇದಾರ- ಚಿಂಚನಸೂರ ಸಂತೆಯಲ್ಲಿಯೂ ಮಾರಾಟವಾಗದ ಎತ್ತುಗಳು ಎಂದು ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next