Advertisement

ಕಾಂಗ್ರೆಸ್‌ ನಿಂದ ಒಡೆದಾಳುವ ನೀತಿ: ಅಶೋಕ

11:34 AM Apr 21, 2019 | Team Udayavani |

ಹುಣಸಗಿ: ಜಾತಿ ಜಾತಿಗಳ ಮತ್ತು ಧರ್ಮ ಧರ್ಮಗಳ ನಡುವೆ ಕಿಚ್ಚು ಹಚ್ಚಿ ಒಡೆದು ಆಳುವ ಕಾಂಗ್ರೆಸ್‌ ಪಕ್ಷಕ್ಕೆ ಏನಾದರು ಮತ ಕೇಳುವ ನೈತಿಕತೆ ಇದೆಯೇ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ ಪ್ರಶ್ನಿಸಿದರು.

Advertisement

ಪಟ್ಟಣದಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ರಾಯಚೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಪರ ಮತಯಾಚಿಸಿ ಅವರು ಮಾತನಾಡಿದರು.

ದೇಶದ ಸುಭದ್ರ ಸರಕಾರಕ್ಕಾಗಿ ಹಾಗೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ನಿಮ್ಮ ಒಂದು ಮತ ಅವಶ್ಯಕತೆ ಇದೆ. ಆದ್ದರಿಂದ ಪ್ರತಿಯೊಬ್ಬರು ಕಮಲ ಗುರುತಿಗೆ ಮತ ನೀಡುವ ಮೂಲಕ ರಾಯಚೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜಾ ಅಮರೇಶ್ವ ನಾಯಕ ಅವರಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

60 ವರ್ಷದ ಕಾಂಗ್ರೆಸ್‌ ಆಡಳಿತದಲ್ಲಿ ವಿಶ್ವ ಮೆಚ್ಚುವಂತಹ ಕಾರ್ಯ ಮಾಡಿಲ್ಲ. ರೈತರ ನೆರವಿಗೆ ಬರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಮತದಾರರು ಕಾಂಗ್ರೆಸ್‌ ಪಕ್ಷದ ಹುಸಿ ಮಾತಿಗೆ ಮರಳಾಗಬಾರದು. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೇ ಬಿಜೆಪಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಶಾಸಕ ನರಸಿಂಹನಾಯಕ (ರಾಜುಗೌಡ) ಮಾತನಾಡಿ, ಕಾರ್ಯಕರ್ತರೇ ಪಕ್ಷದ ಶಕ್ತಿ. ದೇಶದ ಏಳ್ಗೆಗೆ ಮೋದಿ ಅವರು ಮತ್ತೂಮ್ಮೆ ಪ್ರಧಾನಿಯಾಗಲು ನಿಮ್ಮ ಒಂದು ಮತ ಅತಿ ಮುಖ್ಯ ಎಂದು ಹೇಳಿದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನಪರ ಯೋಜನೆ ಜಾರಿಗೆ ತಂದಿದ್ದಾರೆ. ಬಿಜೆಪಿ ಸರ್ಕಾರ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯ ಮಾಡಿದೆ. ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರಿಗೆ ಮತ ನೀಡುವ ಮೂಲಕ ಬಿಜೆಪಿ ಗೆಲುವಿಗೆ ಕಾರಣರಾಗಬೇಕು ಎಂದು ಹೇಳಿದರು.

Advertisement

ವಸತಿ ಮಾಜಿ ಖಾತೆ ಸಚಿವ ವಿ. ಸೋಮಣ್ಣ ಮಾತನಾಡಿ, ಈ ಭಾಗದ ಜೋಡೆತ್ತುಗಳು ಬಿಜೆಪಿ ಅಭ್ಯರ್ಥಿಗೆ ಅತಿ ಹೆಚ್ಚು ಅಂತರ ಮತ ನೀಡುವ ಮೂಲಕ ಬಿಜೆಪಿ ಗೆಲುವಿಗೆ ಕಾರಣರಾಬೇಕು. ಮತದಾರರು ಯಾವುದೇ ಕಾರಣಕ್ಕೂ ನಿಮ್ಮ ಮತ ಮಾರಿಕೊಳ್ಳಬೇಡಿ. ನಿಮ್ಮ ಒಂದು ದೇಶದ ಭವಿಷ್ಯ ರೂಪಿಸಲಿದೆ ಎಂದು ಹೇಳಿದರು.

ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಮಾತನಾಡಿ, ಈ ಚುನಾವಣೆ ಭಾರತ ಗೆಲ್ಲುವ ಚುನಾವಣೆ ಮತ್ತು ಬಡವರಿಗೆ ಬಲ ಕೊಡುವ ಚುನಾವಣೆ. ಮೋದಿಯಂತೆ ನಿಮಗೇನಾದರು ಸರ್ಜಿಕಲ್‌ ಸ್ಟ್ರೈಕ್
ಮಾಡಬೇಕು ಎಂಬ ಹಂಬಲವಿದ್ದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಅವರ ಮನೆಗೆ ತೆರಳಿ ಬಿಜೆಪಿ ಮತಗಳಾಗಿ ಪರಿವರ್ತಿಸಿ. ಇದು ನೀವು ದೇಶ ಸೇವೆಗೆ ನೀಡುವ ಕಾಣಿಕೆ ಎಂದು ಹೇಳಿದರು.

ದೇವದುರ್ಗ ಶಾಸಕ ಶಿವನಗೌಡ ನಾಯಕ ಮತ್ತು ಲಿಂಗಸುಗೂರು ಮಾಜಿ ಶಾಸಕ ಮಾನಪ್ಪ ವಜ್ಜಲ್‌ ಮಾತನಾಡಿದರು. ದೇವತ್ಕಲ್‌, ಅರಕೇರಾ ಮುಂತಾದ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿದರು. ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಅನ್ವರಿ, ಜಿಪಂ ಸದಸ್ಯ ಬಸವರಾಜಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಹಣಮಪ್ಪನಾಯಕ ತಾತ, ಜಿಪಂ ಮಾಜಿ ಸದಸ್ಯ ಎಚ್‌.ಸಿ. ಪಾಟೀಲ, ಬಿಜೆಪಿ ತಾಲೂಕು ಧ್ಯಕ್ಷ ಅಮರಣ್ಣ ಹುಡೇದ, ಎಪಿಎಂಸಿ ಸದಸ್ಯ ದೇವಣ್ಣ
ಮಲಗಲದಿನ್ನಿ, ಸಂಗನಗೌಡ ಪಾಟೀಲ ವಜ್ಜಲ, ವೀರೇಶ ಚಂಚೋಳಿ, ಸಂಗಣ್ಣ ವೈಲಿ, ಯಲ್ಲಪ್ಪ ಕುರಕುಂದಿ, ಮರಲಿಂಗಪ್ಪ ಕರ್ನಾಳ, ದೊಡ್ಡ ದೇಸಾಯಿ ದೇವಗೋನಾಲ, ಶಾಂತಿಲಾಲ ರಾಠೊಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next